Vijayapur News | ಪಿಂಚಣಿ ನಮ್ಮ ಹಕ್ಕು, ನಮ್ಮ ಬೇಡಿಕೆ ಈಡೇರಲೇಬೇಕು…

ಕಳೆದ 10 -12 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಸರತಿ ಉಪವಾಸ ಸತ್ಯಾಗ್ರಹ ಇಂದಿಗೆ 2098 ದಿನಕ್ಕೆ ಕಾಲಿಟ್ಟರೂ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದೆ.

0
36
Pension strike in Vijayapur image

ವಿಜಯಪುರ: ವಿಜಯಪುರದ ಇ.ಸಿ.ಎಸ್- 95 ಪಿಂಚಣಿದಾರರು, ರಾಷ್ಟ್ರೀಯ ಸಂಘರ್ಷ ಸಮಿತಿಯ ಕರೆಯ ಮೇರೆಗೆ ವಿಜಯಪುರದ ಭವಿಷ್ಯ ನಿಧಿ ಕಛೇರಿ ಎದುರು ಸುಮಾರು 500 ಕ್ಕಿಂತ ಹೆಚ್ಚು ಜನ ಸೇರಿ ಕನಿಷ್ಠ ಪಿಂಚನ ಹೆಚ್ಚಳಕ್ಕಾಗಿ Pension strike in Vijayapur ಬೃಹತ್ ಪ್ರತಿಭಟನೆ ನಡೆಸಿದರು.

ಇ.ಪಿ.ಎಸ್-95 ಪಿಂಚಣಿದಾರರು ಕಳೆದ 10 -12 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಸರತಿ ಉಪವಾಸ ಸತ್ಯಾಗ್ರಹ ಇಂದಿಗೆ 2098 ದಿನಕ್ಕೆ ಕಾಲಿಟ್ಟರೂ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಎನ್.ಎ.ಸಿ. ವಿಜಯಪುರ ಅಧ್ಯಕ್ಷರಾದ ಎಸ್.ಜೆ.ಗೌಡರ ಅವರು ಮಾತಾನಾಡಿದರು.

ಇದನ್ನೂ ಓದಿ: Vijayapura News | ಹಿರಿಯರ ಸ್ಮರಣೆ ದತ್ತಿ ಗೋಷ್ಠಿಗಳ ಉದ್ದೇಶ – ಡಾ ಶಿವಾನಂದ ಕುಬಸದ ಅಭಿಮತ

ಇದುವರೆಗೆ ಕನಿಷ್ಠ ಪಿಂಚಣಿ ರೂ.7500+ಡಿ. ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಬೇಡಿಕೆಯನ್ನು ಸರ್ಕಾರ ಇ.ಪಿ.ಎಫ್.ಓ , ಈಡೇರಿಸುತ್ತಿಲ್ಲ . ಪಿಂಚಣಿದಾರರ ಬವಣೆ ಹೇಳತೀರದ್ದು ಆಗಿದೆ. ಸೇವಾವಧಿಯಲ್ಲಿ ವಂತಿಗೆ ಕೊಟ್ಟು ಯೋಗ್ಯ ಪಿಂಚನೆ ಇಲ್ಲದೇ ಪಿಂಚಣಿದಾರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಬೇಗನೆ ಬೇಡಿಕೆಯನ್ನು ಈಡೇರಿಸಿ ವೃದ್ಧರನ್ನು ಗೌರವಯುತ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ನ್ಯಾಮ್ಸ್ ನೇತಾರ ಎಂ.ಎ.ಮುಲ್ಲಾ ಹೇಳಿದರು.

ರಾಷ್ಟ್ರೀಯ ಸಂಘರ್ಷ ಸಮಿತಿಯ ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾದ ವೀರಕುಮಾರ ಗಡಾದ ಅವರು ಮಾತಾನಾಡುತ್ತಾ ಕಳೆದ ತಿಂಗಳು ಸತತವಾಗಿ ಇ.ಪಿ.ಎಫ್.ಓ. , ಕೇಂದ್ರ ಕಾರ್ಮಿಕ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯ ಎನ್.ಎ.ಸಿ. ರಾಷ್ಟ್ರೀಯ ಅಧ್ಯಕ್ಷರಾದ ಕಮಾಂಡರ್ ಆಶೋಕ ರಾವುತ ಹಾಗೂ ಮುಖಂಡರ ಜೊತೆ ಸಭೆಗಳನ್ನು ನಡೆಸಿ ಒಂದು ನಿರ್ಧಾರಕ್ಕೆ ಬಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ ಗ್ರಾಮ ಪಂಚಾಯತ ನೌಕರರ ಸಂಘದಿಂದ ‘ಸಚಿವರ ಮನೆ ಚಲೋ’ ಪ್ರತಿಭಟನೆ

