Vijayapura News | ಡೋಣಿ ನದಿ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಿ – ಸಂಸದ ರಮೇಶ ಜಿಗಜಿಣಗಿ

ಡೋಣಿ ನದಿ ಹೂಳೆತ್ತುವ image

ವಿಜಯಪುರ: ತಾಲೂಕಿನ ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಂಜೂರಾತಿ ಹಾಗೂ ಮಳೆಯಿಂದ ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಗಿ ಅವರು ಮಾತನಾಡಿ ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ, ಹಾಗೂ ಕೃಷಿ ಬೆಳೆಗಳಾದ ತೊಗರಿ, ಕಡಲೆ, ಗೋವಿನ ಜೋಳ ಮುಂತಾದ ಬೆಳೆಗಳು ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು ಅವುಗಳಿಗೆ ಸೂಕ್ತ ಬೆಳೆ ಪರಿಹಾರ ಒದಗಿಸಬೇಕು. ಡೋಣಿ ಹೂಳೆತ್ತಲು ರಾಜ್ಯ ಸರಕಾರದ ವಿಜಯಪುರ ಜಿಲ್ಲೆಯ ಇಬ್ಬರು ಸಚಿವರು ರಾಜ್ಯ ಸರಕಾರದಿಂದ ಡೋಣಿ ಹೂಳೆತ್ತಲು ತಮ್ಮ ಪಾಲಿನ ಅನುದಾನ ನೀಡಿದರೆ ಕೇಂದ್ರ ಸರಕಾರದಿಂದ ಬರುವ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಭಾಗದ ರೈತರ ಭೂಮಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Vijayapura News | ಆಂಗ್ಲ ಮಾಧ್ಯಮ ಮೌಲಾನ ಅಜಾದ್ ಶಾಲೆಯನ್ನು ರದ್ದುಪಡಿಸಿದ್ದಕ್ಕಾಗಿ ಕೆ.ಆರ್.ಎಸ್. ಪಕ್ಷದಿಂದ ಹೋರಾಟ

ಡೋಣಿ ನದಿ ಹೂಳೆತ್ತುವ ಇದೇ ಸಂದರ್ಭದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷರು ಹಾಗೂ ಭಾಜಪ ಮುಖಂಡರಾದ ಉಮೇಶ ಕೋಳಕೂರ, ಸಂಜಯಗೌಡ ಬಿ. ಪಾಟೀಲ ರಾಜ್ಯ ರೈತ ಕಾರ್ಯಕಾರಿಣಿ ಸದಸ್ಯರು, ವಿವೇಕಾನಂದ ಡಬ್ಬಿ ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷರು, ಈರಣ್ಣ ರಾವೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಲ್ಲು ಕನ್ನೂರ ಮಾಜಿ ಜಿ.ಪಂ. ಸದಸ್ಯರು, ಈರಣ್ಣ ಶಿರಮಗೊಂಡ ಮಂಡಲ ಪ್ರ. ಕಾರ್ಯದರ್ಶಿ ಬಿಜೆಪಿ, ಗುರಣ್ಣ ಜಂಗಮಶೆಟ್ಟಿ, ಗುರಣ್ಣ ಬೂದಿಹಾಳ, ಕಲ್ಮೇಶ ಹಿರೇಮಠ, ರಮೇಶ ಜುಮನಾಳ, ಆನಮದ ಸೋಮಕ್ಕನವರ, ಸಿದ್ದುಗೌಡ ಬಿರಾದಾರ, ವಿಠ್ಠಲ ರಾಮತೀರ್ಥ, ಎಂ.ಟಿ. ಪಾಟೀಲ, ಶ್ರೀಶೈಲ ಕೊಟ್ಯಾಳ, ಸಂಗಪ್ಪ ಕೊಟ್ಯಾಳ ಹಾಗೂ ಇನ್ನಿತರ ಮತಕ್ಷೇತ್ರದ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »