Vijayapura News | ಕನ್ನಡ ಅಭಿಮಾನ ಬೆಳಿಸಿಕೊಳ್ಳೋಣ: ಭಾರತಿ ಪಾಟೀಲ

ಕನ್ನಡ ರಾಜ್ಯೋತ್ಸವ image

ವಿಜಯಪುರ: ಕನ್ನಡ ಅಭಿಮಾನ ಬೆಳೆಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ಕ‌ರ್ತವ್ಯ ನಮ್ಮದಾಗಲಿ. ಹೆಸರಾಗಲಿ ಕರ್ನಾಟಕ – ಉಸಿರಾಗಲಿ ಕನ್ನಡ ಎಂದು ಕನ್ನಡ ರಾಜ್ಯೋತ್ಸವ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಭಾರತಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಕರ್ನಾಟಕ ಸುವರ್ಣ ಸಂಭ್ರಮ 50 ನಿಮಿತ್ತ ಕನ್ನಡ ಭಾಷೆ ಉಚ್ಛ್ರಾಯ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ಸಾಗಬೇಕು ಎಂದರು.

ಇದನ್ನೂ ಓದಿ: Vijayapura News | ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ನಾಡು- ನುಡಿ, ನೆಲ-ಜಲ ಕಾಪಾಡುವ ಮೂಲಕ ಕನ್ನಡ ಸಾರಸ್ವತ ಲೋಕದ ದಿಗ್ಗಜರ ಸೇವೆ ಸ್ಮರಣೀಯ ಎಂದರು.

ಇದನ್ನೂ ಓದಿ: Vijayapura News | ಗೌರವ ಡಾಕ್ಟರೇಟ್ – ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ

ಕಸಾಪ ಪದಾಧಿಕಾರಿಗಳಾದ ಸುರೇಖಾ ರಾಠೋಡ, ಎ ಡಿ ಮುಲ್ಲಾ, ಭುವನೇಶ್ವರಿ ಮೇಲಿನಮಠ, ವಿಜಯಲಕ್ಷ್ಮಿ ಹಳಕಟ್ಟಿ, ಮಹಮ್ಮದ ವಾಲಿಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ರಾಜೇಸಾಬ ಶಿವನಗುತ್ತಿ, ಬಸವರಾಜ ಬಿರಾದಾರ, ಕೀರ್ತಿ ಬಜಂತ್ರಿ, ಶಾಂತಾ ವಿಭೂತಿ, ಪಾತಿಮಾ ಶೇಖ, ಯುವರಾಜ ಚೋಳಕೆ ಮಾರುತಿ ತರಸೆ ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »