ಕೀಟ ರೋಗ ಭಾದೆ: ಬೆಳೆ ಸಂರಕ್ಷಣೆ ಹೇಗೆ

ಕೀಟ ಬಾದೆ image

ವಿಜಯಪುರ:ಜಿಲ್ಲೆಯಲ್ಲಿ ಸುಮಾರು 4.5ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಅಲ್ಲಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ವಿಜ್ಞಾನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ತೊಗರಿ ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಡಿ.ಡಬ್ಲು ರಾಜಶೇಖರ ಮನವಿ ಮಾಡಿಕೊಂಡಿದ್ದಾರೆ. ಕೀಟ

ಗೊಣ್ಣೆ ಹುಳು ಮಣ್ಣಿನ ಒಂದು ಕೀಟವಾಗಿದ್ದು, ಆರಂಭಿಕ ಹಂತದಲ್ಲಿ ಮರಿಹುಳುಗಳು ಸಾವಯವ ಪದಾರ್ಥದ ಮೇಲೆ ತನ್ನ ಜೀವನ ಚಕ್ರವನ್ನು ಮುಗಿಸುತ್ತವೆ ಆದರೆ ನಂತರದ ಹಂತದಲ್ಲಿ ಅವು ಬೇರುಗಳನ್ನು ಹಾಳು ಮಾಡುತ್ತವೆ. ಬಾಧೆಗೊಳಗಾದ ಸಸ್ಯಗಳು ಒಣಗುತ್ತವೆ ಮತ್ತು ಸುಲಭವಾಗಿ ಕಿತ್ತು ತೆಗೆಯಬಹುದು. ಅಲ್ಲಲ್ಲಿ ಅಂತರ ಬಿಟ್ಟು ಈ ರೋಗ ಬಾಧೆಯಾಗಿದ್ದರೂ ಇಡೀ ಹೊಲವನ್ನೇ ಹಾಳು ಮಾಡುತ್ತದೆ.

ಇದನ್ನೂ ಓದಿ:ರೈತ ಭಾರತ ಪಕ್ಷ: ರೈತರ ಬೇಡಿಕೆಗಳನ್ನು ಈಡೇರಿಸಿ

ಆದ್ದರಿಂದ ಜೈವಿಕ ನಿರ್ವಹಣಾ ಕ್ರಮವಾಗಿ ಮೆಟಾರೈಝಿಯಂ ಅನಿಸೋಪ್ಲಿಯೆ ಶಿಲೀಂದ್ರವನ್ನು ಪ್ರತಿ ಎಕರೆಗೆ 5-10 ಕಿ.ಗ್ರಾಂ (ಬಾಧೆಗನುಸಾರವಾಗಿ) 250-500 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬೆಳೆಯ ಸಾಲಿನಲ್ಲಿ ಹಾಕಿ ಅಥವಾ ರಸಾಯನಿಕವಾದ ಕ್ಲೊರ್ ಪೈರಿಫಾಸ್ 50 ಇ.ಸಿ. 4ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಬುಡದ ಸುತ್ತಲೂ ಭೂಮಿ ನೆನೆಯುವಂತೆ ಹಾಕುವುದರಿಂದ ತೊಗರಿ ಬೆಳೆಯನ್ನು ಸಂರಕ್ಷಿಸಿಕೊಳ್ಳಬಹುದುದು.

ಮುಸುಕಿನ ಜೋಳದಲ್ಲಿ ಲದ್ದಿಹುಳುವಿನ ಬಾಧೆ ಕಂಡು ಬಂದಿದ್ದು, ನಿರ್ವಹನೆಗಾಗಿ 0.2 ಗ್ರಾಂ ಇಮಾಮೆಕ್ಟಿನ್ಪೈಜೋಯೇಟ್ 5 ಎಸ್.ಜಿ. ಅಥವಾ 0.5 ಮಿ.ಲೀ. ಸ್ಪೈನಟೊರಾಮ್ 11.7 ಎಸ್.ಸಿ. ಅಥವಾ 0.2 ಮಿ.ಲೀ ಕ್ಲೋರಾಂಟ್ರಿನಿಪ್ರೋಲ್ ಬೆರೆಸಿ ಸಿಂಪರಣೆ ಮಾಡಬೇಕು. ಬಿ.ಟಿ.ಹತ್ತಿಯಲ್ಲಿ 10 ಗ್ರಾಂ ಮೆಗ್ನೇಷಿಯಂ ಸಲ್ಪೇಟ್ ಮತ್ತು 20 ಗ್ರಾಂ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿAದ ಎಲೆ ಕೆಂಪಾಗುವಿಕೆಯನ್ನು ನಿರ್ವಹನೆ ಮಾಡಬಹುದು.

ಇದನ್ನೂ ಓದಿ:ತಳವಾರ: ಪರಿಶಿಷ್ಟ ಪಂಗಡದವರಿಗೆ ಪ್ರಮಾಣ ಪತ್ರ ವಿತರಿಸಿ

ಬಿ.ಟಿ. ಹತ್ತಿಯಲ್ಲಿ ರಸಹೀರುವ ಕೀಟಗಳಾದ ಜಿಗಿ ಹುಳು, ಥ್ರಿಪ್ಸ್ ನುಸಿ ಮತ್ತು ಹೇನುಗಳ ಬಾಧೆ ಕಂಡು ಬಂದಲ್ಲಿ ನಿರ್ವಹಣೆಗಾಗಿ ಶೇ.5ರ ಬೇವಿನ ಬೀಜದ ಕಷಾಯ ಅಥವಾ 1 ಮಿ.ಲೀ. ಫಿಪ್ರೋನಿಲ್ 5% ಎಸ್.ಸಿ. ಅಥವಾ 0.2 ಗ್ರಾಂ ಥಯಾಮಿಥಾಕ್ಸಾಮ್ 25 ಡಬ್ಲುಜಿ ಅಥವಾ 0.3 ಗ್ರಾಂ ಪ್ಲೋನಿಕ್ ಅಮಿಡ್ 50 ಡಬ್ಲೂಜಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕಬ್ಬಿನಲ್ಲಿ ಬಿಳಿ ನೊಣದ ಬಾಧೆ ನಿರ್ವಹಣೆಗೆ ಅಲಂಟೋ 1 ಮಿ.ಲೀ ಅಥವಾ ಲೆಸೆಂಟಾ 1 ಗ್ರಾಂ ಅಥವಾ ಲ್ಯಾನ್ಸರ್‌ಗೋಲ್ಡ್ 0.3 ಗ್ರಾಂ ಅಥವಾ ಅಡ್ಮೆರ್ 0.3 ಗ್ರಾಂ ಅಥವಾ ಅಸಿಟಾಮಪ್ರಿಡ್ 0.3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಅಥವಾ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು