ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ 14 ವರ್ಷದ ವಿದ್ಯಾರ್ಥಿಗಳ ಬೃಹತ್ ಸಮ್ಮಿಲನ (Senior Students’ Association)ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಡಾ.ಡಿ.ಕೆ ಕಾಂಬಳೆ ಉಪಕುಲ ಸಚಿವರು ಆಡಳಿತ ವಿಭಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಬೆಳಗಾವಿ ಇವರು ಹಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದ ವೃತ್ತಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಅಶೋಕ್ ಹಂಚಲಿ ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಎಂದರೆ ಶಿಕ್ಷಕರ ವೃತ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ಹಾಗೂ ಅಧ್ಯಕ್ಷೀಯ ನುಡಿಯನ್ನು ಡಾ. ಶ್ರೀಮತಿ ಎಸ್ ಟಿ ಬೋಳರೆಡ್ಡಿ ಪ್ರಾಚಾರ್ಯರು 2009 ರಿಂದ 2023ರ ವರಗಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ಸವಿ ನೆನಪಿನೊಂದಿಗೆ ಉಜ್ವಲ ಭವಿಷ್ಯಕ್ಕೆ ಹಾರೈಸಿದರು ಕಾರ್ಯಕ್ರಮದಲ್ಲಿ ಸುಮಾರು 410 ಕ್ಕಿಂತ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. Senior Students’ Association
ಇದನೂ ಓದಿ: Operation Sindoor : ಆಪರೇಶನ್ ಸಿಂಧೂರ: ಭಯೋತ್ಪಾದಕ ದಾಳಿಯ ಪ್ರತಿಕಾರ
ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಿಕಾರ್ಜುನ್ ಕೆಂಗನಾಳ್ ನಿರೂಪಿಸಿದರು ಪ್ರಾಧ್ಯಾಪಕರಾದ ಮಾರುತಿ ಪಿ.ಎನ್ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಪಿ.ಆರ್ ಡೋಣೂರ್ ರವರು ಪರಿಚಯಿಸಿದರು, ಅತಿಥಿಗಳನ್ನು ಪ್ರಾಧ್ಯಾಪಕರಾದ ಸಜ್ಜನ್ ರವರು ಸನ್ಮಾನಿಸಿದರು, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರದೀಪ್ ಎಸ್ ಲಾಳಸಂಗಿ, ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಆಕಾಶ್ ಈ ಇಂಡಿ,ಇರಬಾ ಶೆಟ್ಟಿ,ಶಂಕ್ರಮ್ಮಪಾಟೀಲ್, ಬಿ.ಎಸ್ ಬಾಪುಗೊಂಡ, ಸುಜಾತಾ ಗೊರನಾಳ್, ಪಿ.ಎಂ ರೆಡ್ಡಿ, ರಿಯಾಜ್ ಹಾಗೂ ಶೋಭಾ ನಾವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಡಾ. ಶ್ರೀಮತಿ ಶಾರದಾ ಮನಮಿ ರವರು ವಂದಿಸಿದರು.