Bagalkote News | ಏಕಲವ್ಯ – ವೈದ್ಯಕೀಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ಧೆ| ಡಾ.ವೀರಣ್ಣ ಚರಂತಿಮಠರಿಂದ ಅಭಿನಂಧನೆ

ರಾಜ್ಯ ಮಟ್ಟದ ಹೋಮಿಯೋಪಥಿಕ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವೈದ್ಯಕೀಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ದೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಅಭಿನಂದಿಸಿದರು.

0
38
ಏಕಲವ್ಯ image

ಬಾಗಲಕೋಟೆ: ರಾಜ್ಯ ಮಟ್ಟದ ಹೋಮಿಯೋಪಥಿಕ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವೈದ್ಯಕೀಯ ಏಕಲವ್ಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ದೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಅಭಿನಂದಿಸಿದರು.

ಇದೇ ಅಕ್ಟೋಬರ 24 ರಂದು ಬೆಳಗಾಂವಿಯ ಪ್ರತಿಷ್ಟಿತ ಭರತೇಶ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ರಾಜ್ಯ ಮಟ್ಟದ ಹೋಮಿಯೋಪಥಿಕ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಹೋಮಿಯೋಪತಿಯ ಯುವ ಮನಸ್ಸಿನ ಮೂಲಕ ಮಾನಸಿಕ ಆರೋಗ್ಯವನ್ನು ಅನ್ವೇಷಿಸುವುದು “ವಿಷಯದ ಮೇಲೆ ಅರಿವು ಮೂಡಿಸಲು ಏರ್ಪಡಿಸಿದ ವೈದ್ಯಕೀಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ದೆಯಲ್ಲಿ ಬಾಗಲಕೋಟೆಯ ಬಿ.ವಿ.ವಿ.ಎಸ್.ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಂಧ್ಯಾ ಹಾಗೂ ಶ್ರೀಮಂತ ಸಜ್ಜನ ಕ್ರಮವಾಗಿ ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಇದನ್ನೂ ಓದಿ: Bagalkote News | ಚಿನ್ನದ ಪದಕ ವಿಜೇತೆ ಅನಿತಾ ಚವ್ಹಾಣಗೆ ರಾಜ್ಯ ವುಶು ಸಂಸ್ಥೆಯಿಂದ ಸನ್ಮಾನ

ಏಕಲವ್ಯ ಪ್ರಶಸ್ತಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ಮಾಡಿದ ಉಪನ್ಯಾಸಕರಾದ ಡಾ.ವಿಜಯಲಕ್ಷ್ಮಿ ಪಾಟೀಲ, ಡಾ. ಶಮಶಾದ ಅಂಕಲಗಿ, ಡಾ.ನುಸರತ, ಡಾ.ವಿನೋದ, ಡಾ.ಪವನ ಅವರನ್ನು ಸೇರಿದಂತೆ ವಿದ್ಯಾರ್ಥಿಗಳನ್ನು ಸೋಮವಾರ ಸಂಘದ ಕಛೇರಿಯಲ್ಲಿ ಬವಿವ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಅಭಿನಂಧನೆ ಸಲ್ಲಿಸಿ ಶುಭ ಹಾರೈಸಿದರು.

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಹಾಗೂ ಪ್ರಾಚಾರ್ಯರಾದ ಡಾ.ಅರುಣ ಹೂಲಿ. ಡಾ.ರವಿ.ಕೋಟೆಣ್ಣವರ ಹಾಗೂ ಅಧ್ಯಾಪಕರು ಇದ್ದರು.

ಇದನ್ನೂ ಓದಿ: Vijayapura News | ಗೌರವ ಡಾಕ್ಟರೇಟ್ – ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ


LEAVE A REPLY

Please enter your comment!
Please enter your name here