Vijayapura News | ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿ | ರೈತರಿಗೆ ಪರಿಹಾರ ನೀಡಲು ಆಗ್ರಹ

ಕಳಪೆ ತೊಗರಿ ಬೀಜ image
ತಾಳಿಕೋಟಿ: ತಾಲೂಕಿನ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಹಳ್ಳಿಗಳಲ್ಲಿ ರೈತರು ವಾಣಿಜ್ಯ ಬೆಳೆ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ, ಇದಿಗ ಹೂವು ಉದರಿ ಕಾಳು ಕಟ್ಟದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ, ಇದಕ್ಕೆ ಕಳಪೆ ಬೀಜ ವಿತರಣೆಯೇ ಮುಖ್ಯ ಕಾರಣ ಆದ್ದರಿಂದ ನಷ್ಟಗೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಪ ತಹಶಿಲ್ದಾರರಾದ ಜೆ.ಐ.ತುಬಾಕೆ ಹಾಗೂ ಕೃಷಿ ಅಧಿಕಾರಿಗಳಾದ ಎಂ.ಹೆಚ್ ಬೀಳಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ  ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡುವಂತೆ ಆಗ್ರಹಿಸಲಾಯಿತು.
ಇದನ್ನೂ ಓದಿ: Vijayapura News | ಮಾನವ ಸರಪಳಿ | ನಾವೀನ್ಯತೆ ವಿಭಾಗದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ | ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್
ಸರಕಾರದಿಂದ ಕೃಷಿ ಇಲಾಖೆಯಲ್ಲಿ ಕೊಟ್ಟಿರುವ ತೊಗರಿ ಬೀಜ ಜಿ.ಆರ್.ಜಿ 152 ಹಾಗೂ 811 ಸಂಪೂರ್ಣ ಕಳಪೆಯಿಂದ ಒಟ್ಟಾರೆಯಾಗಿ ಬೀಜ ಕಟ್ಟದೇ ಕೃಷಿಗೆ ಮಾಡಿರುವ ಸಾಲ ತಿರಿಸಲಾಗದೇ ರೈತರು ಚಿಂತೆಗಿಡಾಗಿದ್ದಾರೆ ಕೂಡಲೇ ಕಳಪೆ ತೊಗರಿ ಬೀಜ ವಿತರಣೆ ಮಾಡಿರುವ ಏಜೇನ್ಸಿ ವಿರುದ್ಧ ಸೂಕ್ತ ಕಾನೂನ ಕ್ರಮ ಕೈಗೊಳ್ಳಬೇಕು, ಇಂತಹ ಮೊಸಗಾರರಿಂದ ನಷ್ಟಗೊಂಡ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡುವಂತೆ ಆದೇಶ ಮಾಡಬೇಕು,  ಇದರಲ್ಲಿ ಯಾವುದೇ ಮೊಸ ವಂಚನೆ ಆಗಬಾರದು, ಇನಸೂರೆನ್ಸ್ ಕಂಪನಿಯಿಂದ ಸರಿಯಾಗಿ ಸಮಿಕ್ಷೆ ಮಾಡಿ ಯಾರಿಗೂ ಮೊಸ ಆಗದಂತೆ ವಿಮೆ ನೀಡಬೇಕು.
ರೈತರಿಗೆ ಬೀಜ ವಿತರಿಸುವಾಗ ಸರಿಯಾದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು, ಬೆಳೆ ಹಾಳಾದ ಮೆಲೆ ರೈತರನ್ನೆ ಆರೋಪಿಗಳನ್ನಾಗಿ ಮಾಡುವುದು ಸರಿಯಲ್ಲ, ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ದ ಹಾಗೂ ಇದಕ್ಕೆ ಬೆಂಬಲ ನೀಡಿದ ಅಧಿಕಾರಿಗಳ ಮೇಲೂ ಸೂಕ್ತ ಕ್ರಮ ಜರಿಗಿಸಬೇಕು, ಒಟ್ಟಾರೆಯಗಿ ನಷ್ಟಗೊಂಡ ರೈತರಿಗೆ ಬೆಳೆ ಪರಿಹಾರ ಅಥವಾ ಬೆಳೆ ವಿಮೆ ನೀಡುವಲ್ಲಿ ಎನಾದರು ಗೊಲಮಾಲ್ ಮಾಡಿದ್ದೆ ಆದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಅನಿವಾರ್ಯವಾಗಲಿದೆ  ಎಚ್ಚರಿಸಿದರು.
ಇದನ್ನೂ ಓದಿ: Vijayapura News | ಸಂವಿಧಾನ ದಿನಾಚರಣೆ | ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವಂತೆ – ಜಿಪಂ ಸಿಇಒ ರಿಷಿ ಆನಂದ ಕರೆ
ನಷ್ಟಗೊಂಡತಂಹ ರೈತರು ತಮ್ಮ ಜಮೀನಿನ ಉತ್ತಾರೆ, ವಿಮೆ ತುಂಬಿದ ಪ್ರತಿ, ಜಿ.ಪಿ.ಎಸ್ ಪೋಟೊ, ಬ್ಯಾಂಕ್ ಪಾಸಬುಕ್ ಹಾಗೂ ಆದಾರ ಕಾರ್ಡ ಇವುಗಳ ನಕಲು ಪ್ರತಿ ಕೊಡುತ್ತಿದ್ದೆವೆ, ಈ ಸರ್ತಿಯಾದರು ರೈತರನ್ನ ಉಳಿಸುವ ಕೆಲಸ ಮಾಡಿ ಎಂದು ರೈತರು ತಮ್ಮ ಅಳಲನ್ನ ಅಧಿಕಾರಿಗಳ ಮುಂದೆ ತೊಡಿಕೊಂಡರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ತಾಳಿಕೋಟಿ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ, ಸುಜಾತಾ ಅವಟಿ, ವಿಮಲಾ ಹಿರೇಮಠ, ಜನ್ನತ್‍ಬಿ ಮುಲ್ಲಾ ರೈತ ಮುಖಂಡರಾದ ಗೌಡಪ್ಪ ಬಿರಾದಾರ, ಸಂಗಪ್ಪ ಬೈಚಬಾಳ, ಮುನೀರ ಯಾಳವಾರಕರ್, ಆಶ್ಪಕ್ ಅತ್ತಾರ, ಶಿವಾನಂದ ಕಾದಳ್ಳಿ, ಶರಣು ಕೌದಿ, ಈರಯ್ಯ ಗದ್ಗಿಮಠ, ಗುರಣ್ಣ ಕಡಕೋಳ, ಬಸವರಾಜ ಪೂಜಾರಿ, ಬಸಪ್ಪ ಬೈಚಬಾಳ, ಮಹಾಂತಯ್ಯ ಕಪ್ಪಡಿಮಠ, ಸಿದ್ದಣ್ಣ ಚಳ್ಳಗಿ, ಅಲ್ಲಾಭಕ್ಷ ಹೊನ್ನಳ್ಳಿ, ರಮೇಶ ಹೆಂಡಿ, ಗಿರಿಶ ಹೆಗ್ಗಣದೊಡ್ಡಿ, ರಾಮು ದೇಸಾಯಿ, ದೇವಿಂದ್ರ ಗಡಗಿ ಸೇರಿದಂತೆ ಅನೇಕರು ಇದ್ದರು.

Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »