ತಳವಾರ: ಪರಿಶಿಷ್ಟ ಪಂಗಡದವರಿಗೆ ಪ್ರಮಾಣ ಪತ್ರ ವಿತರಿಸಿ

ತಳವಾರ image

ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ.ಭೂಬಾಲನ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಪ್ರವೀಣ ನಾಟೀಕಾರ ಮಾತನಾಡಿ, ರಾಜ್ಯ ಎಸ್.ಸಿ/ಎಸ್.ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ಮತ್ತು ಇತರರು ಸರಕಾರದ ವಿರುದ್ಧ ದಾವೆ ಸಲ್ಲಿಸಬೇಕು. (WP13777/2023) ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡು ಸುಳ್ಳು ಸುತ್ತೋಲೆಗಳನ್ನು ಹೊರಡಿಸಿ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ, ದಬ್ಬಾಳಿಕೆ ನಡೆಸಿ, ಸಂವಿಧಾನವನ್ನು ದುರ್ಬಲಗೊಳಿಸುತ್ತಿರುವುದು ಸಂವಿಧಾನದ ಅಡಿಯಲ್ಲಿ ಅಕ್ಷಮ್ಯ ಅಪರಾಧವಾಗಿದೆ.

ಇದನ್ನೂ ಓದಿ: ವ್ಯಸನಮುಕ್ತ: ವ್ಯಸನಕ್ಕೊಳಗಾದವರಿಗೆ ಆತ್ಮಗೌರವದ ಸಂದೇಶ ಸಾರಿದ ಮಹನೀಯರು ಡಾ.ಮಹಾಂತ ಸ್ವಾಮಿಗಳು

ತಳವಾರ image ಈ ಹಿಂದೆಯೂ ಸರ್ಕಾರದ ಕಾಯ್ದೆ ಜಾರಿಗೆಗೊಳಿಸದಂತೆ ಸರಕಾರದ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದರು. ಸರ್ಕಾರ ಕಾನೂನು ಜಾರಿಗೆ ಬಂದ ನಂತರವೂ ಕೂಡ ಸರಕಾರದ ಅಧಿಕಾರಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಬೆದರಿಸುತ್ತಿದ್ದಾರೆ. ಇನ್ನೊಂದು ಬಹು ಮುಖ್ಯವಾದ ಸಂಗತಿ, ಹೈಕೋರ್ಟನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎಲ್ಲಿಯೂ ಕೂಡ ನೈಜ ತಳವಾರ ವಿರುದ್ಧ ನಕಾರಾತ್ಮಕ ಅಂಶಗಳು ಕಂಡುಬಂದಿರುವುದಿಲ್ಲ.

ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಮತ್ತು ಕರ್ನಾಟಕ ಸರ್ಕಾರ ಕ್ರಮ ಸಂಖ್ಯೆ: (88H) ಸಮೇತ ಗೆಜಟ್ ಸುತ್ತೋಲೆಗಳನ್ನು ಆಧರಿಸಿ ನೈಜ ತಳವಾರರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳು ಕರ್ನಾಟಕದ, ಎಲ್ಲಾ ಜಿಲ್ಲೆ/ತಾಲೂಕುಗಳಲ್ಲಿ ವಿತರಣೆಯಾಗಿದ್ದು, ಯಾವುದೋ ನಕಲಿ ಸಂಘ/ಸಂಸ್ಥೆಗಳ ಒತ್ತಡಕ್ಕೆ ಮಣೆಯದೆ ನೈಜ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ವಿತರಿಸುವ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಜಿಲ್ಲೆಯ ಎಲ್ಲಾ ತಹಶೀಲದಾರಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ವಿಜಯಪುರ: ನವರಸ ಪ್ರದರ್ಶಕ ಮಹಾವಿದ್ಯಾಲಯ ಉದ್ಘಾಟನೆ

ತಳವಾರ image

ಸಿಂಧುತ್ವ, ನೌಕರಿ, ಮುಂಬಡ್ತಿ, ಶಾಲಾ-ಕಾಲೇಜುಗಳ ಪ್ರವೇಶ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸೌಲಭ್ಯಗಳನ್ನು ವಿತರಿಸುವ ಯಥಾಸ್ಥಿತಿಯನ್ನು ಇದರ ಜೊತೆಗೆ ಕಾಪಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪ್ರಕಾಶ ಸೊನ್ನದ, ಭರತ ಕೋಳಿ, ಸಾಹೇಬಗೌಡ ಬಿರಾದಾರ, ತಳವಾರ ಸಮಾಜದ ಹಿರಿಯ ಮುಖಂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »