ವಿಜಯಪುರ: ಜಿಲ್ಲೆಯಲ್ಲಿ 5 ಸಾವಿರ ಮೆ.ವ್ಯಾ. ಪವನ ವಿದ್ಯುತ್ ಘಟಕ : ಗಾಳಿಯಿಂದ ವಿದ್ಯುತ್ ತಯಾರಿಸಲು ವಿಜಯಪುರ ಜಿಲ್ಲೆಯು ದೇಶದಲ್ಲೇ ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಇದನ್ನು ಮನಗಂಡಿರುವ ಸುಜ್ಲಾನ್ ಕಂಪನಿಯು ಜಿಲ್ಲೆಯಲ್ಲಿ 5,000 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದಕ್ಕಾಗಿ 100 ಎಕರೆ ಭೂಮಿಯನ್ನು ಕಂಪನಿಗೆ ಒದಗಿಸಲಾಗುವುದು. ರೆನೈಸಾನ್ಸ್ ಕಂಪನಿಯು ಜಿಲ್ಲೆಯಲ್ಲಿ ಸೌರಫಲಕ ಬಿಡಿ ಭಾಗಗಳ ತಯಾರಿಕೆ ಘಟಕವನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 6,000 ಕೋಟಿ ರೂ.ಗಳನ್ನು ಬಂಡವಾಳವಾಗಿ ಹೂಡಲಿದೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ದಿನಾಚರಣೆ: ಜಿಲ್ಲೆಯ ಕೊಡುಗೆ ಅನನ್ಯ MB Patil
ಈ ನಿಟ್ಟಿನಲ್ಲೂ ಕಂಪನಿಯೊಂದಿಗೆ ಮಾತುಕತೆ ನಡೆದಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಕಂಪನಿಯು ತನ್ನ ಚಟುವಟಿಕೆಗಳನ್ನು ಆರಂಭಿಸಲಿದೆ. ಮುಂದಿನ 6-7 ವರ್ಷಗಳಲ್ಲಿ ಕಂಪನಿಯು 20,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.ಇಲ್ಲಿಗೆ ಸಮೀಪದ ಮುಳವಾಡದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಇರುವ 300 ಎಕರೆ ಪ್ರದೇಶದಲ್ಲಿ ಪವನ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೈಗಾರಿಕಾ ತಾಣ: ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮೆಷಿನರೀಸ್ & ಎಕ್ವಿಪ್ಮೆಂಟ್, ನಾನ್-ಮೆಟಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸೂಟಿಕಲ್ಸ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ & ಲೋಹೋತ್ಪನ್ನ- ಈ ಆರು ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಪಿಎಲ್ ಪಡಿತರ ಚೀಟಿ: ಅನರ್ಹರು ಎಷ್ಟು ಗೋತ್ತಾ?
ಶೀಘ್ರವೇ ವಿಮಾನ ಹಾರಾಟ: ಜನರಿಗೆ ಆರ್ಥಿಕ ಶಕ್ತಿ ಬಂದಂತೆ ವಿಮಾನ ಪ್ರಯಾಣ ಪ್ರಾಥಮಿಕ ಅಗತ್ಯವಾಗಿದೆ. ಇದಕ್ಕೆ ತಕ್ಕಂತೆ ವಿಜಯಪುರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲವೂ ನಿಗದಿಯಂತೆ ನಡೆದಿದ್ದರೆ, ಇದು ಈ ವೇಳೆಗೆ ಉದ್ಘಾಟನೆ ಆಗಬೇಕಿತ್ತು. ಆದರೆ ಮಧ್ಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಕೇಂದ್ರದ ಅನುಮತಿ ಸಿಕ್ಕ ನಂತರ ಆದಷ್ಟು ಬೇಗ ಉದ್ಘಾಟನೆ ಮಾಡಲಾಗುವುದು. ಈ ಯೋಜನೆಗೆಂದು 347.92 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಇಲ್ಲಿ ರಾತ್ರಿ ವೇಳೆಯೂ ವಿಮಾನಗಳ ಲ್ಯಾಂಡಿಂಗ್, ಎ-320 ಮಾದರಿಯ ವಿಮಾನಗಳ ಸೇವೆ ಎಲ್ಲವೂ ಇರಲಿವೆ. ಇದರಿಂದ ಕೃಷಿಪೂರಕ ಉದ್ಯಮಗಳು, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ತೋಟಗಾರಿಕೆ ಬೆಳೆಗಳ ರಫ್ತು, ಶೈಕ್ಷಣಿಕ ಚಟುವಟಿಕೆಗಳು, ಪ್ರವಾಸೋದ್ಯಮ ಎಲ್ಲವೂ ಗರಿಗೆದರಲಿವೆ ಎಂದು ಹೇಳಿದರು.
ಇದನ್ನೂ ಓದಿ: ಬಿ.ಎಸ್.ಪಾಟೀಲ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ.
ಜಿಲ್ಲೆಯಲ್ಲಿ ಚಿಟ್ ಫಂಡ್ ಕಚೇರಿ: ರಾಜ್ಯದ ವಿದ್ಯುತ್ ಚಾಲಿತ ವಾಹನಗಳ ವಲಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಯ ಖಾತ್ರಿ ನಮಗೆ ಸಿಕ್ಕಿದ್ದು, ಇದರಿಂದ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನು ಪರಿಗಣಿಸಿ, 2024-29ರ ಅವಧಿಗೆ ಚಾಲೂ ಆಗುವಂತೆ ಕ್ಲೀನ್ ಮೊಬಿಲಿಟಿ ಪಾಲಿಸಿಯನ್ನು ರೂಪಿಸಲಾಗಿದೆ. ಸÀರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ.ಎಲ್) ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೇವಲ 410 ಕೋಟಿ ರೂಪಾಯಿ ಇದ್ದ ಚಿಟ್ ಫಂಡ್ ವ್ಯವಹಾರವನ್ನು ರೂ 5,000 ಕೋಟಿಗೆ ವಿಸ್ತರಿಸುವ ಉದ್ದೇಶ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಅದಕ್ಕೆ ಚಾಲನೆ ಸಿಗಲಿದೆ. ಸದ್ಯ 23 ಶಾಖೆಗಳಿರುವ ಚಿಟ್ ಫಂಡ್ ಶಾಖೆಗಳನ್ನು 100ಕ್ಕೆ ಹೆಚ್ಚಿಸಲಾಗುವುದು. ಮೊದಲ ಹಂತದಲ್ಲಿ ವಿಜಯಪುರದಲ್ಲೂ ಒಂದು ಚಿಟ್ ಫಂಡ್ ಕಚೇರಿ ತೆರೆಯಲಾಗುವುದು ಎಂದು ಹೇಳಿದರು. ಪವನ
ಮೆಘಾ ಔಷಧ ಮಳಿಗೆ ರಾಜ್ಯದಲ್ಲಿ 10 ಮೆಗಾ ಔಷಧ ಮಳಿಗೆಗಳನ್ನು ಆರಂಭಿಸುತ್ತಿದ್ದು, ಅದರಲ್ಲಿ ಒಂದನ್ನು ವಿಜಯಪುರದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಇವೆರಡಕ್ಕೂ ಚಾಲನೆ ನೀಡಲಾಗುವುದು. ರಾಜ್ಯದಲ್ಲಿನ 83 ಜನೌಷಧಿ ಕೇಂದ್ರಗಳನ್ನು ಆಧುನೀಕರಿಸುವ ಕೆಲಸ ಕೂಡ ಕೈಗೆತ್ತಿಕೊಳ್ಳಲಾಗುವುದು. ಎಂಎಎಸ್ಐಎಲ್ ತನ್ನ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಎರಡು ತಿಂಗಳಲ್ಲಿ 73 ಮಂದಿ ಅಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಒಟ್ಟಾರೆ 3,759 ಕೋಟಿ ರೂ ವಹಿವಾಟು ನಡೆಸಿರುವ ಎಂಎಸ್ಐಎಲ್ 103 ಕೋಟಿ ರೂ ಲಾಭ ಗಳಿಸಿದೆ. ಇದು ಕಳೆದ ವರ್ಷಕ್ಕಿಂತ 62 ಕೋಟಿ ರೂಪಾಯಿ ಹೆಚ್ಚು ಲಾಭ ಗಳಿಸಿದೆ.
ಇದನ್ನೂ ಓದಿ: ಕಳಪೆ ಸ್ಪ್ರಿಂಕ್ಲರ್: ಬ್ಲಾಕ್ ಲಿಸ್ಟ್ಗೆ ಸೇರಿಸಲು ರೈತ ಸಂಘ ಒತ್ತಾಯ
ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ದಿ: ವಿಜಯಪುರ ಮಹಾನಗರದ ಜನತೆಗೆ ವಾಯು ವಿಹಾರಕ್ಕಾಗಿ 6 ಸ್ಥಳಗಳನ್ನು ಗುರುತಿಸಲಾಗಿದ್ದು, 1) ಭೂತನಾಳ ಕೆರೆ 2) ಬೇಗಂ ತಲಾಬ್ ಕೆರೆ ಆವರಣಗಳು 3) ಗೋಲಗುಂಬಜ್ 4) ಇಬ್ರಾಹಿಂ ರೋಜಾ 5) ಕುಮಟಗಿ ಕೆರೆ ಬೇಸಿಗೆ ಅರಮನೆ 6) ಕರಾಡ ದೊಡ್ಡಿ ಮಾನವ ನಿರ್ಮಿತ ಅರಣ್ಯ ಇವುಗಳನ್ನು ಸÀರಕಾರ ಹಾಗೂ ಖಾಸಗಿ ಸಿಎಸ್ಆರ್ ಅನುದಾನದಲ್ಲಿ ಅಭಿವೃದ್ಧಿಗೊಳಿಸಿ ಮನಮೋಹಕ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ನಾನು ವಿಶೇಷ ಆಸಕ್ತಿ ಹೊಂದಿದ್ದೇನೆ. ವಿಜಯಪುರ ನಗರದ ಸೌಂದರ್ಯಕ್ಕಾಗಿ ಅಮೃತ 2.0 ಯೋಜನೆಯಡಿಯಲ್ಲಿ 5 ಕೋಟಿ ಮೊತ್ತದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.400 ವರ್ಷಗಳ ಇತಿಹಾಸವಿರುವ ಐತಿಹಾಸಿಕ ತಾಜ್ ಬಾವಡಿಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತದ ವತಿಯಿಂದ ಟಾಟಾ ಕನ್ಸ್ಲ್ಟನ್ಸಿ ಸರ್ವಿಸಸ್ ಇವರ ಸಹಯೋಗದೊಂದಿಗೆ 8 ಕೋಟಿ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದಲ್ಲಿನ ವಿವಿಧ ಐತಿಹಾಸಿಕ ಬಾವಡಿಗಳನ್ನು ಈ ಹಿಂದೆ ಸ್ವಚ್ಚಗೊಳಿಸಲಾಗಿದ್ದು, ಇವುಗಳನ್ನು ಸುಸ್ಥಿತಿ ಇಟ್ಟುಕೊಳ್ಳಲು ಸಾರ್ವಜನಿಕರು ಇಲ್ಲಿನ ನೀರನ್ನು ತಮ್ಮ ನಿತ್ಯದ ಬಳಕೆಗೆ ಉಪಯೋಗಿಸಿದರೆ, ಕುಡಿಯುವ ನೀರು ಸರಬರಾಜು ಮೇಲಿನ ಒತ್ತಡ ಕಡಿಮೆಯಾಗಿ ನೀರಿನ ಲಭ್ಯತೆ ವಿಫುಲವಾಗುವುದು. ಇದಕ್ಕೆ ಹೆಚ್ಚು ಒತ್ತು ನೀಡಲಾಗುವುದು.
ನಗರ ಹಸರೀಕರಣಕ್ಕೆ ಆದ್ಯತೆ: ವಿಜಯಪುರ ನಗರದ ಸೌಂದರ್ಯೀಕರಣ ಮಾಡುವ ದೃಷ್ಟಿಯಿಂದ ನಗರದ ಎಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ವಿವಿಧ ವಾರ್ಡಗಳಲ್ಲಿ 12,000 ಸಸಿಗಳನ್ನು ನೆಟ್ಟು ನಗರದ ಹಸರೀಕರಣವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಇಂದಿರಾ ಕ್ಯಾಂಟೀನ್ ಸ್ಥಾಪನೆಯ 2ನೇ ಹಂತದ ಭಾಗವಾಗಿ ಜಿಲ್ಲೆಯ 13 ನಗರ-ಪಟ್ಟಣ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣ ಕಾರ್ಯವು ಭರದಿಂದ ಸಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಕಾರ್ಯವು ಪ್ರಾರಂಭಿಸಲಾಗುವುದು. ನಗರಾಭಿವೃದ್ಧಿ ಇಲಾಖೆಯಿಂದ ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ವಿಜಯಪುರ ನಗರದ ಅಭಿವೃದ್ಧಿಗಾಗಿ 250-300 ಕೋಟಿ ಅನುದಾನ ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಇದರಿಂದ ನಗರದ ಮುಖ್ಯರಸ್ತೆಗಳು, ವಿವಿಧ ವಾರ್ಡುಗಳ ರಸ್ತೆಗಳು, ಚರಂಡಿ, ಇತ್ಯಾದಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಮಾಡಲಾಗುವುದು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2024-25 ನೇ ಸಾಲಿನಲ್ಲಿ ಜಿಲ್ಲೆಗೆ 42 ಲಕ್ಷ ಮಾನವ ದಿನಗಳ ಗುರಿ ನೀಡಿದ್ದು, ಜುಲೈ-2024 ರ ಅಂತ್ಯದವರೆಗೆ 17.60 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಶೇಕಡಾ 93 ರಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದರು.
2024-25ನೇ ಸಾಲಿನ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಬಡ್ಡಿ, ಖೋ ಖೋ, ಬಾಸ್ಕೇಟ್ ಬಾಲ್, ವಾಲಿಬಾಲ್ ಹಾಗೂ ರನ್ನಿಂಗ್ ಟ್ರಾö್ಯಕ್ಗಳೂ ಸೇರಿ ಒಟ್ಟು 189 ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ ಮತ್ತು ವಿಲೇವಾರಿಗಾಗಿ 211 ಗ್ರಾಮ ಪಂಚಾಯತಗಳ ಪೈಕಿ 173 ರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸಿವಿಲ್ ಕಾಮಗಾರಿಯು ಪೂರ್ಣಗೊಂಡಿದೆ. 38 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.ಜಲಜೀವನ್ ಮಿಷನ್ ಯೋಜನೆಯ 4ನೇ ಹಂತದ ಕಾಮಗಾರಿಗಳಿಗಾಗಿ 897 ಕೋಟಿ ರೂಪಾಯಿಗಳ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದ್ದು ಇಲ್ಲಿಯವರೆಗೂ 473.70 ಕೋಟಿ ರೂಪಾಯಿಗಳ ಮೊತ್ತವನ್ನು ವಿನಿಯೋಗಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.





