ವಿಜಯಪುರ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿಜಯಪುರ ಜಿಲ್ಲಾ ಪ್ರಾಥಮಿಕ ಶಾಲೆ ಮತ್ತು ಬಬಲೇಶ್ವರ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬಬಲೇಶ್ವರ ಶ್ರೀ ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಶಿಕ್ಷಕರ ದಿನೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಜರುಗಿತು.
ಡಾ. ಸರ್ವಪಲ್ಲಿ ರಾಧಾಕೃಷ್ಣನರವರ ಭಾವಚಿತ್ರದ ಮೆರವಣಿ ಬಬಲೇಶ್ವರ ಮಹಾತ್ಮಾ ಗಾಂಧಿ ವೃತ್ತದಿಂದ ಮೆರವಣಿಗೆ ವಿದ್ಯಾರ್ಥಿನಿಯರು ಡೊಳ್ಳು ಕುಣಿತದ ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗಣ್ಯರು ಸಾಗಿದರು. ಬಾಪೂಜಿ ಶಾಲೆಯಲ್ಲಿ ಕವಿ ಶಂ.ಗು. ಬಿರಾದಾರ ವೇದಿಕೆಯ ಮೇಲೆ ಕಾರ್ಯಕ್ರಮ ಜರುಗಿತು. ದಿವ್ಯ ಸಾನಿಧ್ಯವನ್ನು ಪೂಜ್ಯ ಡಾ. ವಿವೇಕಾನಂದ ದೇವರು ಶ್ರೀ ಕಲ್ಯಾಣಿಶ್ವರ ಹಿರೇಮಠ ಸಾ. ಗುಣದಾಳ ವಹಿಸಿದ್ದರು. ಪೂಜ್ಯರು ಆಶೀರ್ವಚನ ನೀಡಿ ಮಾತನಾಡಿ ಶಾಲೆ ಶಿವಾಲಯ ವಿದ್ದ ಹಾಗೆ ಮಗುವೇ ದೇವರು ಗುರುಗಳೇ ಅರ್ಚಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Vijayapura News : ವಿಠ್ಠಲ ಎಮ್. ಗಣಿ ಹೃದಯಸ್ಪರ್ಶಿ ಅಭಿನಂದನ ಸಮಾರಂಭ
ಹಣಮಂತ ನಿರಾಣಿ ಶಾಸಕರು ವಿಧಾನ ಪರಿಷತ್ ರವರು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. 2006 ರಿಂದ ನೇಮಕವಾದ ಶಿಕ್ಷಕರಿಗೆ ಸರಕಾರ ಓಪಿಎಸ್ ಪಿಂಚನಿಯಾ ಕೊಟ್ಟಲ್ಲಿ ಎನ್.ಪಿ.ಎಸ್. ಪಿಂಚನಿಯಾ ನೀಡಿಲ್ಲ ಹೀಗಾಗಿ ಅವರು ನಿವೃತ್ತಿಯಾದ ಮೇಲೆ ಹೇಗೆ ಜೀವನ ಸಾಗಿಸಬೇಕು ಎಂದು ನುಡಿದರು. ನಾನು ಪಿಂಚನಿಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.
ವಿ.ಎನ್. ಬಿರಾದಾರ ರವರು ಜ್ಯೋತಿ ಬೆಳಗಿಸಿ ಮಾತನಾಡಿ ರಾಜ್ಯದಲ್ಲಿ ಕನ್ನಡ ಶಾಲೆಗಳ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಸರ್ಕಾರ ಸಾಕಷ್ಟು ಸಹಾಯ ಮಾಡಿದರೂ ಮಕ್ಕಳ ದಾಖಲಾತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ನುಡಿದರು.
ಸಂಗಮೇಶ ಬಬಲೇಶ್ವರ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಅವರು ಮಾತನಾಡಿ ಗುರು ದೇವೋಭವ ಎನ್ನುವಂತೆ ಶಿಕ್ಷಕರಿಂದ ಮಾತ್ರ ಆರೋಗ್ಯವಂತ ಸಮಾಜವನ್ನು ನಿಮಿಸಲು ಸಾಧ್ಯ. ಅದರಂತೆ ರಾಜ್ಯ ರಾಷ್ಟ್ರ ಪ್ರಶಸ್ತಿ ರಾಜ್ಯೋತ್ಸವ ಪುರಸ್ಕøತ ಶಿಕ್ಷಕರು ಖ್ಯಾತ ಸಾಹಿತಿಗಳು ಆದ ಕವಿ ಶಂ.ಗು. ಬಿರಾದಾರ ಅವರ ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ಎಂಬ ಕವಿತೆಯನ್ನು ಮಕ್ಕಳ ನಾಡಗೀತೆಯನ್ನಾಗಿ ಮಾಡಿ ಪ್ರತಿದಿನ ಮಕ್ಕಳು ಶಾಲೆಯಲ್ಲಿ ಅದನ್ನು ಹಾಡುವಂತಾಗಬೇಕು. ಇಂದಿನ ಮಕ್ಕಳಿಗೆ ಅಂತಹ ಗೀತೆಯ ಅವಶ್ಯಕತೆ ಇದೆ ಈ ಗೀತೆಯನ್ನು ನಿರಂತರ ಶಾಲೆಯಲ್ಲಿ ಹಾಡುವಂತಾಗಲು ರಾಜ್ಯ ಸರಕಾರ ಕ್ರಮಕೈಗೊಳ್ಳತ್ತದೆ ಎಂದು ನುಡಿದರು.
ಇದನ್ನೂ ಓದಿ: Vijayapura News : ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಅರಿವು ಮೂಡಿಸಿದ ಲೊಯೋಲ ಕೈಗಾರಿಕಾ ತರಬೇತಿ ಸಂಸ್ಥೆ
ಎನ್.ರಾಜಗೋಪಾಲ ಅನುದಾನಿತ ಶಾಲೆಗಳ ರಾಜ್ಯಾಧ್ಯಕ್ಷರು ಮಾತನಾಡಿ ಸರಕಾರ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು. ಇಲ್ಲವೆಂದರೆ ಕನ್ನಡ ಶಾಲೆಗಳು ನಶಿಸಿ ಹೋಗುತ್ತವೆ. ಎಂದು ನುಡಿದರು. ಜಿ. ಹಣಮಂತಪ್ಪ ಅಧ್ಯಕ್ಷರು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಬೆಂಗಳೂರು ಅವರು ಮಾತನಾಡಿ 140 ದಿನ ಶಿಕ್ಷಕರು ಶಾಂತ ರೀತಿಯ ಹೋರಾಟ ಮಾಡಿ ಇಬ್ಬರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡರು ಆದರೂ ಇನ್ನೂವರೆಗೂ ನಮಗೆ ನಿವೃತ್ತಿಯಾದ ಬಳಿಕ ಯಾವುದೇ ಪಿಂಚನಿ ಇಲ್ಲದಿರುವುದು ಸಂವಿಧಾನಕ್ಕೆ ನಾವು ಮಾಡಿದ ಅಪಚಾರವಾಗುತ್ತದೆ. ಎಂದು ನುಡಿದರು. ಸರಕಾರ ಬೇಗ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಎಂದು ನುಡಿದರು.
ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲೆಯ ಅಧ್ಯಕ್ಷ ಶಿವಾನಂದ ಹಿರೇಕುರಬರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬಸನಗೌಡ ಬಿರಾದಾರ, ಬಿಸ್ಮಿಲ್ಲಾ ರಹಿಮಾನ ಸಿಕ್ಕಲಗಾರ, ಬಸವರಾಜ ಮಾಡ್ಯಾಳ, ಎಚ್.ಎಂ. ಬೋರಾವತ, ಚಂದ್ರಶೇಖರ ಲಮಾಣಿ, ಶ್ರೀಮತಿ ಕಮಲಾ ಕೊಟ್ಯಾಳ, ಎಂ.ಜಿ. ಚೌಧರಿ, ಪ್ರಕಾಶ ಕಟ್ಟಿಮನಿ, ನಾಗಪ್ಪ ಬೇನೂರ ಅವರನ್ನು ಸನ್ಮಾನಿಸಿ ಗೌರವಿಸಿದರು. 2023-24ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದೇ ಸಂದರ್ಭದಲ್ಲಿ ದೇಶ ಸೇವೆಗೈದು ನಿವೃತ್ತರಾದ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಟಿ. ರವಿಕುಮಾರ ನಿಕಟಪೂರ್ವ ರಾಜ್ಯ ಕಾರ್ಯದರ್ಶಿಗಳು ಬೆಂಗಳೂರು ಎನ್. ಎಚ್. ನಾಗೂರ ಉಪನಿರ್ದೇಶಕರು, ವಿಜಯಪುರ ವಪ್ಪಾರಿ, ರಾಜ್ಯ ಕಾರ್ಯದರ್ಶಿಗಳು ರಂಜಿತ ಬಾಬರ ಅಶೋಕಗೌಡ ಮೇಲಾಶಂಕರ ಸಂಗಪ್ಪ, ತಮಗೊಂಡ, ಶ್ರೀಶೈಲಗೌಡ ಬಿ. ಪಾಟೀಲ, ವಿ.ಎಸ್. ಕಳಸಗೊಂಡ, ವಿ.ಎಸ್. ಪಾಟೀಲ ಮಾಜಿ ಜಿ.ಪಂ. ಅಧ್ಯಕ್ಷರು, ಗಿರೀಶ ಬಿರಾದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀಶೈಲಗೌಡ ಬಿರಾದಾರ ಬಬಲೇಶ್ವರ ತಾಲೂಕಾ ಅಧ್ಯಕ್ಷರು ರೋಹಿಣಿ ಚವ್ಹಾಣ ಉಪಸ್ಥಿತರಿದ್ದರು. ಬಸನಗೌಡ ಬಿರಾದಾರ ಸರ್ವರನ್ನು ಸ್ವಾಗತಿಸಿದರು. ಎಂ.ಎಸ್. ಧನ್ಯಾಳ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಪಾರಶೆಟ್ಟಿ ವಂದಿಸಿದರು.






