ಜೆಡಿಎಸ್ ಪದಾಧಿಕಾರಿಗಳ ನೇಮಕಾತಿ

ವಿಜಯಪುರ ಮಾ 12: ಜೆಡಿಎಸ್ ಯುವ ಜನತಾದಳ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳ ನೇಮಕಾತಿ ಜೆಡಿಎಸ್ ಕಾರ್ಯಾಲಯದಲ್ಲಿ ಇಂದು ನಡೆಯಿತು.

ಜಯಕಾಂತ ವಾಗ್ಮೋರೆ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ, ಅಬ್ದುಲ್ ಹಮೀದ ಇಂಡೀಕರ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಸಹ ಕಾರ್ಯದರ್ಶಿಯನ್ನಾಗಿ, ಹುಸೇನ ಪೈಗಂಬರ ಅರಬ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ, ಮಾಳಿಂಗರಾಯ ಹೂ. ಹೊನಗೊಂಡ ಅವರನ್ನು ನಗರ ಕಾರ್ಯದರ್ಶಿಯಾಗಿ ಯುವ ಜನತಾ ದಳದ ಅಧ್ಯಕ್ಷರಾದ ಸುನೀಲ ಆರ್. ಕೆ. ರಾಠೋಡ ಅವರು ನೇಮಕ ಮಾಡಿ ಆದೇಶ ಹೊರಡಿಸಿ ನೇಮಕಾತಿ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಅನ್ವರ ಮಕಾಂದಾರ, ಸಾಜೀದ ರಿಸಾಲ್ದಾರ, ಮನೋಜ ಬಿರಾದಾರ, ಶಿವಾನಂದ ಹಿರೇಕುರಬರ, ಮುಕಂದಾಸ ಇನಾಂದಾರ, ಚಂಧ್ರಕಾಂತ ತಾರನಾಳ ಯುವ ಜನತಾದಳ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »