ಬಿಪಿಎಲ್ ಪಡಿತರ ಚೀಟಿ: ಅನರ್ಹರು ಎಷ್ಟು ಗೋತ್ತಾ?

ಬಿಪಿಎಲ್ ಪಡಿತರ ಚೀಟಿ image

ವಿಜಯಪುರ: ಅನರ್ಹ ಕುಟುಂಬಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸರ್ಕಾರದ ಮಾನದಂಡಗಳ ಪ್ರಕಾರ ಅರ್ನಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಆ.31ರೊಳಗೆ ಸ್ವಯಂ ಪ್ರೇರಣೆಯಿಂದ ಆಯಾ ತಹಶೀಲ್ದಾರ ಕಚೇರಿಗೆ ಒಪ್ಪಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಅವರು ತಿಳಿಸಿದ್ದಾರೆ. ಬಿಪಿಎಲ್ ಪಡಿತರ ಚೀಟಿ

ಸರ್ಕಾರದ ಆದೇಶದಂತೆ ಜಿಲ್ಲೆಯ ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚುವ ಅಭಿಯಾನ ಆರಂಭಿಸಲಾಗಿದ್ದು, ಈಗಾಗಲೇ ಆದಾಯ ತೆರಿಗೆ ಪಾವತಿ ಮಾಡುತ್ತಿರುವ 2086 ಕುಟುಂಬಗಳು, ಸರ್ಕಾರಿ ನೌಕರರು ಹೊಂದಿರುವ 391, ಹಾಗೂ 1.20ಲಕ್ಷಕ್ಕಿಂತ ಹೆಚ್ಚಿನ ಕುಟುಂಬ ಆದಾಯ ಹೊಂದಿರುವ 29615 ಸೇರಿದಂತೆ 32092 ಬಿಪಿಎಲ್ ಪಡಿತರ ಚೀಟಿಗಳನ್ನು ತಂತ್ರಾಂಶದ ಮೂಲಕ ಪತ್ತೆ ಹಚ್ಚಿ ಪರಿಶೀಲನೆ ನಡೆಸಲಾಗುತ್ತಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಗಳು ಪರಿತರ ಚೀಟಿಯನ್ನು ಪಡೆಯಲು ಅರ್ಹರಾಗುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್‌ ಕಾರ್ಡ್‌ ಹೊಂದಲು ಅವಕಾಶವಿಲ್ಲ. ಈಗಾಗಲೇ ಕಾರ್ಡ ಹೊಂದಿರುವವರು ತಕ್ಷಣ ರದ್ದುಮಾಡಿಕೊಳ್ಳಬೇಕು. ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಈ ಕಾರ್ಡ ಹಂಚಬೇಕು. ಒಂದೆ ಮನೆಯಲ್ಲಿ ಕೂಡಿ ಇದ್ದು ಬೇರೆ ಬೇರೆ ಪಡಿತರ ಚೀಟಿ ಮಾಡಿಸುವುದು ಕಂಡುಬಂದಿದೆ.

ಇದನ್ನೂ ಓದಿ: ಬಿ.ಎಸ್.ಪಾಟೀಲ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ.

ಜಿಲ್ಲೆಯಲ್ಲಿ ಏಕವ್ಯಕ್ತಿ ಕುಟುಂಬದ 40975 ಹಾಗೂ ದ್ವಿವ್ಯಕ್ತಿ 105125 ಪಡಿತರ ಚೀಟಿಗಳಿದ್ದು, ಇದರಲ್ಲಿನ ಹೆಚ್ಚಿನ ಕುಟುಂಬಗಳು ಒಂದೇ ಮನೆಯಲ್ಲಿ ಕೂಡಿ ವಾಸವಿದ್ದು, ಕೃತಕವಾಗಿ ಪ್ರತ್ಯೇಕವಾಗಿರುವುದಾಗಿ ಪಡಿತರ ಚೀಟಿ ಪಡೆದಿರುವುದು ಕಂಡು ಬಂದಿದ್ದು, ಕೃತಕ ಪ್ರತ್ಯೇಕವಾಗಿರುವ ಏಕವ್ಯಕ್ತಿ ಹಾಗೂ ದ್ವಿವ್ಯಕ್ತಿ ಸದಸ್ಯ ಪಡಿತರ ಚೀಟಿದಾರರೂ ಸಹ ಅವರ ಪಡಿತರ ಚೀಟಿಯನ್ನು ರದ್ದುಪಡಿಸಿಕೊಂಡು ಅವರ ಕುಟುಂಬದ ಮೂಲ ಪಡಿತರ ಚೀಟಿಯಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ದಿನಾಂಕ : 31-8-2024ರವರೆಗೆ ಗಡುವು ನೀಡಲಾಗಿದೆ.

ಅನರ್ಹ ಪಡಿತರದಾರರು ಆ.31ರೊಳಗೆ ಅಧ್ಯಪರ್ಣ ಮಾಡಿದಲ್ಲಿ ಯಾವುದೇ ದಂಡ ವಿಧಿಸದೇ ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿಕೊಡಲಾಗುವುದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಸಲ್ಲಿಸದೇ ಇದ್ದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ಅವರು ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು