ವಿಜಯಪುರ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆಯ ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು. ಅಪರ ಜಿಲ್ಲಾಕಾರಿಗಳಾದ ಸೋಮಲಿಂಗ ಗೆಣ್ಣೂರ ಅವರ ಮುಖಾಂತರ ಮಾನ್ಯಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷರಾದ ಭೀಮಸೇನ ಕೊಕ್ಕರೆ ಮಾತನಾಡಿ ವಿಜಯಪುರ ಜಿಲ್ಲೆ ಕಳೆದ ಎರಡು ವರ್ಷದಿಂದ ಅನಾವೃಷ್ಟಿ ಮತ್ತು ಅತಿವೃಷ್ಟಿ ಚಕ್ರದಲ್ಲಿ ಶಿಲುಕಿದೆ ಆದರೆ ರೈತರಿಗೆ ಸರಿಯಾಗಿ ಬರಪರಿಹಾರ ಹಾಗೂ ಅತಿವೃಷ್ಟಿ ಪರಿಹಾರ ಸಮರ್ಪಕವಾಗಿ ಇದುವರೆಗೆ ಸಿಕ್ಕಿಲ್ಲ. ಇಲ್ಲಿಯ ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳು ಪರಿಹಾರ ಆಗುತ್ತಿಲ್ಲ. ಆಲಮಟ್ಟಿ 524.256 ಮೀಟರಕ್ಕೆ ಎತ್ತರಿಸಿ ಮುಳುಗಡೆ ಹಳ್ಳಿಗಳ ರೈತರಿಗೆ ವೈಜ್ಞಾನಿಕ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಕ್ರಮ ಕೈಕೊಳ್ಳುವದು. ಕೇಂದ್ರ ಸರಕಾರ ಕೂಡಲೇ ಗೆಜೆಟ್ ನೋಟಿಪಿಕೇಶನ್ ಹೊರಡಿಸಬೇಕು.
ಇದನ್ನೂ ಓದಿ: Vijayapura News | ಬಸವ ವಿಭೂಷಣ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ
ರಾಜ್ಯ ಸರ್ಕಾರ ತಕ್ಷಣ ಈ ಯೋಜನೆಗೆ ಹಣ ಕಾಯ್ದಿರಸಬೇಕು. ಕೃಷ್ಣಾಕೊಳ್ಳದ 3ನೇ ಹಂತದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವದು. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಗೆ 2ನೇ ಹಂತದ ಕಾಮಗಾರಿಗೆ ಹಣವನ್ನು ಇಟ್ಟು ಚಡಚಣ, ಇಂಡಿ, ಬಬಲೇಶ್ವರ ತಾಲೂಕಿನ ಹಳ್ಳಿಗಳ ನೀರಾವರಿ ಒದಗಿಸುವದು. ತಿಡಗುಂದಿ ಶಾಖಾ ಕಾಲುವೆಯಿಂದ ಹೊರ್ತಿ, ಜಿಗಜಿಣಗಿ, ಬಾಗದ ಜೀರಂಕಲಗಿ ಕೆರೆಗಳವರೆಗೆ ತಕ್ಷಣ ನೀರು ಹರಿಸಲು ಕ್ರಮಕೈಕೊಳ್ಳಬೇಕು ಎಂದರು.
ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ನೂತನ ಜಿಲ್ಲಾಧ್ಯಕ್ಷರಾಧ ರವೀಂದ್ರ ಮೆಡೆಗಾರ ಮಾತನಾಡಿ ಇಂಡಿ ಶಾಖಾ ಕಾಲುವೆಯ ಡಿಸ್ಟ್ರಿಬ್ಯುಶನ್ ನಂ: 19, 17ಎ, 16 ಮುಂತಾದ ಉಪಕಾಲುವೆಗಳ ಹೂಳೆತ್ತಿ ಕಾಲುವೆಗಳ ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ಆಗಬೇಕು. ಗುತ್ತಿ ಬಸವಣ್ಣ ಕಾಲುವೆ ಕೊನೆ ಹಂತದವರೆಗೆ ಕಲ್ಲಳ್ಳಿ ಹಳ್ಳಕ್ಕೆ ಟೇಲ್ ಆಫ್ ಮಾಡಬೇಕು. ಗೇಟಗಳಿಗೆ ಸ್ಕಾಡಾ ಗೇಟುಗಳನ್ನು ಅಳವಡಿಸಬೇಕು. ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಅಲ್ಲಲ್ಲಿ ಬಾಕಿ ಉಳಿದ ಕಾಲುವೆಗಳನ್ನು ಪೂರ್ಣಗೊಳಿಸಿ ನೀರು ಕಾಲುವೆ ಕೊನೆ ಭಾಗದ ರೈತರಿಗೆ ಸಿಗುವಂತೆ ಆಗಬೇಕು. ಡೋಣಿ ನದಿ ಹೂಳೆತ್ತಿ ಅದಕ್ಕೆ ಕೃಷ್ಣ ನದಿ ನೀರು ಹರಿಸಬೇಕು.
ಇದನ್ನೂ ಓದಿ: Vijayapura News | ಕನ್ನಡದ ಕುಲ ಗುರು ಡಾ: ಸಿದ್ದಲಿಂಗ ಸ್ವಾಮಿಜಿ | ಹಾಸಿಂಪೀರ ವಾಲಿಕಾರ ಅಭಿಪ್ರಾಯ
ಜಲಾನಯನ ಪ್ರದೇಶ ಅಭಿವೃದ್ಧಿಗೊಳಿಸಬೇಕು ಕಂದಾಯ ಇಲಾಖೆಯಲ್ಲಿ ಸರ್ವೆ, ವಾಟ್ನ, ವಾರಸಾ, ಪೋಡಿ, ಮುಂತಾದ ಪ್ರಕರಣಗಳನ್ನು ಸರಿಯಾಗಿ ಮಾಡದೇ ಸಾರ್ವಜನಿಕರಿಗೆ ಸತಾಯಿಸುವದನ್ನು ನಿಲ್ಲಿಸಲು ಕ್ರಮ ಕೈಕೊಳ್ಳಬೇಕು. ಇಲಾಖೆಯಿಂದ ಯಾವುದೇ ಕಾಗದ ಪತ್ರಗಳು ತಪ್ಪಾಗಿ ದಾಖಲಾಗಿದ್ದರೆ ಇಲಾಖೆ ಸರಿಪಡಿಸಿಕೊಳ್ಳಬೇಕು. ಅದನ್ನು ರೈತರ ಮೇಲೆ ಹೊರೆ ಹಾಕಬಾರದು. ವಿಮೆ ಬರಪರಿಹಾರ : ಕೇಂದ್ರದಿಂದ ಬಂದಂತಹ ಬರಪರಿಹಾರದ ಹಣ ರಾಜ್ಯ ಸರಕಾರದಿಂದ ರೈತರಿಗೆ ಸರಿಯಾಗಿ ವಿತರಣೆ ಆಗಿಲ್ಲ.
ವಿಜಯಪುರ ಜಿಲ್ಲೆಯಲ್ಲಿ ವಕ್ಸ್ ಬೋರ್ಡಿನವರು ನೂರಾರು ವರ್ಷಗಳಿಂದ ರೈತರು ಅವರ ಪೂರ್ವಜರ ಆಸ್ತಿಯಲ್ಲಿ ಸಾಗುವಳಿ ಮಾಡುತ್ತಾ ಇದ್ದು, ಅಂತವರಿಗೂ ಕೂಡಾ ಒಕ್ಕಲೆಬ್ಬಿಸಲು ರೈತರಿಗೆ ನೋಟಿಸನ್ನು ಕೊಟ್ಟಿರುವರು. ಈ ಕಾನೂನು ಅನ್ಯಾಯವಾಗಿದೆ ಈ ಕಾನೂನು ದರಕಾಸ್ತು ಮಾಡಬೇಕು. ಒಮ್ಮಿಂದಲೇ ಯಾರದೋ ಹಿತಾಸಕ್ತಿಗೆ ರೈತರನ್ನು ಒಕ್ಕಲೆಬ್ಬಿಸಿದರೆ ರೈತರು ಹಾಗೂ ಜನಾಂಗಗಳ ಮಧ್ಯದಲ್ಲಿ ಸಂಘರ್ಸ ಏಳುವದು. ಕಾರಣ ಕೂಡಲೇ ಕೇಂದ್ರ ಸರ್ಕಾರ, ಹಾಗೂ ರಾಜ್ಯ ಸರಕಾರ ಈ ಕಾನೂನನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: Vijayapura News | ಶಿಕ್ಷಕರ ಯಶಸ್ಸು ಅವರು ಮಾಡುವ ಕಾರ್ಯಗಳಲ್ಲಿ ಇರುತ್ತದೆ – ಡಾ ಶ್ರೀಮತಿ ಎಸ್ ಟಿ ಬೋಳರೆಡ್ಡಿ
ಈ ಸಂದರ್ಭದಲ್ಲಿ ಗುರುನಾಥ ಬಗಲಿ ರಾಜ್ಯ ಕಾರ್ಯಕರಿಣಿ ಸದಸ್ಯರು, ಮಲ್ಲನಗೌಡ ಪಾಟೀಲ ಮಾಜಿ ಜಿಲ್ಲಾಧ್ಯಕ್ಷರು, ಪುಟ್ಟಸ್ವಾಮಿ ಸಂಘಟನಾ ಕಾರ್ಯದರ್ಶಿ, ಮಾಧವ ಹೆಗಡೆ ಪ್ರ. ಕಾರ್ಯದರ್ಶಿ, ಈರಪ್ಪ ಗೊಟ್ಯಾಳ, ಎಸ್.ಎಸ್. ಬಿರಾದಾರ ಸಂತೋಷ ದೇಸಾಯಿ, ಬಸವರಾಜ ಡೋಮನಾಳ, ಮಹಾಂತೇಶ ಬಾಗೇವಾಡಿ, ಅಣ್ಣಾಸಾಹೇಬ ಸಾವಳಗಿ, ಶ್ರೀಮತಿ ಲಕ್ಷ್ಮೀ, ಶಿರಮಗೊಂಡ, ಬಸವರಾಜ ಏಲೋಡಗಿ, ವಿಠ್ಠಲ ಏಳಗಿ, ಪೀರಪ್ಪ ಕರಡಿ, ನಾಗರಾಜ, ನಿಂಗನಗೌಡ ಬಗಲಿ, ಅರುಣಗೌಡ ತೇರದಾಳ, ಶ್ರೀಶೈಲ ಜಾಲಗೇರಿ, ಕಾಶಿಬಾಯಿ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.






