ವಿಜಯಪುರ ಜಿಲ್ಲೆಯ 16 ಜನ ಕ್ರೀಡಾ ಪಟುಗಳು ವೆಟ್ ಲಿಪ್ಟಿಂಗ್ ಗೆ ಆಯ್ಕೆ

ವಿಜಯಪುರ ಮಾ 12: ಜಿಲ್ಲಾ ಮಟ್ಟದ ವೆಟ್ ಲಿಪ್ಟಿಂಗ್ ಕ್ರೀಡೆಯಲ್ಲಿ ಬಾಲಕ/ಬಾಲಕಿಯರು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಬಾಲಕೀಯರ ವಿಭಾಗದಲ್ಲಿ ಭಾಗ್ಯಶ್ರೀ ಪ್ರಥಮ, ದ್ವಿತೀಯ ಬಸಮ್ಮ, ತೃತೀಯ ಶಾಂತಾ ಸ್ಥಾನವನ್ನು ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ಶಂಕರ ಲಡಂಗಿ, ದ್ವಿತೀಯ ರವಿ ಮೇಟಿ, ತೃತೀಯ ನಟರಾಜ ಸ್ಥಾನವನ್ನು ಪಡೆದಿದ್ದಾರೆ.

ಬಾಲಕ / ಬಾಲಕೀಯರಿಗೆ ಚಂದ್ರಕಾಂತ ತಾರನಾಳ ಹಾಗೂ ಶಂಕರ ಲಡಂಗಿ ಅವರು ತರಬೇತಿ ನೀಡಿದ್ದಾರೆ.
ದಿನಾಂಕ : 15 , 16 ರಂದು ಬೆಂಗಳೂರಿನ ಕಂಠೀರವ ಕ್ರೀಂಡಾಂಗಣದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಮಾಸ್ಟರ ಗೇಮ್‍ನಲ್ಲಿ ವಿಜಯಪುರ ಜಿಲ್ಲೆಯಿಂದ 6 ಜನ ಬಾಲಕಿಯರು 10 ಜನ ಬಾಲಕರು ಒಟ್ಟು 16 ಜನ ಕ್ರೀಡಾ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ವೆಟ್ ಲಿಪ್ಟಿಂಗ್ ಅಸೋಶಿಯೇಶನ್ ಅಧ್ಯಕ್ಷರಾದ ದಾದಾಸಾಹೇಬ ಸಿದ್ದಪ್ಪ ಬಾಗಾಯತ, ಕಾರ್ಯದರ್ಶಿ ಚಂದ್ರಕಾಂತ ತಾರನಾಳ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »