ಜನವರಿ 31 ರಂದು 14 ಮತ್ತು 17 ವಯೋಮಿತಿ ಬಾಲಕ ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್

ವಿಜಯಪುರ ಜ.27: ಕರ್ನಾಟಕ ರಾಜ್ಯ ಪುಟ್ಬಾಲ್ ಸಂಸ್ಥೆ ಬೆಂಗಳೂರು ಹಾಗೂ ದಿ. ವಿಜಯಪುರ ಜಿಲ್ಲಾ ಪುಟ್ಬಾಲ್ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 31-01-2021 ರಂದು 14 ಮತ್ತು 17 ವರ್ಷ ವಯೋವಿತಿ ಹೊಂದಿರುವ ಬಾಲಕ ಹಾಗೂ ಬಾಲಕಿಯರ ಪುಟ್ಬಾಲ್ ಆಯ್ಕೆ ಟ್ರಯಲ್ಸ್‍ನ್ನು ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್ ಪದವಿಪೂರ್ವ ಕಾಲೇಜು ಪುಟ್ಬಾಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ಕ್ರೀಡಾಪಟುಗಳು ದಿನಾಂಕ 28-01-2021ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ 14 ವರ್ಷದ ಬಾಲಕ ಹಾಗೂ ಬಾಲಕಿಯರ 1ನೆ ಜನವರಿ 2006ರಂತೆ ಹಾಗೂ 17 ವರ್ಷದ ಬಾಲಕ ಬಾಲಕಿಯರು 1ನೇ ಜನವರಿ 2003 ರಂತೆ ವಯೋಮಿತಿ ಹೊಂದಿರಬೇಕು. ಜನನ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್ ಝರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ವಿಜಯಪುರ ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷರಾದ ಗುರುಪಾದಯ್ಯ ( ಗುರು) ಗಚ್ಚಿನಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮೋ ಸಂಖ್ಯೆ: 9845007342 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »