Vijayapura News | ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣ ತೆರವು ಕಾರ್ಯಾಚರಣೆ

ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣವನ್ನು Encroachment clearance ತೆರವುಗೊಳಿಸಲಾಯಿತು.

0
11
Encroachment clearance ಇ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ವಾರ್ಡ ನಂ.13ರ ಜನತಾ ಬಜಾರ, ನೆಹರು ಮಾರುಕಟ್ಟೆ ಬಳಿ ಹಾಗೂ ಎಲ್‍ಬಿಎಸ್ ಮಾರುಕಟ್ಟೆ ಹತ್ತಿರ ಅತಿಕ್ರಮಣವನ್ನು Encroachment clearance ತೆರವುಗೊಳಿಸಲಾಯಿತು.

ಇದನ್ನೂ ಓದಿ: Vijayapura News | ಬಾಲಮಂದಿರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ಶುಕ್ರವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ನಗರದ ನೆಹರು ಮಾರ್ಕೆಟ್ ಹಿಂಭಾಗ, ಎಂ.ಆರ್.ಹೋಟೆಲ್ ಹತ್ತಿರ, ಕೆಎಸ್‍ಆರ್‍ಟಿಸಿ ಡಿಪೋ ಪಕ್ಕ, ಪ್ರವಾಸೋದ್ಯಮ ಮಂದಿರದ ಹಿಂದುಗಡೆ, Encroachment clearance ಸೈನಿಕ ಶಾಲೆ ರಸ್ತೆಯ ಜಿಮಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರಸ್ತೆಯಲ್ಲಿ ಜಿಲ್ಲಾ ಕ್ರೀಡಾಂಗಣದ ಹತ್ತಿರ ವೆಂಡಿಂಗ್ ಜೋನ್‍ಗಳನ್ನು ಗುರುತಿಸಲಾಗಿದ್ದು, ಸದರಿ ನಿಗದಿತ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ-ವಹಿವಾಟು ನಡೆಸುವಂತೆ ತಿಳಿಸಲಾಗಿದೆ.

ತೆರವು ಕಾರ್ಯಾಚರಣೆ ವೀಕ್ಷಿಸುತ್ತಿರುವ ಸ್ಥಳೀಯರು

ಇದನ್ನೂ ಓದಿ: Bagalkote News | ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಗೆ ಕ್ರಮ : ಸಿಇಒ ಕುರೇರ್

ಇಂದು ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ವಲಯ ಕಛೇರಿ-1ರ ವಲಯ ಆಯುಕ್ತರಾದ ಸುನೀಲ ಪಾಟೀಲ ಸೇರಿದಂತೆ ಪಾಲಿಕೆ ಅಧಿಕಾರಿ-ಸಿಬ್ಬಂದಿಗಳು, ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here