ಅಹಿಂದ ನಾಯಕ ಮುಖ್ಯಮಂತ್ರಿ  ಸಿದ್ದರಾಮಯ್ಯನವರನ್ನು ಸಂಚು ಮಾಡಿ ಮುಗಿಸಲು ಹೊರಟಿರುವ ಕೋಮುವಾದಿ ಬಿಜೆಪಿ

ಮುಡಾ ಹಗರಣ image
ವಿಜಯಪುರ: ಮಾನವೀಯ ಮೌಲ್ಯ ಹಾಗೂ ನೈತಿಕತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ರಾಜಕೀಯದಲ್ಲಿ ಯಾವುದೇ ರೀತಿ ಕಪ್ಪು ಚುಕ್ಕಿ ಇಲ್ಲ. ಬಿಜೆಪಿಯವರಿಗೆ ಅಧಿಕಾರ ಸಿಗುವುದಕ್ಕೆ ಯಾವಾಗಲೂ ಅಡ್ಡ ದಾರಿಯನ್ನೇ ಬಳಸುವುದು ಅಸ್ತ್ರವಾಗಿದೆ. ಹಾಗಾಗಿ,  ಮುಡಾ ಹಗರಣ ಅಹಿಂದ ನಾಯಕ ಸಿದ್ದರಾಮಯ್ಯನವರು ಬಹುಮತ ಪಡೆದು ಎರಡು ಬಾರಿ ಮುಖ್ಯಮಂತ್ರಿ ಆಗಿರೋದು ನಾಡಿನ ಜನತೆಗೆ  ಹೆಮ್ಮೆಯಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಜಿಲ್ಲಾ ಬಿಜೆಪಿಯಿಂದ ಬೃಹತ ಪ್ರತಿಭಟನೆ | ಆರ್.ಎಸ್.ಪಾಟೀಲ ಕೂಚಬಾಳ
ದಿಲ್ಲಿಯಿಂದ ಹಿಡಿದು ಸಮಾಜದ ಕಟ್ಟ ಕಡೆ ವ್ಯಕ್ತಿಯವರಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂಬುವುದೇ ಆಶಾದಾಯಕವಾಗಿರುವಾಗ ಮಧ್ಯದಲ್ಲಿ ಬಿಜೆಪಿಯವರಿಗೆ ಯಾಕೆ ಆತುರ. ಮುಡಾ ಹಗರಣ ಇನ್ನು ತನಿಖೆಯಲ್ಲಿದೆ, ರಾಜೀನಾಮೆ ಕೊಡುವ ಚಾನ್ಸೇ ಇಲ್ಲ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ  ತೆರಿಗೆ ಪಾಲು ಕೇಂದ್ರ ಸರ್ಕಾರ ಕೊಟ್ಟಿರುವುದಿಲ್ಲ. ಒಂದು ವೇಳೆ ಕೊಟ್ಟಿದ್ದರೆ ಇನ್ನಷ್ಟು ಕೆಲಸಗಳಾಗುತ್ತಿದ್ದವು. ಹಾಗಾಗಿ ಅರ್ಥಶಾಸ್ತ್ರಜ್ಞರಲ್ಲಿ ಸಿದ್ದರಾಮಯ್ಯನವರು ಕೂಡ ಒಬ್ಬರು ಎಂದು ಜಿಎಸ್‍ಟಿ ಚೇರ್ಮನ್ ಆಗಲು ಈ ದೇಶದ ಪ್ರಧಾನಿ ಮೋದಿಯವರೇ ಸೂಚನೆ ನೀಡಿದ್ದರಂತೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ : ರಾಜಿನಾಮೇ ನೀಡುವರೆಗೂ ಹೋರಾಟ
ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಬಡವರಿಗೆ ಇರುವ ಅನಾನುಕೂಲಗಳು ಅಭಿವೃದ್ಧಿ ಆಗಬೇಕಾದರೆ ಸಿದ್ದರಾಮಯ್ಯನವರಂತ ರಾಜ್ಯಕ್ಕೆ ಮುಖ್ಯಮಂತ್ರಿ ಸಿಗುವುದೇ ಅಪರೂಪ. ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಸಂಚು ಮಾಡಿ ಮುಗಿಸಲು ಕೋಮುವಾದಿ ಬಿಜೆಪಿ ಪಕ್ಷ ಹೊರಟಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾದ ಸ್ನೇಹಲತಾ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »