ಇಂದ್ರಜಿತ್ ಗೆ ಮುತಾಲಿಕ್ ಪ್ರಶ್ನೆ

ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.

ಚಿತ್ರರಂಗ, ರಾಜಕಾರಣಿಗಳ ಮಕ್ಕಳ ಡ್ರಗ್ ದಂಧೆ ಬಗ್ಗೆ ಮಾತನಾಡುತ್ತಿರುವ ಇಂದ್ರಜಿತ್, ಅವರ ಅಕ್ಕ ಗೌರಿಲಂಕೇಶ್ ಕೂಡ ಡ್ರಗ್ ಎಡಿಟ್ ಆಗಿದ್ದರು. ಆಗ ಏಕೆ ಈ ಬಗ್ಗೆ ಪ್ರಶ್ನಿಸಲಿಲ್ಲ. ಆಕೆಯನ್ನು ಏಕೆ ಸುಧಾರಿಸುವಲ್ಲಿ ಪ್ರಯತ್ನ ಪಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.

ಒಡಹುಟ್ಟಿದ ಅಕ್ಕಳನ್ನು ಸುಧಾರಿಸದ ಇಂದ್ರಜಿತ್ ಲಂಕೇಶ್ ಇಂದು ಚಿತ್ರರಂಗದ ನಟನಟಿಯರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ಸಿಸಿಬಿ ಪೊಲೀಸರಿಗೆ ಮಾಹಿತಿಯನ್ನು ಒದಗಿಸಿದ್ದರು.


 

Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »