ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ ಪ್ರದರ್ಶನ: ಹಬ್ಬಗಳು ಸಂಸ್ಕೃತಿಯ ಪ್ರತೀಕ: ಡಾ.ವೀರಣ್ಣ ಚರಂತಿಮಠ

ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ image

ಬಾಗಲಕೋಟೆ: ಹಬ್ಬಗಳು ನಾಡಿನ ಸಂಸ್ಸøತಿಯ ಅಸ್ಮಿತೆಯ ಪ್ರತಿಕವಾಗಿದ್ದು, ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ.ಚರಂತಿಮಠ ಅವರು ಹೇಳಿದರು. ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯ ಆವರಣದಲ್ಲಿ ಸೋಮವಾರ ಕೇರಳದ ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ ಪ್ರದರ್ಶನ ವೀಕ್ಷಿಸಿ, ನಂತರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಓಣಂ ಹಬ್ಬವು ವಿಶೇಷವಾಗಿ ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ, 10 ದಿನಗಳ ಕಾಲ ನಡೆಯುವ ಈ ಹಬ್ಬದಂದು ಭೂಮಿಯ ಮೇಲಿನ ಜನರನ್ನು ಆಶಿರ್ವದಿಸಲು ಪಾತಾಳಲೋಕದಿಂದ ಬಲಿರಾಜನು ಬರುತ್ತಾನೆ ಎಂಬ ನಂಬಿಕೆಯಿದೆ, ಬಿ.ವಿ.ವಿ ಸಂಘದ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಓಣಂ ಹಬ್ಬದ ಆಚರಣೆಗೆ ಸಮಯದ ಅಭಾವದಿಂದ ಈ ವಿದ್ಯಾರ್ಥಿಗಳಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಾಗಲಕೋಟೆಯಲ್ಲೆ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಕೇರಳದ ಚಂಡಮದ್ದಳೆ ತಂಡ, ಬಾಣಸಿಗರ ತಂಡ ಮತ್ತು ಸ್ಥಬ್ದಚಿತ್ರಗಳು ನಮ್ಮ ಮೆಡಿಕಲ್ ಕಾಲೇಜಿಗೆ ಆಗಮಿಸಿ ಓಣಂ ಹಬ್ಬದ ಸಂಭ್ರವನ್ನು ಹೆಚ್ಚಿಸಿರುವರು. ಇಂಥ ಆಚರಣೆಗಳ ಮೂಲಕ ಇಂದಿನ ಯುವಪೀಳಿಗೆಗೆ ನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವ ಅಗತ್ಯವಿದೆ ಎಂದರು. ಭಾರತ ಪ್ರತಿ ರಾಜ್ಯಗಳಲ್ಲಿ ಅದರದೇ ಆದ ಸಾಂಪ್ರದಾಯಿಕ ಪದ್ದತಿಗಳು ಇವೆ. ಎಲ್ಲರೂ ಅವುಗಳನ್ನು ಗೌರವಿಸುವ ಮತ್ತು ಆಚರಿಸುವದು ನಮ್ಮ ಧರ್ಮ ಮತ್ತು ಯಾವುದೇ ಕಾರಣಕ್ಕೂ ಅವಹೇಳನಕಾರಿ ಮಾಡಿ ನಡೆದುಕೊಳ್ಳುವುದು ಸರಿ ಅಲ್ಲ ಎಂದರು.

ಗಮನ ಸೇಳೆದ ಚಂಡಮದ್ದಳೆ ಹಾಗೂ ಕೇರಳದ ವಿಶೇಷ ಖಾದ್ಯ: ಓಣಂ ಆಚರಣೆಯ ಉದ್ಘಾಟನೆಗೆ ಆಗಮಿಸಿದ ಅವರನ್ನು ಕೇರಳದ ಪಾರಂಪರಿಕ ವಾದ್ಯ ಚಂಡಮದ್ದಳೆ ನುಡಿಸುವುದರ ಮೂಲಕ ಸ್ವಾಗತಿಸಿದ್ದು ನೋಡುಗರ ಗಮನ ಸೇಳೆಯಿತು. ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಓಣಂ ನೃತ್ಯ ಪ್ರದರ್ಶನ ಮಾಡಿದರು. ಕಾಲೇಜಿನ ಆವರಣದಲ್ಲಿ ಸ್ಥಬ್ದಚಿತ್ರಗಳು ಮತ್ತು ಚಂಡಮದ್ದಳೆ ಜೊತೆಗೆ ನೃತ್ಯ ಪ್ರದರ್ಶಿಸಿ, ಕೇರಳದ 24 ತರ ವಿವಿಧ ಓಣಂ ಸದ್ಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದರು.

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷರಾದ ಕುಮಾರಸ್ವಾಮಿ ಹಿರೇಮಠ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯರಾದ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಈಟ್ಟಿ, ಡಾ.ಪ್ರವೀಣ ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷರಾದ ಡಾ.ಶ್ರೀರಾಮ ಕೋರಾ ಮತ್ತು ಎಲ್ಲ ಆರೋಗ್ಯ ವಿಜ್ಞಾನ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


ಇದನ್ನೂ ಓದಿ: ವಿನೇಶಾ ಫೋಗಟ್‌ ಗೆ ಭಾರತೀಯ ರೈಲ್ವೆಯಿಂದ ಶೋಕಾಸ್ ನೋಟಿಸ್

Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »