ವಿಜಯಪುರ: ಕನ್ನಡ ವಿಶ್ವವಿದ್ಯಾಲಯ ಹಂಪಿ ವತಿಯಿಂದ ಮಾನ್ಯತೆ ಪಡೆದ ಶ್ರೀ ಕುಮಾರೇಶ್ವರ ಸಂಗೀತ ಮಹಾವಿದ್ಯಾಲಯದ ಪ್ರವೇಶಾತಿ ಆರಂಭ.
2024-2025 ನೇಯ ಶೈಕ್ಷಣಿಕ ವರ್ಷದಿಂದ ವಿವಿಧ ಸ್ನಾತಕ್ಕೋತ್ತರ ಕಾರ್ಯಕ್ರಮಗಳ ಅಡಿಯಲ್ಲಿ ಬಿ.ಪಿ.ಎ ಹಿಂದೂಸ್ತಾನಿ ಪದವಿ ಕೋರ್ಸ್ ಪ್ರವೇಶಾತಿ ಆರಂಭವಾಗಿದೆ ಎಂದು ಸಂಸ್ಥಾಪಕರಾದ ಶ್ರೀ ತೋಂಟದಾರ್ಯ ಕವಿ ಗವಾಯಿಗಳವರು ಹೇಳಿದರು.
ನಗರದ ಗಾನಬನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸವಿಸ್ತಾರ ಮಾಹಿತಿಯನ್ನು ನೀಡುತ್ತಾ ಅವರು ಪ್ರವೇಶಾತಿಗಳಿಗೆ ದ್ವಿತೀಯ ಪಿಯುಸಿ ಅರ್ಹತೆಯನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದರು.
ಯಾವುದೇ ರೀತಿಯ ಡೊನೇಶನ್ ಇಲ್ಲದೇ ಕೇವಲ ಸರಕಾರಿ ಶುಲ್ಕದ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಲಾಗುವದು. ಈ ಕೋರ್ಸಿನ ಅವಧಿ 3 ವರ್ಷ ಆಗಿದ್ದು ಸದರಿ ಕೋರ್ಸನಲ್ಲಿ ಕಲಿತ ನಂತರ ಸಂಗೀತ ಶಿಕ್ಷಕರಾಗಲು ಅರ್ಹತೆ ದೊರಕುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಗೀತ ವಿದ್ಯಾಲಯದ ಸಂಪರ್ಕ ಸಂಖ್ಯೆ ಮೊ: 6366803424/ 9844554681 ಇವರನ್ನು ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ರೈತ ಭಾರತ ಪಕ್ಷ: ರೈತರ ಬೇಡಿಕೆಗಳನ್ನು ಈಡೇರಿಸಿ





