Vijayapura News | ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಆಹ್ವಾನ

ಡಾ.ಪ್ರಕಾಶ ಖಾಡೆ image

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಾಗಲಕೋಟೆಯ ಸಾಹಿತಿ ಡಾ.ಪ್ರಕಾಶ ಖಾಡೆ ಅವರಿಗೆ ನಗರದಲ್ಲಿ ಆಮಂತ್ರಣ ನೀಡಿ ಸತ್ಕರಿಸಲಾಯಿತು.

ಇದನ್ನೂ ಓದಿ: Bagalkote News | ವಿಶ್ವ ಶೌಚಾಲಯ ದಿನಾಚರಣೆ | ನಮ್ಮ ಶೌಚಾಲಯ, ನಮ್ಮ ಗೌರವ ಆರೋಗ್ಯಕ್ಕಾಗಿ ಶೌಚಾಲಯ ಬಳಸಿ : ಡಾ.ಪುನಿತ್

ವಿಜಯಪುರದ ಸಹೋದರ ಅಶೋಕ ಖಾಡೆ ಅವರ ಮನೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪರಿಷತ್ತಿನ ಪದಾಧಿಕಾರಿಗಳು ಸತ್ಕರಿಸಿ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಶಂಕರ ಬೈಚಬಾಳ ‘ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಡಾ.ಪ್ರಕಾಶ ಖಾಡೆಯವರು ಈ ವರೆಗೆ ಐವತ್ತೊಂದು ಪುಸ್ತಕಗಳನ್ನು ರಚಿಸಿದ್ದು, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ ಪರಿಷತ್ತು ಈ ಗೌರವ ನೀಡಲು ಹೆಮ್ಮೆಯಾಗುತ್ತದೆ’ ಎಂದರು.

ಇದನ್ನೂ ಓದಿ: Vijayapura News | 21 ಕೆ.ಜಿ. ವಿಭಾಗದಲ್ಲಿ ಇಮಾಂಕ ರುಣವಾಲಗೆ ಕಂಚಿನ ಪದಕ

ಸಂಚಾಲಕ ಪ್ರೊ.ಅಡವಿಸ್ವಾಮಿ ಕೊಳಮಲಿ ಮಾತನಾಡಿ ಡಾ.ಖಾಡೆ ಅವರ ಶಿಕ್ಷಣ, ಸಾಹಿತ್ಯ, ಜಾನಪದ, ಪತ್ರಿಕೊದ್ಯಮ, ರಂಗಭೂಮಿ, ಸಂಶೋಧನೆ, ಜೀವನ ಚರಿತ್ರೆ ಹಾಗೂ ಸಂಪಾದನೆ ಮೂಲಕ ಬಹುಮುಖಿ ಸಾಹಿತ್ಯ ಸಾಧನೆ ಮಾಡಿದವರು, ಅಪಾರ ಪುಸ್ತಕ ಪ್ರೀತಿಯ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನಮ್ಮ ಹೆಮ್ಮೆ ಎಂದರು. ಸಾಹಿತಿಗಳಾದ ಸಿದ್ದಲಿಂಗ ಮನಹಳ್ಳಿ, ಮುರುಗೇಶ ಸಂಗಮ, ಡಿ.ಜೋಶಪ್ಪ, ರಮೇಶ ಕೊಟ್ಯಾಳ, ಸುನೀಲ ಜೈನಾಪುರ, ವಿಸಂಪಾ ಖೇಡಗಿ, ಅಮರೇಶ ಸಾಲಕ್ಕಿ ಉಪಸ್ಥಿತರಿದ್ದರು. ಪರಿಷತ್ತು ಅಧ್ಯಕ್ಷ ಹಿರಿಯ ಸಾಹಿತಿ ಫ.ಗು.ಸಿದ್ದಾಪುರ, ಸಿದ್ದರಾಮ ಬಿರಾದಾರ, ಮೋಹನ ಕಟ್ಟಿಮನಿ, ಸಂಗಮೇಶ ಬದಾಮಿ ಮೊದಲಾದವರು ಡಾ.ಖಾಡೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »