ಬಾಗಲಕೋಟೆ: Sahakar Ratna Award ಸನ್ 2024ನೇ ಸಾಲಿನ ರಾಜ್ಯ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: Bagalkote News | ಉದ್ಯೋಗಂ ಮಾನವ ಲಕ್ಷಣಂ : ಆರ್ಥಿಕ ಸಭಲತೆಗೆ ಉದ್ಯೊಗವೇ ಮುಖ್ಯ ಆಯುಧ : ಕೆ.ಎಂ. ಜಾನಕಿ
Sahakar Ratna Award ಅರ್ಜಿ ಸಲ್ಲಿಸುವ ಸಹಕಾರಿಗಳು 10 ವರ್ಷ ಸೇವೆ ಸಲ್ಲಿಸಿರಬೇಕು. ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆ ಹೊಂದಿರಬಾರದು. ಕನಿಷ್ಟ 4 ವಿವಿಧ ರೀತಿಯ ಸಹಕಾರ ಸಂಘಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವವರು, ಸಹಕಾರಿ ಕ್ಷೇತ್ರದಲ್ಲಿ ಪ್ರಾಥಮಿಕ ಹಂತದಿಂದ ರಾಜ್ಯ ಮಟ್ಟದ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಿರಬೇಕು.
ಇದನ್ನೂ ಓದಿ: Bagalkote news | ಕನ್ನಡ ರಾಜ್ಯೋತ್ಸವ : ಪ್ರಬಂಧ, ಸಮೂಹ ಗೀತ ಗಾಯನ ಸ್ಪರ್ಧೆ
ಯಾವುದೇ ಸಹಕಾರ ಸಂಘಕ್ಕೆ ಸುಸ್ತಿದಾರರಾಗಿರಬಾರದು ಮತ್ತು ಸಹಕಾರಿಗಳು ನಿರ್ದೇಶಕರಾಗಿದ್ದ ಅವಧಿಯಲ್ಲಿ ಆಡಳಿತ ಮಂಡಳಿ ಕರ್ನಾಟಕ ಸಹಕಾರ ಕಾಯ್ದೆ 1959 ಕಲಂ 30 ಹಾಗೂ 31 ರನ್ವಯ ರದ್ದಾಗಿರಬಾರದು. ಅರ್ಜಿಗಳನ್ನು ಸಹಕಾರ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯ ಪರಿಚಯದೊಂದಿಗೆ ಅಕ್ಟೋಬರ 21 ರೊಳಗಾಗಿ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯುನಿಯನ್, ಸೆಕ್ಟರ ನಂ.25, ಸೋಮೇಶ್ವರ ದೇವಸ್ಥಾನ ಹತ್ತಿರ, ನವನಗರ, ಬಾಗಲಕೋಟೆ ಇವರಿಗೆ ಸಲ್ಲಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.