ವಿಜಯಪುರ : ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ PETC ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆ ಮೂಲಕ ಉತ್ತೀರ್ಣರಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವಿಜಯಪುರ ಜಿಲ್ಲೆಯಿಂದ ಆವಂತಿ ಕ್ಲಾಸಸ್ ಎಂಬ ಕೊಚ್ಚಿಂಗ್ ಸೆಂಟರ್ ಆಯ್ಕೆ ಆಗಿರುತ್ತದೆ. ಆದರೆ ಈ ಹೆಸರಿನ ಕೋಚಿಂಗ್ ಸೆಂಟರ್ ನಗರದಲ್ಲಿ ಇಲ್ಲ. ಕೋಚಿಂಗ್ ಸೆಂಟರ್ ಇಲ್ಲದೇ ಪರೀಕ್ಷೆ ತರಬೇತಿ ಕೇಂದ್ರ ಇದೆ ಎಂದು ಗುರುತಿಸಿದೆ. ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಇಲಾಖೆ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಯ್ಕೆಯಾದ ಪರೀಕ್ಷಾರ್ಥಿಗಳಿಗೆ ನಿಯಮದ ಪ್ರಕಾರ ತರಬೇತಿ ನೀಡದೇ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು ಮೋಸ ನಡೆಯುತ್ತಿರುವದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಸದರಿ ಸಂಸ್ಥೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆ, ವತಿಯಿಂದ ನಡೆಯುವ ಪ್ರವೇಶ ಪರೀಕ್ಷೆಗೆ ಹಗಲು ರಾತ್ರಿ ಎನ್ನದೆ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಹಲವು ಕನಸುಗಳನ್ನು ಹೊತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಜೊತೆಗೆ UPSಅ ಮತ್ತು ಏಂS ತರಬೇತಿ ಪಡೆಯಲು ಆಯ್ಕೆಯಾಗಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ತರಬೇತಿಗೆ ಬರುತ್ತಾರೆ. ಆದರೆ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಉತ್ತಮ ತರಬೇತಿ ನೀಡುವಲ್ಲಿ ವಿಫಲವಾಗಿದೆ.
ಕೋಚಿಂಗ್ ಸೆಂಟರ್ ಇಲ್ಲದೇ ಪರೀಕ್ಷೆ ತರಬೇತಿ ಆವಂತಿ ಕ್ಲಾಸಸ್ ಕೋಚಿಂಗ್ ಸೆಂಟರ್ ನಂತಹ ಬೇಜವಾಬ್ದಾರಿ ಸಂಸ್ಥೆಗೆ ಇಲಾಖೆ ಆಯ್ಕೆ ಮಾಡಿ ಪರೀಕ್ಷಾರ್ಥಿಗಳ ಕನಸಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿರುವುದು ಖಂಡನೀಯ. ಸದರಿ ಸಂಸ್ಥೆ ಪರೀಕ್ಷಾರ್ಥಿಗಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ ತರಬೇತಿ ನೀಡದೇ ಹಾಗೂ ಸರ್ಕಾರಿ ಇಲಾಖೆಗಳಿಗೆ ಮೋಸ ಎಸಗುತ್ತಿದೆ ಎಂದು ಗಮನಕ್ಕೆ ಬಂದರೂ ಮತ್ತು ಸದರಿ ಸಂಸ್ಥೆಯು ವಿಜಯಪುರ ನಗರದಲ್ಲಿ ಕೋಚಿಂಗ್ ಸೆಂಟರ್ ಕೂಡ ಹೊಂದಿಲ್ಲ ಮತ್ತು ಶಿಕ್ಷಕ ವೃಂದ ಯಾರೂ? ತರಬೇತಿಗಳು ಎಲ್ಲಿ ನಡೆಯುತ್ತಿವೆ? ಎಂಬದು ಕೂಡ ಮಾಹಿತಿ ಇಲ್ಲ. ತರಬೇತಿ ಕೇಂದ್ರ ಕೂಡ ಮಾಡಿದೇ ಇರುವುದು ಗಮನಿಸಿದರೆ ತರಬೇತಿಗೆ ಆಯ್ಕೆಯಾದ ಪರೀಕ್ಷಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದು ಮತ್ತು ಸರ್ಕಾರದ ಅನುದಾನವನ್ನು ಬಡ ಪರೀಕ್ಷಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಬಳಕೆ ಆಗಬೇಕಾಗಿತ್ತು ಆದರೆ ಇಲ್ಲಿ ಅನುದಾನ ದುರುಪಯೋಗ ನಡೆಸಲಾಗುತ್ತಿದ್ದು ದುರಂತ ಎಂದು ಪ್ರತಿಭಟನೆ ಉದ್ದೇಶಿಸಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಹೇಳಿದರು.
ಪ್ರತಿಭಟನೆಕಾರರ ಆಕ್ರೋಶಕ್ಕೆ ಮಣಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಅಪರ ನಿರ್ದೇಶಕರು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಬೆಂಗಳೂರು ಇವರಿಗೆ ತಕ್ಷಣವೇ ಪತ್ರ ಬರೆದು, ದಲಿತ ವಿದ್ಯಾರ್ಥಿ ಪರಿಷತ್ ಮಾಡಿರುವ ಆರೋಪ ಆಧಾರಿಸಿ ಮತ್ತು ತಮ್ಮ ಇಲಾಖೆಯ ಪ್ರಾಥಮಿಕ ಮಾಹಿತಿ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ನಿಯೋಜಸಲಾದ ಸದರಿ ಅವಂತಿ ಕ್ಲಾಸಸ್ ಸಂಸ್ಥೆಯು ನಗರದಲ್ಲಿ ಅಸ್ತಿತ್ವ ಹೊಂದಿಲ್ಲದಿರುವದು ಕಂಡು ಬರುತ್ತದೆ. ಮತ್ತು ಆಯ್ಕೆಯಾದ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲು SB WISDOM ಕೋಚಿಂಗ್ ಸೆಂಟರ್ ನಲ್ಲಿ ತರಗತಿ ನೀಡುತ್ತಿರುತ್ತಾರೆ.
ಕಾರಣ 2024 – 25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅವಂತಿ ಕ್ಲಾಸಸ್ ರವರು ನಿಯಮಾನುಸಾರ ತರಬೇತಿಯನ್ನು ನೀಡದೇ ಇರುವುದರಿಂದ ಸದರಿ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಕೋರಿರುತ್ತಾರೆ. ಜೊತೆಗೆ ಇಲಾಖೆಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ಬಗ್ಗೆ ಸದರಿ ಸಂಸ್ಥೆ ನವರು ನಮ್ಮಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡುವುದಿಲ್ಲ ಎಂದು ಪ್ರತಿಭಟನೆ ವೇಳೆ ಮಾದ್ಯಮಗಳಿಗೆ ಮಾತನಾಡುತ್ತ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹೇಳಿದರು.
ಪ್ರತಿಭಟನೆ ಬಳಿಕ ಸದರಿ ಸಂಸ್ಥೆಯ ಮೋಸ ಜಾಲದ ಬಗ್ಗೆ ಗಂಭೀರವಾಗಿ ಗಮನಹರಿಸಿ, ಈ ಸಂಸ್ಥೆಗೆ ಕಪ್ಪು ಪಟ್ಟಿಗೆ ಸೇರಿಸಬೇಕು. ಜೊತೆಗೆ ಸಂಸ್ಥೆ ನೀಡಲಾದ ಅನುದಾನವನ್ನು ಮರಳಿ ಪಡೆಯುವ ಜೊತೆಗೆ ಟೆಂಡರ್ ರದ್ದುಗೊಳಿಸಬೇಕು. ಕಾನೂನಾತ್ಮಕವಾಗಿ ಇಲಾಖೆ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಹಾಗೂ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮನವಿ ನೀಡಲಾಯಿತು. ಈ ವೇಳೆ ಸದರಿ ಸಂಸ್ಥೆಯಿಂದ ಅನ್ಯಾಯಕ್ಕೆ ಒಳಗಾದ ಪರೀಕ್ಷಾರ್ಥಿಗಳು ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.