Bagalkote News : ನೀರಾವರಿ & ರಸಾವರಿ ಕುರಿತು ತರಬೇತಿ | ವಿವಿಧ ರಾಜ್ಯದ 32 ಜನರಿಗೆ ತರಬೇತಿ | ತೋಟಗಾರಿಕೆಯಲ್ಲಿ ಸಾಕಷ್ಟು ಅವಕಾಶ : ಡಾ.ಕುಲಕರ್ಣಿ

ನೀರಾವರಿ ಮತ್ತು ರಸಾವರಿ ತರಬೇತಿ image

ಬಾಗಲಕೋಟೆ: ನೀರಾವರಿ ಮತ್ತು ರಸಾವರಿ ತರಬೇತಿ ದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶವಿದ್ದು, ಮಿತವಾದ ನೀರು ಪೋಷಕಾಂಶ ಉಪಯೋಗಿಸಿ ಬೆಳೆಯುವದರಿಂದ ಹೆಚ್ಚಿನ ಆದಾಯ ಪಡೆಯಲು ಸಾದ್ಯವೆಂದು ತೋವಿವಿಯ ಡೀನ್ ಡಾ.ಬಾಲಾಜಿ ಕುಲಕರ್ಣಿ ಹೇಳಿದರು.

ತೋವಿವಿಯ ಆವರಣದಲ್ಲಿರುವ ದಾಳಿಂಬೆ ಉತ್ಕøಷ್ಟ ಕೇಂದ್ರದಲ್ಲಿ ಇಂಡೋ-ಇಸ್ರೋ ಸಹಯೋಗದಲ್ಲಿ ಹಮ್ಮಿಕೊಂಡ ನೀರಾವರಿ ಹಾಗೂ ರಸಾವರಿ ಕುರಿತ ಮೂರು ದಿನದಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ದೇಶವಾದ ಇಸ್ರೇಲ್‍ನಲ್ಲಿ ನೀರಿನ ಮರು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಯುತ್ತಿರುವುದು ಒಂದು ಮಾದರಿ ದೇಶವಾಗಿ ಹೊರಹೊಮ್ಮಿದೆ ಎಂದರು.

ಇದನ್ನೂ ಓದಿ: Vijayapura News | ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನ : AIMIM

ಅದರಂತೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸಹ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆದಲ್ಲಿ ಹೆಚ್ಚಿನ ಆದಾಯವನ್ನು ರೈತರು ಪಡೆಯಬಹುದಾಗಿದೆ. ಈ ಮೂರು ದಿನಗಳ ತರಬೇತಿಯಿಂದ ಇಲಾಖಾ ಅಧಿಕಾರಿಗಳು ರೈತರಿಗೆ ಹೊಸ ಹೊಸ ತಂತ್ರಜ್ಞಾನ ಹಾಗೂ ಅವಿಷ್ಕಾರ ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ನೀರಾವರಿ ಮತ್ತು ರಸಾವರಿ ತರಬೇತಿ ಇಂಡೋ-ಇಸ್ರೇಲ್ ಯೋಜನೆಯ ಪ್ರೋಜೆಕ್ಟ ಅಧಿಕಾರಿ ಬ್ರಹ್ಮದೇವ ಮಾತನಾಡಿ ದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಉತ್ಕøಷ್ಟ ಕೇಂದ್ರ ಸ್ಥಾಪಿಸಲಾಗಿದ್ದು, ಬಾಗಲಕೋಟೆಯಲ್ಲಿ ದಾಳಿಂಬೆ ಉತ್ಕøಷ್ಟ ಕೇಂದ್ರ ಸ್ಥಾಪಿಸಲಾಗಿದೆ. ಇವೆಲ್ಲವೂಗಳು ಇಸ್ರೇಲ್ ದೇಶದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದರ ಪ್ರಯೋಜನ ರೈತರು ಪಡೆದುಕೊಳ್ಳುವಂತೆ ಆಗಬೇಕು ಎಂದರು.

ಬೆಂಗಳೂರು ಲಾಲ್‍ಬಾಗ್‍ನ ಅಪರ ನಿರ್ದೇಶಕ ಕೆ.ಬಿ.ದುಂಡಿ ಮಾತನಾಡಿ ಬಾಗಲಕೋಟೆ ಜಿಲ್ಲೆಯ ಮೊದಲಿನಿಂದಲೂ ದಾಳಿಂಬೆ ಬೆಳೆಗೆ ಪ್ರಸಿದ್ದಿಯಾಗಿದೆ. ಪ್ರಸ್ತುತ ತರಬೇತಿಯಿಂದ ಉತ್ತಮ ನೀರಾವರಿ ಮತ್ತು ರಸಾವರಿ ಪದ್ದತಿಗಳನ್ನು ಉಪಯೋಗಿಸಿಕೊಂಡು ರೈತರು ಬೆಳೆಗಳನ್ನು ಬೆಳೆದಲ್ಲಿ ಆರ್ಥಿಕವಾಗಿ ಸಬಲರಾಗಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Vijayapura News | ಥಾಂಗ – ತಾ ಜೂನಿಯರ ಕ್ರೀಡಾಕೂಟ ೨೦೨೪

ನೆಟಾಪಿನ್ ಕಂಪನಿಯ ಪರಿಣಿತರಾದ ಪ್ರಶಾಂತ ಮುಂಡೋಳಿ ಮತ್ತು ಸಂದೀಪ ಜಾವಳೇಕರ ಹನಿ ನೀರಾವರಿ ಹಾಗೂ ರಸಾವರಿ ಪದ್ದತಿ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ ಸ್ವಾಗತಿಸಿದರು. ಗಣೇಶ ಪಟ್ಟಣಶೆಟ್ಟಿ ವಂದಿಸಿದರು. ತರಬೇತಿಯಲ್ಲಿ ಮಹಾರಾಷ್ಟ್ರ, ಗೋವಾ, ಕೇರಳ, ಗುಜರಾತ ಹಾಗೂ ಕರ್ನಾಟಕ ರಾಜ್ಯದ ಒಟ್ಟು 32 ಜನ ಅಧಿಕಾರಿಗಳು ಪಾಲ್ಗೊಂಡಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »