ಗದಗ: ಕೊವಿಡ್-19 ಸೋಂಕು ಗೆದ್ದ 59ರ ಮಹಿಳೆ: ಗದಗ ಜಿಲ್ಲಾಡಳಿತದ ಹೋರಾಟದ ಮಹತ್ವದ ಹೆಜ್ಜೆ.

0
204

ಗದಗ. ಮೇ. 1: ವಿಶ್ವವ್ಯಾಪಿ ಜಾಲ ಬೀಸಿರುವ ಕೊವಿಡ್-19 ಸೋಂಕು ಮಕ್ಕಳಿಗೆ ಮತ್ತು ವೃದ್ದರಿಗೆ ಮಾರಕವಾಗಿರುವಾಗ ಗದಗ ಜಿಲ್ಲೆಯ ಗದಗ ಬೆಟಗೇರಿ ನಗರದ ರಂಗನವಾಡಾದ 59ರ ವಯೋವೃದ್ಧೆ ಕೊವಿಡ್-19 ಸೋಂಕನ್ನು ಸೋಲಿಸಿ ಆಸ್ಪತ್ರೆಯಿಂದ ಮನೆಗೆ ಬಂದಿರುವುದು ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಹಗಲಿರುಳು ಯುದ್ದೋಪಾದಿಯಲ್ಲಿ ತೊಡಗಿರುವ ಗದಗ ಜಿಲ್ಲಾಡಳಿತಕ್ಕೆ ಒಂದು ಮಹತ್ವದ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸುವ ಹೆಜ್ಜೆಯಾಗಿದೆ. ರೋಗಿಯು ಸೋಂಕಿನಿಂದ ಹೊರಬರಲು ಶ್ರಮಿಸಿದ ಇನ್ನು 3 ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ವಿಶ್ವಾಸ ಇದರಿಂದ ಹೆಚ್ಚಿದೆ.

ಇವರೆಲ್ಲರ ಹಾಗೂ ಜಿಲ್ಲಾಡಳಿತದ ಹಿಂದೆ ಸದಾ ಕೊವಿಡ್-19 ಕದನದಲ್ಲಿ ಸಾಥ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರಿಗೆ 59 ರ ವೃದ್ದೆ ಕೊವಿಡ್-19 ಸೋಂಕಿನಿಂದ ಹೊರಬಂದಿರುವುದು ಸಹಜವಾಗಿಯೇ ನಿರಾಳ ಭಾವ ನೀಡಿದೆ.

ಗದಗ ಜಿಲ್ಲೆಯ ಗದಗ ಬೆಟಗೇರಿ ನಗರದ ರಂಗನವಾಡಾ ಓಣಿಯಲ್ಲಿ 7-3-2020ರಂದು ಪತ್ತೆಯಾದ ಪಿ-166, 80ರ ವೃದ್ದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಮೊದಲ ಕೊವಿಡ್-19 ಸಕಾರಾತ್ಮಕ ಪ್ರಕರಣವಾಗಿ ಗುರುತಿಸಲಾಗಿತ್ತು. ಕಾರ್ಡಿಯಾಕ ಅರೆಸ್ಟನಿಂದ 9-3-2020ರ ಮುಂಜಾನೆ ಅವರು ಮರಣ ಹೊಂದಿದ್ದರು. ಅವರ ಸಂಪರ್ಕ ಹೊಂದಿದ್ದ ಪಿ-304 ಮಹಿಳೆ ಈಗ ಕೊವಿಡ್-19 ಸೊಂಕಿನಿಂದ ಗುಣಮುಖರಾಗಿರುವುದು ಇವರ ಸಂಪರ್ಕದಿಂದಾಗಿ 18-4-2020ರಂದು ಸೋಂಕಿಗೊಳಗಾದ ಪಿ- 370 ಹಾಗೂ ಈ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದು ಸಕಾರಾತ್ಮಕ ಕೊವಿಡ್-19 ಸೋಂಕಿಗೆ 20-4-2020ರಂದು ಸೋಂಕು ದೃಢಪಟ್ಟ ಪಿ-396, ಹಾಗೂ ದಿ.28-4-2020 ರಂದು ತೀವ್ರ ಉಸಿರಾಟದ ತೊಂದರೆಯಿಂದ ಸೋಂಕಿಗೆ ಒಳಗಾದ ಪಿ-514 ಅವರು ಸೋಂಕಿನಿಂದ ಹೊರಬರುವ ವೈದ್ಯಕೀಯ ಹೋರಾಟಕ್ಕೆ ಹೆಚ್ಚಿನ ಬಲ ನೀಡಿದೆ.

ಗದಗ ಅಯುಷ್ ಆಸ್ಪತ್ರೆ ವೈದ್ಯಕೀಯ ತಂಡದ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೊವಿಡ್-19 ವಿರುದ್ದ ವೈದ್ಯಕೀಯ ಹೋರಾಟಕ್ಕೆ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆ ಯರಿಗೆ ಪರೋಕ್ಷ ಅಪರೋಕ್ಷವಾಗಿ ಕೊವಿಡ್-19 ಸೋಂಕಿನ ನಿಯಂತ್ರಣದ ಯುದ್ದದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಒಂದು ಸಲಾಂ.

ಪಿ-304 ಮಹಿಳೆಗೆ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಓ ಡಾ. ಆನಂದ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಚಪ್ಪಾಳೆ ತಟ್ಟಿ ಕೊವಿಡ್-19 ಸೋಂಕಿನ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ್ದು ಕೊವಿಡ್-19 ಸೋಂಕು ನಿಯಂತ್ರಣ ಯುದ್ದದಲ್ಲಿ ಭಾಗಿಯಾಗಿರುವ ಎಲ್ಲ ಯೋಧರಿಗೆ ಸಲ್ಲಿಸಿದ ಗೌರವ ಹಾಗೂ ಸಂತಸವೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.


 

LEAVE A REPLY

Please enter your comment!
Please enter your name here