ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲೋಕಾಯುಕ್ತ ಪೊಲೀಸರ ಬಲೆಗೆ: 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಇಂಜಿನಿಯರ್

ಲಂಚ image

ವಿಜಯಪುರ ನ.18: ಗುತ್ತಿಗೆದಾರನ ಬಿಲ್ ಪಾವತಿಗೆ 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟ ಕೃಷ್ಣಾ ಮೇಲ್ದಂಡೆ ಯೋಜನೆ ಪುರ್ನವಸತಿ ಮತ್ತು ಪುನರ್ ನಿರ್ಮಾಣ ಇಲಾಖೆ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಲಮಟ್ಟಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಪ್ಪ ಎಸ್.ಮಂಜಿನಾಳ ಗುತ್ತಿಗೆದಾರನೊಬ್ಬನ 5.38 ಕೋಟಿ ರೂ. ಮೊತ್ತದ ಬಿಲ್ಲಿನಲ್ಲಿ ಕೊನೆಯ ಕಂತು 32 ಲಕ್ಷ ಬಿಲ್ ಪಾಸ್ ಮಾಡಲು ತನ್ನ ಕಾರಿನ ಚಾಲಕ ಬಸನಗೌಡ ಗೌಡರ ಅವರೊಂದಿಗೆ ದಿನಾಂಕ : 17-11-2023 ರಂದು ಆಲಮಟ್ಟಿಯ ಟೂರಿಸ್ಟ್ ಹೊಟೆಲ್ ಎದುರಿಗೆ 5 ಲಕ್ಷ ರೂ. ಲಂಚದ ಹಣವನ್ನು ಪಡೆದು ಸರಕಾರಿ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್‍ರು ದಾಳಿ ಮಾಡಿ, ಲಂಚದ ಹಣವನ್ನು ಜಪ್ತು ಮಾಡಿ ಆರೋಪಿತ ಶಿವಪ್ಪ ಎಸ್.ಮಂಜಿನಾಳ ಹಾಗೂ ಕಾರು ಚಾಲಕ ಬಸನಗೌಡ ಗೌಡರ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »