ಬಾಗಲಕೋಟೆ: ಶಿಕ್ಷಕರ ದಿನೋತ್ಸವ ದ ಅಂಗವಾಗಿ ಹಿಂದುಳಿದ, ಬಡವರ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ರಾಜ್ಯದ ಗಮನ ಸೆಳೆದಿರುವಿರುವುದು ಶ್ಲಾಘನೀಯವೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸೋಮವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ವಸತಿ ಶಾಲೆಗಳ ವಿವಿಧ ವೃಂದಗಳ ನೌಕರರ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ವಿಜಯಪುರ ಜಿಲ್ಲಾ ಹಮಾಲರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ
ಶಿಕ್ಷಕರ ದಿನೋತ್ಸವ ನಮ್ಮ ಭಾಗದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಉಡುಪಿ, ಮಂಗಳೂರು ಸೇರಿದಂತೆ ಮುಂತಾದ ನಗರಗಳಿಗೆ ಕೇಳಿದಷ್ಟು ಹಣ ನೀಡಿ ಶಿಕ್ಷಣ ಪಡೆಯುವ ಕಾಲ ಒಂದು ಇತ್ತು. ಆದರೆ ಇಂದು ಮೋರಾರ್ಜಿ ವಸತಿ ಶಾಲೆಗಳು ಆದ ನಂತರ ಆ ಶಿಕ್ಷಣ ಇಲ್ಲಿಯೇ ದೊರೆತಿದ್ದರಿಂದ ಇಲ್ಲಿಯ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಸುಧಾರಿಸಲು ಅನುಕೂಲವಾಗಿದೆ.
ಹುಟ್ಟಿದ ಊರು ಬಿಟ್ಟು ಬೇರೆ ನಗರಗಳಲ್ಲಿ ಇಲ್ಲಿಯ ವಾತಾವರಣ ಇಲ್ಲಿ ನಡೆಯುವ ಉತ್ಸವ ಜಾತ್ರೆಗಳನ್ನು ಮರೆತು ಅಲ್ಲಿ ಸೆರೆಮನೆ ವಾಸದಂತೆ ಬಳಲುತ್ತಿರುವ ಮಕ್ಕಳಿಗೆ ಇಲ್ಲಿಯೇ ಎಲ್ಲ ಸೌಲಭ್ಯಗಳುಳ್ಳ ಶಿಕ್ಷಣ, ಪಾಲಕರ ಒಡನಾಟ ಇರುವದರಿಂದ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗುತ್ತಿದೆ ಎಂದರು.
ಇದನ್ನೂ ಓದಿ: ಸಮ ಸಮಾಜದ ನಿರ್ಮಾಣವೇ ಶರಣರ ಮೂಲ ಆಶಯವಾಗಿತ್ತು ಡಾ.ಮಲ್ಲಮ್ಮ ಯಾಳವಾರ
ಒಂದು ಕಾಡು ಗಲ್ಲನ್ನು ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಗಳಂತಿರುವ ಶಿಕ್ಷಕರು ನಮಗೆಲ್ಲ ಸರಕಾರಿ ಶಿಕ್ಷಕರ ಸೌಲಭ್ಯಗಳಿಲ್ಲ ಎಂದು ಕೊರಗದೇ ಸಂಘದವರೆಂಬ ಭಾವನೆ ಬಿಟ್ಟು ಮುಂದುವರಿದಲ್ಲಿ ತಮಗೆಲ್ಲ ಸಿಗುವ ಸೌಲಭ್ಯಗಳನ್ನು ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಡಿ.ವಾಯ್.ಕ್ವಾಟಿ ಅವರು 1995ರಲ್ಲಿ ಈ ಭಾಗದ ಪ್ರತಿಭೆಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯದೇ ವಂಚಿತರಾದ ಸಮಯದಲ್ಲಿ ಗುಣಾತ್ಮಕ ಶಿಕ್ಷಣ ನೀಡಿ ಸಾವಿರಾರು ಪ್ರತಿಭೆಗಳನ್ನು ಕ್ರೈಸ್ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 839 ವಸತಿ ಶಾಲೆಗಳಿದ್ದು, ಈ ಪೈಕಿ ಜಿಲ್ಲೆಯಲ್ಲಿ 29 ವಸತಿ ಶಾಲೆಗಳಲ್ಲಿ 4300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕ ಪ್ರಭಾಕರ ಉಳ್ಳಾಗಡ್ಡಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶೇ.100 ರಷ್ಟು ಫಲಿತಾಂಶ ನೀಡಿ 19 ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಎಂ.ತುಂಬರಮಟ್ಟಿ, ವಸತಿ ಶಿಕ್ಷಣ ಸಂಘದ ಜಿಲ್ಲಾ ಸಮನ್ವಯಾಧಿಕಾರಿಗಳಾದ ಶಿವಕುಮಾರ ಗೌಡರ, ಸುರೇಖಾ ಬಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






