Vijayapura News | ೧೯೭೪ ರ ವಕ್ಫ ಕಾಯ್ದೆ ಗೆಜೆಟ್ ರದ್ದುಗೊಳಿಸಲು ನಾಳೆ ಬಿಜೆಪಿಯಿಂದ ಧರಣಿ ಸತ್ಯಾಗ್ರಹ

ಬಿಜೆಪಿ ಪಕ್ಷದಿಂದ ಧರಣಿ ಸತ್ಯಾಗ್ರಹ image

ವಿಜಯಪುರ: ೧೯೭೪ರ ವಕ್ಫ ಗೆಜೆಟ್ ರದ್ದುಗೊಳಿಸುವಂತೆ ಆಗ್ರಹಿಸಿ ನ.೨೨ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಪಕ್ಷದಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ತಿಳಿಸಿದ್ದಾರೆ.

ಸಚಿವ ಜಮೀರ ಅಹ್ಮದ ಖಾನಗ ರಾಜ್ಯಾದ್ಯಂತ ವಕ್ಫ ಅದಾಲತ್ ನಡೆಸಿ ಪಹಣಿಯಲ್ಲಿ ವಕ್ಫ ಹೆಸರು ಸೇರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಹೇಳುತ್ತಿದ್ದೆನೆಂದು ಅಧಿಕಾರಿಗಳಿಗೆ ಒತ್ತಡ ಹೇರಿದ್ದರು.

ಇದನ್ನೂ ಓದಿ: Vijayapura News | 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ | ಕ್ರೀಡೆ ಎನ್ನುವುದು ಕೇವಲ ಒಂದು ದಿನದ ಚಟುವಟಿಕೆಯಾಗಬಾರದು | ಕ್ರೀಡಾಪಟು ಬಿಂದು ರಾಣಿ ಜಿ.

ಬಿಜೆಪಿ ಪಕ್ಷದಿಂದ ಧರಣಿ ಸತ್ಯಾಗ್ರಹ ಈಗಾಗಲೇ ವಿಜಯಪುರ ಅಲ್ಲದೇ ರಾಜ್ಯಾದ್ಯಂತ ಅನೇಕ ರೈತ ಕುಟುಂಬಗಳು ಮಠ ಮಾನ್ಯಗಳ ಆಸ್ತಿಯಲ್ಲಿ ವಕ್ಫ ಹೆಸರು ನಮೂದಾಗಿದ್ದನ್ನು ಕಂಡು ರೈತ ಸಮೂಹ ಆತಂಕಕ್ಕೀಡಾಗಿತ್ತು. ತದನಂತ ಸಿಎಂ ಸಿದ್ದ ರಾಮಯ್ಯ ರೈತರಿಗೆ ನೀಡಿದ ವಾಪಸ್ ಹಿಂಪಡೆಯಲು ತಿಳಿಸಿದಾಗಲೂ ದಾಖಲೆಯಲ್ಲಿ ವಕ್ಫ ಹೆಸರು ಇತ್ತು. ಆದ್ದರಿಂದ ೧೯೭೪ರ ವಕ್ಫ ಆಸ್ತಿ ಸಂಪೂರ್ಣ ರದ್ದು ಆಗುವರೆಗೂ ಈ ಹೋರಾಟ ನಿಲ್ಲಿಸುವದಿಲ್ಲ.

ನ.೨೨ ರಂದು ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದರು ನಡೆಯುವ ಈ ಧರಣಿ ಸತ್ಯಾಗ್ರಹಕ್ಕೆ ರೈತ ನಾಯಕರು ರೈತ ಸಂಘಟನೆಗಳು ಮಠಾಧೀಶರುಗಳು ರೈತ ಪರ ಚಿಂತಕರು ಪಾಲ್ಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Vijayapura News | ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಆಹ್ವಾನ

ಅಲ್ಲದೆ ಜಿಲ್ಲೆಯ ಸಂಸದರು ಶಾಸಕರು ಮಾಜಿ ಸಚಿವರು ಮಾಜಿ ಶಾಸಕರು ಮುಖಂಡರು ಕಾರ್ಯಕರ್ತರು ಮಹಿಳಾ ಮುಖಂಡರು ಭಾಗವಹಿಸಲಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »