ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳನ್ನು ವಿಜಯಪುರ ಜಿಲ್ಲೆಯಲ್ಲಿ ಮಾಡೇಲ್ ತಾಲೂಕುಗಳು ಎಂದು ಆಯ್ಕೆ ಮಾಡಿಕೊಂಡು ಇಲ್ಲಿನ ಸರಕಾರಿ ಶಾಲೆಗಳ ಕಟ್ಟಡ, ದುರಸ್ಥಿ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ಕೆಲವು ಸ್ಥಳಗಳಲ್ಲಿ ವಿಸ್ತರಣೆ ಮಾಡಲಾಗುವುದು. ವಿಜಯಪುರ
ಇದನ್ನೂ ಓದಿ: ಪವನ ವಿದ್ಯುತ್ ಘಟಕ ಸ್ಥಾಪನೆಗೆ ಅಸ್ತು.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಜುಮನಾಳ 625 ಕ್ಕೆ 624 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವೀತೀಯ ಸ್ಥಾನ ಗಳಿಸಿದ್ದಾಳೆ ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯ, ಬಿದರಕುಂದಿ ತಾಲೂಕು ಮುದ್ದೇಬಿಹಾಳ ಶಾಲೆಯ ಕುಮಾರಿ ಪವಿತ್ರಾ ಮಡಿವಾಳಪ್ಪಗೌಡ ಕೊಣ್ಣೂರ ಎಂಬ ವಿದ್ಯಾರ್ಥಿನಿ 625 ಕ್ಕೆ 623 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿ, ಅಭಿನಂದನಾರ್ಹ ಸಾಧನೆ ಮಾಡಿದ್ದಾರೆ. 653 ಪ್ರೌಢಶಾಲೆಗಳ ಪೈಕಿ 69 ಪ್ರೌಢಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆದಿರುತ್ತವೆ.
2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಲವಾರು ರಚನಾತ್ಮಕ ಯೋಜನೆಗಳನ್ನು ರೂಪಿಸಿ ರಾಜ್ಯಮಟ್ಟದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಯೋಜಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1336 ಪ್ರಾಥಮಿಕ ಹಾಗೂ 223 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.2023-24 ನೇ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶವು ಪ್ರಶಂಸನೀಯವಾಗಿದ್ದು ಜಿಲ್ಲೆಯು ರಾಜ್ಯಕ್ಕೆ 3ನೇ ಸ್ಥಾನ ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಶತಮಾನಗಳ ಇತಿಹಾಸ ಹೊಂದಿರುವ ಉತ್ತರ ಕರ್ನಾಟಕದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಅಂದರೆ ಎಸ್.ಎಸ್. ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಕುಮಾರ ವೇದಾಂತ ನಾವಿ ಈತನು 600 ಕ್ಕೆ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾನೆ. ಈ ಸಂದಂರ್ಭದಲ್ಲಿ ಆತನನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ವಿಜಯಪುರ
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ದಿನಾಚರಣೆ: ಜಿಲ್ಲೆಯ ಕೊಡುಗೆ ಅನನ್ಯ MB Patil
ಪದವಿ ಪೂರ್ವ ಶಿಕ್ಷಣ ವಿಭಾಗದ ಎಲ್ಲಾ ಭಾಗೀದಾರರ ಸಹಕಾರದೊಂದಿಗೆ 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವಂತೆ ಮತ್ತು ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸುವಂತೆ ಅಹರ್ನಶಿ ಶ್ರಮಿಸಲು ರಚನಾತ್ಮಕ ಕ್ರಿಯಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
2023-24ನೇ ಸಾಲಿನಲ್ಲಿ ವಿಜಯಪುರ ತಾಲೂಕಿನ ಜಂಬಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕೊಳೂರ ಗ್ರಾಮದಲ್ಲಿ ಹೊಸದಾಗಿ 110ಕೆವಿ ವಿದ್ಯುತ್ ಉಪಕೇಂದ್ರ ಕಾರ್ಯಾರಂಭಗೊಂಡಿರುತ್ತದೆ ಹಾಗೂ ಪ್ರಸ್ತುತ ವರ್ಷದಲ್ಲಿ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ, ತಾಳಿಕೋಟಿ ತಾಲೂಕಿನ ವನಹಳ್ಳಿ ಹಾಗೂ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ 110ಕೆವಿ ಉಪಕೇಂದ್ರವು ಚಾಲನೆಗೊಳಿಸಲಾಗಿದೆ.
ಪ್ರಸ್ತುತ ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ 400ಕೆವಿ ವಿದ್ಯುತ ಕೇಂದ್ರ (803 ಕೋಟಿ), ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ 220ಕೆವಿ ವಿದ್ಯುತ್ ವಿತರಣಾ ಕೇಂದ್ರ (146 ಕೋಟಿ) ಹಾಗೂ 13 ಸಂಖ್ಯೆಯ 110ಕೆವಿ ವಿದ್ಯುತ್ ಕೇಂದ್ರಗಳು (ಅಂದಾಜು 168 ಕೋಟಿ) ಕನ್ನೂರ, ಉಮರಜ, ಹಡಗಲಿ, ಕಾಖಂಡಕಿ, ಕನಮಡಿ, ಅರ್ಜುಣಗಿ, ನಿಂಬಾಳ, ಭೈರುಣಗಿ, ಯಂಕಂಚಿ, ಕಡಣಿ, ಗುಬ್ಬೇವಾಡ, ದಿಂಡವಾರ, ಕಣಕಾಲ ವಿದ್ಯುತ್ ಕೇಂದ್ರಗಳ ಕಾಮಗಾರಿಗಳು ಪ್ರಗತಿಯಲ್ಲಿದೆ.110ಕೆವಿ- ಘೊಣಸಗಿ, ಚಿಕ್ಕರೂಗಿ, ಹಡಲಸಂಗ, ನಾವದಗಿ, ಕೋರಳ್ಳಿ, ತೆಲಗಿ, 220ಕೆವಿ- ಚಡಚಣ, ಇಟ್ಟಂಗಿಹಾಳ, ಬಬಲೇಶ್ವರ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಕಾರ್ಯವು ವಿವಿಧ ಹಂತಗಳಲ್ಲಿವೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಡಿ.ಸಿ.ಸಿ ಬ್ಯಾಂಕ್ ಮೂಲಕ 44,517 ಸದಸ್ಯರುಗಳಿಗೆ 33,910 ಲಕ್ಷ ರೂಪಾಯಿಗಳ ಅಲ್ಪಾವಧಿ ಬೆಳೆಸಾಲ ವಿತರಣೆ ಹಾಗೂ 245 ಸದಸ್ಯರುಗಳಿಗೆ 944 ಲಕ್ಷ ರೂಪಾಯಿಗಳ ಮಧ್ಯಮಾವಧಿ ಸಾಲ ವಿತರಿಸಲಾಗಿದೆ. 2024-25 ನೇ ಸಾಲಿನಲ್ಲಿ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಒಟ್ಟು 99,198 ಸದಸ್ಯರನ್ನು ನೋಂದಾಯಿಸಲಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿ ಹೆಚ್ಚಿಸಲು ಕ್ರಮ ಜರುಗಿಸಲಾಗುತ್ತಿದೆ. ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಸಿರೀಕರಣ ವೃದ್ಧಿಗೊಳಿಸಲು ಹಾಗೂ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವ ಕುರಿತು ಉತ್ತೇಜನ ನೀಡಲು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡ ವೃಕ್ಷೋಥಾನ್ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ರೀಕ್ಷೆಗೂ ಮೀರಿ 10 ಸಾವಿರ ಕ್ಕಿಂತ ಹೆಚ್ಚಿನ ಓಟಗಾರರು ಭಾಗವಹಿಸಿದ್ದರು.
ಕಳೆದ ವರ್ಷದಂತೆ ಈ ವರ್ಷವೂ ಕೂಡ 2024 ನೇ ಸಾಲಿನ ಡಿಸೆಂಬರ್-22 ರವಿವಾರದಂದು ವೃಕ್ಷೋಥಾನ್ ಹೆರಿಟೇಜ್ ರನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 15 ಸಾವಿರಕ್ಕಿಂತಲೂ ಹೆಚ್ಚಿನ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದಿನಿAದಲೇ ನೋಂದಣಿ ಲಿಂಕ್ ಅನ್ನು ಪ್ರಾರಂಭಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊAಡು ಹಸರಿಕರಣಕ್ಕೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ನಡೆದಾಡುವ ದೇವರೆಂದೇ ಪ್ರಸಿದ್ಧಿ ಹೊಂದಿ ತಮ್ಮ ನಡೆ-ನುಡಿಗಳಿಂದ ನಮ್ಮೆಲ್ಲರ ಬದುಕಿಗೆ ಹೊಸ ಬೆಳಕು ತೋರಿದ ಜ್ಞಾನಯೋಗಿ ಪರಮ ಪೂಜ್ಯರಾದ ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಮಹಾ ಸ್ವಾಮೀಜಿಯವರು, ಗುಹೇಶ್ವರನೆಂಬುದು ತಾ ಬಯಲು ಎಂದು ಅಲ್ಲಮಪ್ರಭುವಿನ ವಚನದಂತೆ ಬಯಲಲ್ಲಿ ಬಯಲಾಗಿದ್ದಾರೆ. ಅವರನ್ನು ಈ ಪ್ರಕೃತಿಯಲ್ಲಿಯೇ ನಾವು ಕಾಣಬೇಕಿದೆ. ನಮ್ಮ ಮುಂದಿನ ತಲೆಮಾರಿಗೆ ಅವರ ವಿಚಾರಗಳ ಅರಿವು-ಹರಿವು ಮುಂದುವರೆಯಬೇಕು. ಆ ನಿಟ್ಟಿನಲ್ಲಿ ಶ್ರೀ ಸುತ್ತೂರು ಶ್ರೀಗಳ, ಶ್ರೀ ಕನ್ಹೇರಿ ಮಠದ ಪರಮಪೂಜ್ಯರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆ ಜ್ಞಾನಯೋಗಾಶ್ರಮದಲ್ಲಿ ಘೋಷಣೆ ಮಾಡಿದಂತೆ ವಿಜಯಪುರದಿಂದ 40ಕಿ.ಮೀ ದೂರದ ಐತಿಹಾಸಿಕ ಮಮದಾಪುರ ಕೆರೆಗೆ ಹೊಂದಿಕೊಂಡಂತೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು,
ಇದನ್ನು ಜೀವವೈವಿದ್ಯತೆಯ ತಾಣವನ್ನಾಗಿ ರೂಪಿಸಲಾಗುತ್ತಿದೆ. ಇಲ್ಲಿ ಧ್ಯಾನ ಕೇಂದ್ರ, ಗ್ರಂಥಾಲಯ, ಸಂಗ್ರಹಾಲಯ ಇತ್ಯಾದಿಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದು, ಈಗಾಗಲೇ ಕೆರೆ ಅಭಿವೃದ್ಧಿ ಪಡಿಸಲು ಹಿಂದೂಸ್ತಾನ ಕೋಕಾ ಕೋಲಾ 1 ಕೋಟಿ ಬೆಳಗಾವಿಯ ಗೋಲ್ಡ್ ಪ್ಲಸ್ ಗ್ಲಾಸ್ ಕಾರ್ಖಾನೆಯವರು 50 ಲಕ್ಷ ಅನುದಾನ ನೀಡಿದ್ದಾರೆ. ಅಲ್ಲದೇ, ಈ ಮೀಸಲು ಅರಣ್ಯ ಪ್ರದೇಶವನ್ನು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮೀಸಲು ಅರಣ್ಯ ಪ್ರದೇಶ ಎಂದು ಶಾಶ್ವತವಾಗಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಬುದ್ಧ-ಬಸವ-ಡಾ.ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸರ್ವರಿಗೂ ಸಮ ಬಾಳು -ಸಮ ಪಾಲು ಎಂಬ ನೀತಿಯಂತೆ, ರಾಷ್ಟ್ರಪಿತ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕಲ್ಪನೆಯಂತೆ ಹಾಗೂ ಭಾರತದ ಅಣುವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರವರು ಕಂಡ 21ನೇ ಶತಮಾನದ ಪ್ರವರ್ಧಮಾನದ ಪ್ರಬುದ್ಧ ಭಾರತದ ಪರಿಕಲ್ಪನೆಗಳಡಿಯಲ್ಲಿ ಸರ್ವರ ಏಳ್ಗೆ ಮತ್ತು ಅಭಿವೃದ್ಧಿಗಾಗಿ ನಾವೆಲ್ಲರೂ ಧರ್ಮಾತೀತವಾಗಿ-ಜಾತ್ಯಾತೀತವಾಗಿ ಅಹರ್ನಿಸಿ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.





