ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಹೆದರಿಕೆ ಮತ್ತು ಭಯ ಹುಟ್ಟಿಸುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಪ್ರಮುಖ ರೌಡಿ ಶೀಟರ್ಗಳ Rowdy Sheeters in vijayapur ಮೇಲೆ ಪೋಲೀಸ್ ಇಲಾಖೆ ತೀವ್ರ ತಪಾಸಣಾ ಕಾರ್ಯಾಚರಣೆ ಕೈಗೊಂಡಿದೆ. ಜಿಲ್ಲೆಯಲ್ಲಿ 172 ಜನ ಪ್ರಮುಖ ರೌಡಿ ಶೀಟರ್ಗಳ ಚಟುವಟಿಕೆಗಳನ್ನು ಪರಿಶೀಲಿಸಲಾಗಿದ್ದು, ಹಲವಾರು ಅಕ್ರಮಗಳು ಬೆಳಕಿಗೆ ಬಂದಿವೆ.
ಅಕ್ರಮ ಚಟುವಟಿಕೆಗಳು:
- ಬೇರೆಯವರ ಹೆಸರಿನಲ್ಲಿದ್ದ ವಾಹನಗಳನ್ನು ಕಬಳಿಕೆ: 06 ಜನರು ಅನಧೀಕೃತವಾಗಿ ಇಂತಹ ವಾಹನಗಳನ್ನು ಇಟ್ಟುಕೊಂಡಿದ್ದರು.
- ಹಣಕಾಸು ಅಕ್ರಮಗಳು: ಸಾಲದ ವಸೂಲಿ ಮಾಡುವ ಸಲುವಾಗಿ ಬೇರೆಯವರ ಹೆಸರಿನ ಚೆಕ್ಗಳು, ಬಾಂಡ್ ಪೇಪರ್ಗಳು, ಇತರೆ ದಾಖಲಾತಿಗಳನ್ನು ಹೆದರಿಸಿ ವಶಪಡಿಸಿಕೊಂಡಿದ್ದರು.
- ಒಟ್ಟು 21 ಪ್ರಕರಣಗಳು (ಪಿಎಆರ್): ವಿವಿಧ ಕಾನೂನುಬಾಹಿರ ಚಟುವಟಿಕೆಗಳ ಸಂಬಂಧ ದಾಖಲಿಸಲಾಗಿದೆ.
ಇದನ್ನೂ ಓದಿ: Vijayapura News | ಮುಳವಾಡ ಅಕ್ರಮ ಟೋಲ್ ವಸೂಲಿಗೆ ಬ್ರೇಕ್ ಹಾಕಲು ಸೋಮನಾಥ ಕಳ್ಳಿಮನಿ ಒತ್ತಾಯ
ನ್ಯಾಯಾಲಯ ಕಾರ್ಯಾಚರಣೆ:
- ವಾರೆಂಟ್ವಿರುವ ರೌಡಿಗಳ ಬಂಧನ: ಮಾನ್ಯ ನ್ಯಾಯಾಲಯದಿಂದ ವಾರಂಟ್ Rowdy Sheeters in vijayapur ಹೊರಡಿಸಿದ್ದರೂ ಹಾಜರಾಗದೇ ಓಡಾಡುತ್ತಿದ್ದ 02 ರೌಡಿ ಶೀಟರ್ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
- ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳು: 04 ರೌಡಿ ಶೀಟರ್ಗಳ ಮೇಲೆ ಅಕ್ರಮ ಆಯುಧಗಳನ್ನು ಇಟ್ಟುಕೊಂಡಿದ್ದಕ್ಕಾಗಿ 02 ಹೊಸ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಪೋಲೀಸ್ ಇಲಾಖೆಯ ಈ ಕ್ರಮ ಸಾರ್ವಜನಿಕ ಭದ್ರತೆ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Vijayapura News | ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಕ್ರೀಡಾಪಟುಗಳ ಸಾಧನೆ