ಭ್ರಷ್ಟಾಚಾರದ ವಿರುದ್ಧ ಕಾನೂನುಗಳ ಕಠಿಣತೆ ಸಾಕೇ?

ಭ್ರಷ್ಟಾಚಾರವು ಪ್ರಜಾಪ್ರಭುತ್ವದ ಅಂತರಂಗವನ್ನು ಕುಂದಿಸುವ ಮೌನ ರೋಗ. ಇದು ಕೇವಲ ಹಣದ ವ್ಯವಹಾರಗಳಲ್ಲಿನ ಅಕ್ರಮವಲ್ಲ; ಅದು ನ್ಯಾಯ, ಸಮಾನತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಹಾಳು ಮಾಡುವ ಶಕ್ತಿ. ಭಾರತದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಹಲವು ಕಾನೂನುಗಳು ಮತ್ತು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಸಾಮಾನ್ಯ ನಾಗರಿಕನ ಅನುಭವದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹೀಗಾಗಿ ಮೂಲ ಪ್ರಶ್ನೆ ಏನೆಂದರೆ ಕಾನೂನುಗಳ ಕಠಿಣತೆ ಸಾಕೇ? ಅಥವಾ ಅವುಗಳ ಅನುಷ್ಠಾನವೇ ಮುಖ್ಯವೇ?
ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಪ್ರಮುಖ ಕಾನೂನಾಗಿ Prevention of Corruption Act ಜಾರಿಯಾಗಿದೆ. 1988ರಲ್ಲಿ ಪ್ರಾರಂಭವಾದ ಈ ಕಾಯ್ದೆ 2018ರಲ್ಲಿ ತಿದ್ದುಪಡಿ ಕಂಡು ಇನ್ನಷ್ಟು ಬಲಿಷ್ಠಗೊಳಿಸಲಾಯಿತು. ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುವುದು, ಅಧಿಕಾರ ದುರುಪಯೋಗ ಮಾಡುವುದು, ಅಕ್ರಮ ಆಸ್ತಿ ಹೊಂದುವುದು ಮುಂತಾದ ಅಪರಾಧಗಳಿಗೆ ಶಿಕ್ಷೆಯ ವಿಧಾನದ ಮೂಲಕ ಕಾನೂನು ಕಠಿಣವಾಗಿದೆ. ತಿದ್ದುಪಡಿಯ ನಂತರ ಲಂಚ ನೀಡುವವರಿಗೂ ಶಿಕ್ಷೆಯ ವ್ಯಾಪ್ತಿ ವಿಸ್ತರಿಸಲಾಗಿದೆ. ಆದರೆ ಕಾನೂನು ಕಠಿಣವಾಗಿರುವುದೇ ಸಾಕಾಗುವುದಿಲ್ಲ; ಅದನ್ನು ಸಮರ್ಥವಾಗಿ ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಪ್ರಾಮಾಣಿಕತೆ ಅಗತ್ಯ.
ಭ್ರಷ್ಟಾಚಾರ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾಗಿ Central Bureau of Investigation (CBI) ಪರಿಚಿತವಾಗಿದೆ. ಅನೇಕ ದೊಡ್ಡ ಹಗರಣಗಳನ್ನು ಈ ಸಂಸ್ಥೆ ತನಿಖೆ ಮಾಡಿದೆ. ಆದರೆ ಅದರ ಕಾರ್ಯಪದ್ಧತಿ ಬಗ್ಗೆ ರಾಜಕೀಯ ಹಸ್ತಕ್ಷೇಪದ ಆರೋಪಗಳು ಕೇಳಿಬರುತ್ತವೆ. ತನಿಖೆ ಆರಂಭಿಸಲು ಸರ್ಕಾರದ ಅನುಮತಿ ಪಡೆಯಬೇಕಾಗಿರುವ ವ್ಯವಸ್ಥೆ ಕೆಲವೊಮ್ಮೆ ವಿಳಂಬಕ್ಕೆ ಕಾರಣವಾಗುತ್ತದೆ. ಇದರೊಂದಿಗೆ ಪ್ರಕರಣಗಳು ವರ್ಷಗಳ ಕಾಲ ಮುಂದುವರಿಯುವುದರಿAದ ಸಾರ್ವಜನಿಕರಲ್ಲಿ ವಿಶ್ವಾಸ ಕುಗ್ಗುತ್ತದೆ.
ಮತ್ತೊಂದು ಮೇಲ್ವಿಚಾರಣಾ ಸಂಸ್ಥೆಯಾದ Central Vigilance Commission (CVC) ಭ್ರಷ್ಟಾಚಾರ ಸಂಬಂಧಿತ ದೂರುಗಳನ್ನು ಪರಿಶೀಲಿಸುತ್ತದೆ. ಆದರೆ ಇದರ ಶಿಫಾರಸುಗಳಿಗೆ ಬಲವಾದ ಕಾನೂನುಬದ್ಧ ದಂಡಾತ್ಮಕ ಅಧಿಕಾರಗಳ ಕೊರತೆ ಪರಿಣಾಮಕಾರಿತ್ವವನ್ನು ಸೀಮಿತಗೊಳಿಸುತ್ತದೆ ಎಂಬ ಟೀಕೆ ಇದೆ. ಸಂಸ್ಥೆಗಳ ಅಸ್ತಿತ್ವಕ್ಕಿಂತ ಅವುಗಳ ಸ್ವಾಯತ್ತತೆ ಮತ್ತು ಅಧಿಕಾರ ಮುಖ್ಯ.

ಜನರ ಒತ್ತಾಯದ ಫಲವಾಗಿ ಜಾರಿಯಾದLokpal and Lokayuktas Act ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಯಿತು. ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರ ನೇಮಕಾತಿ ಮೂಲಕ ಉನ್ನತ ಹುದ್ದೆಯ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ವ್ಯವಸ್ಥೆ ನಿರ್ಮಾಣವಾಯಿತು. ಆದರೆ ಅನೇಕ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳು ಸಂಪೂರ್ಣ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಉಳಿದಿದೆ. ಸಂಪನ್ಮೂಲಗಳ ಕೊರತೆ ಮತ್ತು ರಾಜಕೀಯ ಒತ್ತಡಗಳು ಪರಿಣಾಮಕಾರಿತ್ವಕ್ಕೆ ಅಡ್ಡಿಯಾಗುತ್ತವೆ.
ಪಾರದರ್ಶಕತೆಯನ್ನು ಹೆಚ್ಚಿಸಿದ ಮಹತ್ವದ ಕಾನೂನಾಗಿ ಗುರುತಿಸಲಾಗಿದೆ. ಈ ಕಾಯ್ದೆ ಸಾಮಾನ್ಯ ನಾಗರಿಕರಿಗೆ ಸರ್ಕಾರದ ಮಾಹಿತಿ ಪಡೆಯುವ ಹಕ್ಕು ನೀಡಿದೆ. ಅನೇಕ ಹಗರಣಗಳು ಖಖಿI ಮೂಲಕ ಬೆಳಕಿಗೆ ಬಂದಿವೆ. ಆದರೆ ಮಾಹಿತಿ ನೀಡುವಲ್ಲಿ ವಿಳಂಬ, ಅರ್ಜಿದಾರರ ಮೇಲೆ ಒತ್ತಡ ಮತ್ತು ಮಾಹಿತಿ ಆಯುಕ್ತರ ಹುದ್ದೆಗಳ ಖಾಲಿತನ ಇವುಗಳ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತವೆ.
ಭ್ರಷ್ಟಾಚಾರವನ್ನು ಬಯಲಿಗೆಳೆಯುವವರ ರಕ್ಷಣೆಗೆ Whistle Blowers Protection Act ಜಾರಿಯಾಯಿತು. ಆದರೆ ಇದರ ಅನುಷ್ಠಾನದಲ್ಲಿ ಹಲವು ಅಡೆತಡೆಗಳಿವೆ. ಭ್ರಷ್ಟಾಚಾರವನ್ನು ಬಹಿರಂಗಪಡಿಸುವವರು ಸುರಕ್ಷಿತವಾಗಿರದ ಪರಿಸ್ಥಿತಿ ಸಮಾಜದಲ್ಲಿ ಆತಂಕ ಹುಟ್ಟಿಸುತ್ತದೆ. ಕಾನೂನು ಕಾಗದದಲ್ಲಿದ್ದರೂ, ನೆಲಮಟ್ಟದಲ್ಲಿ ರಕ್ಷಣೆ ಖಚಿತವಾಗದಿದ್ದರೆ ಅದರ ಅರ್ಥ ಕಡಿಮೆಯಾಗುತ್ತದೆ.
ಕಾನೂನುಗಳಿಗಿಂತಲೂ ದೊಡ್ಡ ಸವಾಲು ನ್ಯಾಯಾಂಗದ ವಿಳಂಬ. ಭ್ರಷ್ಟಾಚಾರ ಪ್ರಕರಣಗಳು ವರ್ಷಗಳ ಕಾಲ ಮುಂದುವರಿತಿಯುತ್ತವೆ. ಶಿಕ್ಷೆಯ ನಿಶ್ಚಿತತೆ ಕಡಿಮೆಯಾದಾಗ ಅಪರಾಧಿಗಳಿಗೆ ಭಯವಿಲ್ಲ. ವಿಶೇಷ ನ್ಯಾಯಾಲಯಗಳು ಮತ್ತು ಸಮಯಬದ್ಧ ವಿಚಾರಣೆ ವ್ಯವಸ್ಥೆ ಬಲಪಡಿಸಿದರೆ ಮಾತ್ರ ಕಾನೂನುಗಳ ಭಯ ಉಂಟಾಗುತ್ತದೆ.
ಡಿಜಿಟಲ್ ಆಡಳಿತವೂ ಭ್ರಷ್ಟಾಚಾರ ತಗ್ಗಿಸಲು ಸಹಾಯಕವಾಗಿದೆ. ಆನ್‌ಲೈನ್ ಸೇವೆಗಳು, ನೇರ ಲಾಭ ವರ್ಗಾವಣೆ , ಇ-ಟೆಂಡರ್ ವ್ಯವಸ್ಥೆಗಳು ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡಿವೆ. ಇದರಿಂದ ಲಂಚದ ಅವಕಾಶಗಳು ಕುಂಠಿತಗೊAಡಿವೆ. ಆದಾಗ್ಯೂ ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ; ಮಾನವ ಮೌಲ್ಯಗಳು ಬಲವಾಗಬೇಕು.
ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ನಾಗರಿಕರ ಪಾತ್ರ ಅತ್ಯಂತ ಮಹತ್ವದ್ದು. “ಕೆಲಸ ಬೇಗ ಆಗಲಿ” ಎಂಬ ಮನೋಭಾವದಿಂದ ಲಂಚ ನೀಡುವವರೂ ಅಪರಾಧಿಗಳೇ ಎಂಬ ಅರಿವು ಸಮಾಜದಲ್ಲಿ ಬೇರೂರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ಕುಟುಂಬದಿAದಲೇ ಪ್ರಾಮಾಣಿಕತೆಯ ಪಾಠ ಆರಂಭವಾಗಬೇಕು.
ಕೊನೆಯಲ್ಲಿ, ಭಾರತದಲ್ಲಿ ಭ್ರಷ್ಟಾಚಾರ ತಡೆಯಲು ಅಗತ್ಯವಾದ ಕಾನೂನುಗಳ ಕೊರತೆಯಿಲ್ಲ. Prevention of Corruption Act, Lokpal and Lokayuktas Act, Right to Information Act, Whistle Blowers Protection Act ಮೊದಲಾದ ಕಾಯ್ದೆಗಳು ಬಲವಾದ ಚೌಕಟ್ಟನ್ನು ಒದಗಿಸುತ್ತವೆ. ಆದರೆ ಅವುಗಳ ಯಶಸ್ಸು ಅನುಷ್ಠಾನ, ಸ್ವಾಯತ್ತತೆ, ವೇಗದ ನ್ಯಾಯ ಮತ್ತು ಸಾರ್ವಜನಿಕ ಜಾಗೃತಿಯ ಮೇಲೆ ಅವಲಂಬಿತವಾಗಿದೆ.
ಭ್ರಷ್ಟಾಚಾರ ವಿರುದ್ಧದ ಹೋರಾಟವು ಕೇವಲ ಕಾನೂನುಗಳ ಹೋರಾಟವಲ್ಲ; ಅದು ಮನೋಭಾವದ ಹೋರಾಟ. ಕಾನೂನುಗಳು ಕತ್ತಿಯಂತಿದ್ದರೂ, ಅದನ್ನು ಹಿಡಿಯುವ ಕೈ ದುರ್ಬಲವಾಗಿದ್ದರೆ ಫಲಿತಾಂಶ ಸಿಗದು. ಪ್ರಾಮಾಣಿಕ ಆಡಳಿತ, ಸ್ವತಂತ್ರ ತನಿಖಾ ಸಂಸ್ಥೆಗಳು, ವೇಗದ ನ್ಯಾಯ ಮತ್ತು ಜಾಗೃತ ನಾಗರಿಕರು ಈ ನಾಲ್ಕು ಸ್ತಂಭಗಳು ಬಲವಾಗಿದ್ದಾಗ ಮಾತ್ರ ಭ್ರಷ್ಟಾಚಾರದ ಬೇರುಗಳನ್ನು ಕತ್ತರಿಸಲು ಸಾಧ್ಯ. ಇಲ್ಲದಿದ್ದರೆ ಕಾನೂನುಗಳ ಕಠಿಣತೆ ಕಾಗದದಲ್ಲೇ ಉಳಿದು, ಭ್ರಷ್ಟಾಚಾರ ಸಮಾಜದ ನರನಾಡಿಗಳಲ್ಲಿ ಮುಂದುವರಿಯುತ್ತಲೇ ಇರುತ್ತದೆ.

Share the Post:

ಇತ್ತೀಚಿನ ಸುದ್ದಿಗಳು