ವಿಜಯಪುರ: ನಗರದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ಕೊನೆಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಉದಯಕುಮಾರ್ ಕೆ ಕುಲಕರ್ಣಿ, ಪ್ರಾಧ್ಯಾಪಕರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ. ರವರು ಆಗಮಿಸಿ ” ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನೊಬ್ಬ ಗುರುತರವಾದ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದಾನೆ ಅಂತಹ ಪವಿತ್ರ ವೃತ್ತಿಯನ್ನ ಆಯ್ದುಕೊಂಡ ತಾವುಗಳೆಲ್ಲ ಧನ್ಯರು, ಜೊತೆಗೆ ನಾವು ನೀವು ಸೇರಿಕೊಂಡು ಉತ್ತಮ ಸಮಾಜದ ಜೊತೆಗೆ ಹೊಸ ಭವ್ಯ ಭಾರತವನ್ನ ನಿರ್ಮಿಸುವ ಪ್ರತಿಜ್ಞೆ ಗೈಯೋಣ” ಎಂದು ಹೇಳಿದರು.
ಇದನ್ನೂ ಓದಿ: Vijayapura News | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶಾತಿ ಆರಂಭ | ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಎಸ್ ಟಿ ಬೋಳರೆಡ್ಡಿ ರವರು ” ಪ್ರಶಿಕ್ಷಣಾರ್ಥಿಗಳು ಭಾವಿ ಉತ್ತಮ ಶಿಕ್ಷಕರು ಅಷ್ಟೇ ಅಲ್ಲ ಸಮಾಜದಲ್ಲಿ ಆದರ್ಶ ಗುರುಗಳು ಆಗಿರುತ್ತಾರೆ ಎಂಬುದನ್ನ ನಾವುಗಳು ಮರೆಯಬಾರದು” ಎಂಬುದನ್ನು ತಿಳಿಸಿದರು.
ಕಾರ್ಯಕ್ರಮವನ್ನ ಕುಮಾರಿ ಸಂಗೀತ ಹಾಗೂ ಸಂಗಡಿಗರ ಪ್ರಾರ್ಥನೆಯಿಂದ ಪ್ರಾರಂಭಿಸಲಾಯಿತು., ಅತಿಥಿಗಳ ಪರಿಚಯ , ಸ್ವಾಗತ. ಮಾಲಾರ್ಪಣೆ ಹಾಗೂ ವಾರ್ಷಿಕ ವರದಿಯನ್ನು ಶ್ರೀ ಪ್ರವೀಣ್ ಆರ್ ಡೋಣೂರ ಸಹಾಯಕ ಪ್ರಾಧ್ಯಾಪಕರು ನೆರವೇರಿಸಿದರು, ಪ್ರಶಿಕ್ಷಣಾರ್ಥಿಗಳ ಪಾರಿತೋಷಕ ವಿತರಣಾ ಹಾಗೂ ನಿರೂಪಣೆ ಕಾರ್ಯಕ್ರಮವನ್ನ ಡಾ ಎಸ್ ಡಿ ಮನಮಿ ಸಹಾಯಕ ಪ್ರಾಧ್ಯಾಪಕರು ನಡೆಸಿಕೊಟ್ಟರು.
ಇದನ್ನೂ ಓದಿ: Vijayapura News | ರೈತರ ವಿವಿಧ ಬೇಡಿಕೆ | ಭಾರತೀಯ ಕಿಸಾನ್ ಸಂಘ ಹೋರಾಟ
ಕಾರ್ಯಕ್ರಮದಲ್ಲಿ ಅಧಿಕ ಅಂಕಗಳಿಸಿದ ಕಳೆದ ವರ್ಷದ ಪ್ರಶಿಕ್ಷಣಾರ್ಥಿಯಾದ ಕುಮಾರಿ ಐಶ್ವರ್ಯ ಎಂ ಎಲ್ ರವರಿಗೆ ಸನ್ಮಾನಿಸಲಾಯಿತು. ಕುಮಾರ್ ಮಲ್ಲಿಕಾರ್ಜುನ, ಆಕಾಶ, ಶಿವರಾಜ, ರಾಕೇಶ ಹಾಗೂ ಕುಮಾರಿ ವೈಷ್ಣವಿ ಪ್ರಶಿಕ್ಷಣಾರ್ಥಿಗಳು ಅನಿಸಿಕೆಯನ್ನ ವ್ಯಕ್ತಪಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಿಜಯಕುಮಾರ್ ಸಜ್ಜನ್ ರವರು ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದರು.
2023 – 24 ನೇ ಶೈಕ್ಷಣಿಕ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ರಚಿಸಲಾದ ” ಶಿಕಾರಿ ” ಎಂಬ ವಾರ್ಷಿಕ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಾರ್ಷಿಕ ಸಂಚಿಕೆಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಕವಿತಾ ಹಿರೇಮಠ್ ಹಾಗೂ ಕಾರ್ಯದರ್ಶಿಯಾದ ಸಚಿನಕುಮಾರ್ ಪಾಟೀಲ ಹಾಜರಿದ್ದರು.
ಇದನ್ನೂ ಓದಿ: Vijayapura News | ಶಿಕ್ಷಕರ ಯಶಸ್ಸು ಅವರು ಮಾಡುವ ಕಾರ್ಯಗಳಲ್ಲಿ ಇರುತ್ತದೆ – ಡಾ ಶ್ರೀಮತಿ ಎಸ್ ಟಿ ಬೋಳರೆಡ್ಡಿ
ಕಾರ್ಯಕ್ರಮದಲ್ಲಿ ಶ್ರೀ ವಿಜಯಕುಮಾರ್ ಸಜ್ಜನ್, ಶ್ರೀಮತಿ ಸುಜಾತ ಎಸ್ ಗೋರಿನಾಳ, ಶ್ರೀಮತಿ ಕವಿತಾ ಹಿರೇಮಠ್, ಶ್ರೀಮತಿ ವಾಣಿಶ್ರೀ ಇರಬಾಶೆಟ್ಟಿ, ಶ್ರೀಮತಿ ವಿನುತಾ ಚೌಧರಿ, ಶ್ರೀ ಪ್ರದೀಪ್ ರೆಡ್ಡಿ, ಶ್ರೀ ರಿಯಾಜ್ ಫರೀದ್ ಹಾಗೂ ಸಹಾಯಕಿ ಶ್ರೀಮತಿ ಶೋಭಾ ನಾವಿ ಜೊತೆಗೆ ಪ್ರಧಾನ ಕಾರ್ಯದರ್ಶಿ ಕುಮಾರ್ ಆಕಾಶ್ ವಾಲಿಕಾರ, ಮಹಿಳಾ ಪ್ರತಿನಿಧಿ ಶ್ರೀಮತಿ ಸುರೇಖಾ ಗಿಣ್ಣಿ, ಸಕಲ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಶಿಕ್ಷಣಾರ್ಥಿಗಳ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತವಿದ್ದು ಪ್ರಶಿಕ್ಷಣಾರ್ಥಿಳಿಗೆ ದೀಪದಾನ ಮತ್ತು ಪ್ರತಿಜ್ಞಾವಿಧಿಯನ್ನ ಪ್ರಾಚಾರ್ಯರಾದ ಡಾ.ಎಸ್ ಟಿ ಬೋಳರೆಡ್ಡಿ ರವರು ನೆರವೇರಿಸಿದರು.






