ಯುರೋಪ್ ದೇಶಗಳಿಂದ ಆಗಮಿಸಿದವರ ಮಾಹಿತಿ ನೀಡಲು ಸೂಚನೆ

ವಿಜಯಪುರ ಡಿ.23: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂಗ್ಲೆಂಡ್ (ಲಂಡನ್), ಯುರೋಪ್ ದೇಶಗಳಿಂದ ಆಗಮಿಸಿದ ಪ್ರಯಾಣಿಕರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಅಂತಹ ಪ್ರಯಾಣಿಕರ ಮಾಹಿತಿಯನ್ನು ತಪ್ಪದೇ ತಮ್ಮ ಸಮೀಪದ ಪ್ರಾಥಮಿಕ, ತಾಲೂಕಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು, ತಹಸೀಲದಾರರಿಗೆ ಹಾಗೂ ಜಿಲ್ಲಾಡಳಿತದಿಂದ ಪ್ರಾರಂಭಿಸಲಾದ ಸಹಾಯವಾಣಿ ಕೇಂದ್ರ -1077 ಟೋಲ್ ಫ್ರೀ ನಂ – 08352-221261 ಗೆ ಮಾಹಿತಿಯನ್ನು ನೀಡಬೇಕು.

ಇಂಗ್ಲೆಂಡ್, (ಲಂಡನ್) ಯುರೋಪ ದೇಶಗಳಲ್ಲಿ ಕೊರೋನಾ ವೈರಸ್ ಹೊಸ ಪ್ರಭೇದದ ಸೋಂಕು ಹರಡುತ್ತಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಈ ಮೂಲಕ ಕೋವಿಡ್ -19 ಹರಡುವುದನ್ನು ತಡೆಗಟ್ಟುವಲ್ಲಿ ಜಿಲ್ಲೆಯ ಎಲ್ಲ ನಾಗರೀಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು