Vijayapura News | ಡಾ. ಅಣ್ಣಾಬಾವು ಸಾಠೆಯವರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ

ಸರ್ಕಾರದ ವತಿಯಿಂದ ಆಚರಿಸಲು,ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಹಾಗೂ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಮಾಡಲು ಆಗ್ರಹಿಸಿ ಮನವಿಸಲ್ಲಿಸಿದರು.

0
49
ಡಾ. ಅಣ್ಣಾಬಾವು ಸಾಠೆ image

ವಿಜಯಪುರ: ಸತ್ಯ ಶೋಧಕ ಲೋಕ ಶಾಹೀರ ಡಾ. ಅಣ್ಣಾಬಾವು ಸಾಠೆ ಯವರ ಮೂರ್ತಿ ಪ್ರತಿಷ್ಠಾಪನೆ, ಡಾ. ಅಣ್ಣಾಭಾವು ಸಾಠೆ ಯವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲು,ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಹಾಗೂ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಮಾಡಲು ಆಗ್ರಹಿಸಿ ಮನವಿ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಕರ್ನಾಟಕದ ಪರಂಪರೆ ಮತ್ತು ಏಕತೆ ಆಚರಣೆ

ಸತ್ಯಶೋಧಕ ಲೋಕಶಾಹೀರ ಡಾ. ಅಣ್ಣಾಬಾವು ಸಾಠೆ ಸಂಘಟನಾ ಸಮಿತಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಸತ್ಯಶೋಧಕ ಲೋಕಶಾಹೀರ ರವರ ಮೂರ್ತಿಯನ್ನು ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಸತ್ಯಶೋಧಕ ಲೋಕಶಾಹೀರ ಡಾ. ಅಣ್ಣಾಬಾವು ಸಾಠೆಯವರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪಿಸಲು, ಅವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲು, ಅವರಿಗೆ ಭಾರತ ರತ್ನ ಪ್ರಶಸ್ತಿ ಶಿಫಾರಸ್ಸು ಮಾಡಿ ಕರ್ನಾಟಕ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲು ಮತ್ತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿ ಮಾಡಲು ನಾಳೆ ನಡೆಯುವ ಕರ್ನಾಟಕ ಸರ್ಕಾರದ ಚಳಿಗಾಲ ಅಧಿವೇಶನದಲ್ಲಿ ಈ ಮೇಲಿನ ಎಲ್ಲ ವಿಷಯಗಳನ್ನು ಪ್ರಸ್ಥಾಪಿಸಲು ಹಾಗೂ ಜಾರಿಗೊಳಿಸಲು ತಾವು ಸದನದಲ್ಲಿ ಮಂಡಿಸಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥಾಪಕ ಅದ್ಯಕ್ಷರಾದಂತಹ ಸೋಮಲಿಂಗ ರಣದೇವಿ, ಉಪಾಧ್ಯಕ್ಷರಾದ ಲಖನ್ ದೇವಕುಳೆ, ಜಿಲ್ಲಾ ಕಾರ್ಯದರ್ಶಿ ರಾಹುಲ ಸದಾಶಿವ ಮೋರೆ, ಪ್ರಕಾಶ ತುಪಸುಂದರ, ನಗರ ಅಧ್ಯಕ್ಷರಾದ ಕುಮಾರ ವಾಘ್ಮೋರೆ, ಶಿವಾಜಿ ರಣದೇವಿ, ಸುನೀಲ ಮಳಗಿ, ಮಧು ಕಸಬೆ, ಭಾರತ ದೇವಕುಳೆ, ಜನಾರ್ಧನ ದೇವುಕುಳೆ, ಸುರೇಶ ವಾಘ್ಮೋರೆ, ರಾಜು ರಾಕ್ಷೆ, ರಮೇಶ ಕಾಂಬಳೆ, ಕುಮಾರ ರಣದೇವಿ ಹಾಗೂ ಕೃಷ್ಣ ದೇವಕುಳೆ ಮನವಿ ಮಾಡಿಕೊಳ್ಳುತ್ತೇವೆ.


LEAVE A REPLY

Please enter your comment!
Please enter your name here