ವಿಜಯಪುರ: ಕನ್ನಡ ಸಾಹಿತ್ಯದ ಸುದೀರ್ಘ ಇತಿಹಾಸದಲ್ಲಿ ಸರಳ ಬದುಕಿನ ಸಾರ ಕವನ ಸಂಕಲನಗಳ ಮೂಲಕ ಹೇಳಿದ ಮಹಾನ ವ್ಯಕ್ತಿತ್ವ ವರ ಕವಿ ಬೇಂದ್ರೆ ಯವರು ಹೊಂದಿದ್ದರು, ಕವನಗಳನ್ನು ಅಧ್ಯಯನ ಮಾಡುವ ಅತ್ಯವಶ್ಯಕತೆ ಇದೆ, ಅವರನ್ನು ನೆನಸುವದೇ ಒಂದು ಸಾರ್ಥಕ ಬದುಕು ಆಗಿದೆ, ಬೇಂದ್ರೆ ಬದುಕಿನುದ್ದಕ್ಕೂ ನಡೆ ನುಡಿ ಒಂದಾಗಿ ಬದುಕಿದವರು, ಇಡೀ ಬದುಕಿನ ಸಾಮರಸ್ಯ ಕವಿಯಾಗಿ ಹೊರಹೊಮ್ಮಿದವರು ಎಂದರು.
ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಡಾ ದ ರಾ ಬೇಂದ್ರೆ ಪುಣ್ಯ ಸ್ಮರಣೋತ್ಸವ ನಿಮಿತ್ಯ ಚಿಂತನೆ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ವರ ಕವಿ ಬೇಂದ್ರೆ ಕವನಗಳನ್ನು ಅಧ್ಯಯನ ಮಾಡುವ ಅತ್ಯವಶ್ಯಕತೆ ಇದೆ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದರು.
ಇದನ್ನೂ ಓದಿ:Vijayapura News | ದಾಸ ಸಾಹಿತ್ಯದ ಕೊಡುಗೆ ಅಪಾರ – ಸೋಮೇಶ್ವರ ಮಹಾಸ್ವಾಮೀಜಿ
ಕಾರ್ಯಕ್ರಮಲ್ಲಿ ಡಾ. ದ ರಾ ಬೇಂದ್ರೆ ಕುರಿತು ಉಪನ್ಯಾಸ ನೀಡಿದ ಪಿಡಿಜೆ ಕಾಲೇಜ್ ಉಪನ್ಯಾಸಕ ಸಂತೋಷ ಕುಲಕರ್ಣಿ ಮಾತನಾಡುತ್ತ ಕನ್ನಡ ಸಾಹಿತ್ಯಕ್ಕೆ ನಾಕುತಂತಿ ಕವನ ಸಂಕಲನ ನೀಡುವದರ ಮೂಲಕ ಜ್ಞಾನಪೀಠ ಪ್ರಶಸ್ತಿ ಪಡೆದು ನಾಡಿಗೆ ಗೌರವ ತಂದವರು. ಕಷ್ಟದಲ್ಲಿ ನೋವುಂಡು ಬೆಳದು 37 ಕವನ ಸಂಕಲನ ಬರೆಯುವದರ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದರು. ಅನೇಕ ಕವನಗಳು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ವರಕವಿ ಎಂದು ಬಿರುದು ಹೊಂದಿದ ಬೇಂದ್ರೆಯವರು ಸೋಲಾಪುರ, ಸಾಂಗ್ಲಿ, ಪುಣೆ, ಶಿರಹಟ್ಟಿ, ಮುಂಬೈ ಹೀಗೆ ಹಲವಾರು ಪಟ್ಟಣಗಳಲ್ಲಿ ಜೀವನ ಸಾಗಿಸಿ ಕನ್ನಡ ಬೆಳಸಿದವರು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಸಾಪ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಮಾತನಾಡುತ್ತ ಡಾ ಬೇಂದ್ರೆ ಅವರು ಸರಳ ಬದುಕು ಸಾಗಿಸುವದರ ಜೊತೆ ಬದುಕಿನ ಸರಳ ತಿರುಳು ನಾದಲೀಲೆ, ಸಖೀಗೀತೆ ಕವನ ಸಂಕಲನಗಳ ಮೂಲಕ ಹೇಳಿದ್ದಾರೆ, ಸಾಹಿತ್ಯ ಎಲ್ಲ ಹಂತದಲ್ಲಿಯು ಬೇಕು ಎಂದರು.
ಇದನ್ನೂ ಓದಿ: Vijayapura News | ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ
ಕಾರ್ಯಕ್ರಮದ ಆದ್ಯಕ್ಷ ಸ್ಥಾನ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡುತ್ತ, ಕಡುಬಡತನದಲ್ಲಿ ಡಾ. ದ.ರಾ ಬೇಂದ್ರೆ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿದೆ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಬೇಂದ್ರೆಯವರಿಗೆ ಕರ್ನಾಟಕ ವಿಶ್ವವಿದ್ಯಾಲಯ, ಕಾಶಿ ವಿದ್ಯಾಪೀಠ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು, ಭಾರತ ಸರಕಾರ ಬೇಂದ್ರೆಯವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಮಾಡಿದ್ದಾರೆ ಇದು ನಮ್ಮ ಕನ್ನಡಕ್ಕೆ ಸಂದ ಗೌರವ ಎಂದರು.
ಇದೇ ಸಂದರ್ಭದಲ್ಲಿ ಸಂತೋಷ ಕುಲಕರ್ಣಿ ಬರೆದ “ಮಾತು ಮಥಿಸಿದ ಮಹಾಕವಿ” ದ ರಾ ಬೇಂದ್ರೆ ಕುರಿತು ವಿಮರ್ಶಾತ್ಮಕ ಗ್ರಂಥ ಬಿಡುಗಡೆ ಮಾಡಲಾಯಿತು. ಡಾ. ಮಳಿಸ್ವಾಮಿ ಹಿರೇಮಠ, ಡಾ. ಮಂಜುನಾಥ ಕೋರಿ, ಡಾ. ಜ್ಯೋತಿ ಪಟ್ಟಣಶೆಟ್ಟಿ, ಡಾ.ಬಸವರಾಜ ಹಿರೇಮಠ, ಸುನೀಲ ಪಾಟೀಲ, ಪೀರಸಾಬ ಮುಲ್ತಾನಿ, ಅಣ್ಣಾರಾಯ ಮಸಳಿ, ಡಾ.ಶಿವಾನಂದ ಶೇಗುಣಸಿ ಉಪಸ್ಥಿತರಿದ್ದರು. ಶಂಕರ ಕೋಲಕಾರ ಪ್ರಾರ್ಥಿಸಿದರು. ಅರುಣ ಚವ್ವಾಣ ಸ್ವಾಗತಿಸಿದರು. ಭಾಗ್ಯಶ್ರೀ ಕೋಟ್ಯಾಳ ನಿರೂಪಿಸಿದರು. ಸುಷ್ಮಾ ಸಿದ್ದಾಪುರ ವಂದಿಸಿದರು.






