ವಿಜಯಪುರ: ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ, ಯುವಕರಲ್ಲಿ ದೇಶಾಭಿಮಾನದ ಜೊತೆಗೆ ಶಿಸ್ತು, ಒಳ್ಳೆಯ ಆಚಾರ-ವಿಚಾರಗಳನ್ನು ಬೆಳೆಸುವುದು ಅತೀ ಮುಖ್ಯ ಎಂದು ಧರ್ಮಗುರುಗಳಾದ ಮೌಲಾನಾ ಉಸಿಉಲ್ಲಾ ನುಡಿದರು. Achievement
ನಗರದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಡೆದ ಮೊಹಮ್ಮದಿಯ ನಾಥ್ ಕಮೀಟಿ ವಿಜಯಪುರ ಶಾಖಾ ತಿಕೋಟಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ನಾಥ್ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಕಳಪೆ ಸ್ಪ್ರಿಂಕ್ಲರ್: ಬ್ಲಾಕ್ ಲಿಸ್ಟ್ಗೆ ಸೇರಿಸಲು ರೈತ ಸಂಘ ಒತ್ತಾಯ
ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ, ದೇಶ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ತೊಡಗಬೇಕಿದೆ. ಆದ್ದರಿಂದ ಪ್ರತಿಯೊಬ್ಬ ಯುವಕ ಯುವತಿಯರು ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದರು. ಇಂತಹ ಕಾರ್ಯಕ್ರಮಗಳನ್ನು ಮೇಲಿಂದಮೇಲೆ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಶೈಕ್ಷಣಿಕವಾಗಿ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. Achievement
ಈ ಸಂದರ್ಭದಲ್ಲಿ ನಾತ್ ಕಮಿಟಿ ಅಧ್ಯಕ್ಷರಾದ ಸೈಯ್ಯದ ಗಯ್ಯಾಸ ಪಾಷ್ಯಾ, ವಕ್ಫ ಮಂಡಳಿ ಅಧ್ಯಕ್ಷರಾದ ಡಾ. ಕೌಸರ ಅತ್ತಾರ, ಹಿರಿಯರಾದ ಹಾಜಿಲಾಲ್ ಕೊಟ್ಟಲಗಿ, ಯಾಕೂಬ ಜತ್ತಿ, ಪೀರಪಟೇಲ, ಜಹಾಂಗೀರ ಹಿಪ್ಪರಗಿ, ಜಾಕೀರ ಸುರ್ಕಿ, ಫಯಾಜ ಕಲಾದಗಿ, ಅಲ್ತಾಫ್ ಬಾಗವಾನ, ಇರ್ಫಾನ ಬಾಗವಾನ, ಮುಬಾರಕ ಜಮಖಂಡಿ, ಅಬ್ದುಲನಬಿ ಜಮಾದಾರ, ಸಾಧಿಕ ಜಾನ್ವೇಕರ, ಎ.ಜಿ. ಕೋಲಾರ, ಇಕ್ಬಾಲ್ ಖಾಜಿ, ಹಾಸೀಂ ಕಲಾದಗಿ, ಮುಜಮ್ಮಿಲ್ಲ ಮುಲ್ಲಾ, ಸೈಪ್ ಅವಟಿ ಹಾಗೂ ಸಮೀತಿ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಉಚಿತ: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಈ ಸಂದರ್ಭದಲ್ಲಿ ನಾಥ್ ಸ್ಪರ್ಧೆಯಲ್ಲಿ ಸಿಕ್ಯಾಬ್ ಮಲ್ಲಿಕ ಸಂದಲ ಉರ್ದು ಶಾಲೆಯ ತಿಕೋಟಾ ತಾಲೂಕಿನ ವಿದ್ಯಾರ್ಥಿನಿ ಕುಮಾರಿ ತಂಜಿಲ್ಲಾ ಗೌಂಡಿ ಹಾಗೂ ಗುಲ್ನಾಜ ಬಾಗವಾನ ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನ ಯಾಸ್ಮೀನ ರುದ್ರವಾಡಿ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಹಮೀಸಾ ನಾಗಾರ್ಚಿ ಹಾಗೂ ಸದೀಮಾ ಮುಜಾವರ ಪ್ರಥಮ ಸ್ಥಾನ ಪಡೆದುಕೊಂಡರು. ತಿಕೋಟಾ ತಾಲೂಕಿನ ಸಿಕ್ಯಾಬ್ ಮಲಿಕ ಸಂದಲ ಶಾಲೆಯ ಮುಖ್ಯ ಗುರುಗಳಾದ ಸಿರಾಜ ಜಮಖಂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