Pension strike in Vijayapur ಪ್ರಸ್ತುತ ಪ್ರಸ್ತಾವನೆಯು ಸನ್ಮಾನ್ಯ ಪ್ರಧಾನಿಯವರ ಕ್ಯಾಬಿನೆಟ್ ಮುಂದಿದ್ದು, ದೇಶದ 78 ಲಕ್ಷ ಇ.ಪಿ.ಎಸ್.-95 ಎಂಚಣಿದಾರರ ಕನಿಷ್ಠ ಪಿಂಚಣಿ: ರೂ .1000 ದಿಂದ 7500+ ಡಿ.ಎ. ಮಂಜೂರು ಮಾಡಲು ಇನ್ನೂ ದಿನಗಳನ್ನು ಮುಂದೂಡುತ್ತಾ ಪಿಂಚಣಿದಾರರ ಬವಣೆ ನೀಗಿಸಲು ಕೇಂದ್ರ ಸರ್ಕಾರ ಇನ್ನೂ ಮನಸ್ಸು ಮಾಡುತ್ತಿಲ್ಲ. ಇದೇ ರೀತಿ ಕಾಲಹರಣವಾಗುತ್ತಾ ಹೋದರೆ ದೇಶದಲ್ಲಿ ದಿನಕ್ಕೆ ಸರಾಸರಿ 200 ಜನ ಪಿಂಚಣಿದಾರರು ಮರಣವನ್ನು ಅಪ್ಪುತ್ತಿದ್ದು, ವೃದ್ಧರಿಗೆ ಇನ್ನೂ ಎಷ್ಟು ದಿನ ಪಿಂಚಣಿ ಹೆಚ್ಚಳಕ್ಕಾಗಿ ಕಾಯಬೇಕು ಅಂತಾ ಗೋಳಿಡುತ್ತಿದ್ದಾರೆ.

ಈಗ ನಮ್ಮ ಬೇಡಿಕೆ ಈಡೇರದಿದ್ದರೆ ವೃದ್ಧರೂ ಉಗ್ರ ಹೋರಾಟಕ್ಕೆ ಮುಂದಾಗುವುದು ಖಚಿತ , ಸನ್ಮಾನ್ಯ ಮೋದಿಯವರ ಸರ್ಕಾರ ಈಗಲಾದರೂ ಎಚ್ಚೆತ್ತು ವೃದ್ಧ ಪಿಂಚಣಿದಾರರು ಬೇಡಿಕೆಯನ್ನು ಈಡೇರಿಸಲೇಂದು ವೀರಕುಮಾರ ಗಡಾದ ಒತ್ತಾಯಿಸಿದರು.

ಇದನ್ನೂ ಓದಿ: ವಿಜಯಪುರ | ಭಗತ್ ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ | ಮಲ್ಲಿಕಾರ್ಜುನ್ ಭೃಂಗಿಮಠ 

ವಿಜಯಪುರ ಎನ್.ಇ.ಸಿ. ಕಾರ್ಯದರ್ಶಿಗಳಾದ ಆರ್.ಎ.ಪನಿಬಂಧ ಅವರು ಮಾತನಾಡುತ್ತಾ ಪ್ರಸ್ತುತ ಕೇಂದ್ರ ಸರ್ಕಾರ ಪಿಂಚಣಿದಾರರ ಬೇಡಿಕೆ ಈಡೇರಿಸುವತ್ತ ಹೆಜ್ಜೆ ಇಟ್ಟಿದ್ದು, ಕೂಡಲೇ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಎ.ಆಯ್.ಟಿ.ಯು.ಸಿ.ಮುಖಂಡ ಗೋಪಾಲ ಬಿರಾದಾರ ಮಾತನಾಡುತ್ತಾ ಎನ್.ಎ.ಸಿ. ಸಂಘಟನೆ ಸರ್ಕಾರಕ್ಕೆ ಇ.ಪಿ.ಎಫ್.ಓ.ಹತ್ತಿರದ ಸರ್‌ಪ್ಲಸ್ ಹಣ ಇದ್ದು, ಆ ಹಣದಿಂದಲೇ ಕನಿಷ್ಠ ಪಿಂಚಣಿ ಹೆಚ್ಚಳ ಮಾಡಲು ಸಾಕಾಗುತ್ತದೆಂದು ಸರ್ಕಾರ ಯಾವುದೇ ಹೊರೆ ಇಲ್ಲದೇ ಮಂಜೂರು ಮಾಡಬಹುದೆಂದು ಈ ಹಿಂದೆಯೇ ಹೈ ಪವರ್ ಕಮೀಟ ಮೀಟಿಂಗ್‌ನಲ್ಲಿ ತೋರಿಸಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಮೇ ಸಾಹಿತ್ಯ ಬಳಗದ ವತಿಯಿಂದ ಕ್ರಾಂತಿಗೀತೆಗಳ ಕಾರ್ಯಕ್ರಮ

ಅದರೂ ಸರ್ಕಾರ ಪಿಂಚಣಿ ಹೆಚ್ಚಳ ಮಾಡಲು ಏಕೆ ? ಹಿಂದಟ್ಟು ಹಾಕುತ್ತಿದೆ ಅರ್ಥವಾಗುತ್ತಿಲ್ಲ ? ತಕ್ಷಣ ಪಿಂಚಣಿ ಹೆಚ್ಚಳ ಆಗಲೇಬೇಕು ಇಲ್ಲದಿದ್ದರೆ ವೃದ್ಧ ಪಿಂಚಣಿದಾರರೆಲ್ಲ ಬೀದಿಗೆ ಇಳಿದು ಉಗ್ರ ಹೋರಾಟ ಮಾಡುತ್ತಾರೆಂದು ಹೇಳಿದರು. ಹಗೂ ಇನ್ನಿತರೆ ಸಂಸ್ಥೆಗಳ ಮುಖಂಡರು ಮಾತನಾಡಿದರು.

ಇ.ಪಿ.ಎಫ್.ಓ.ಕಛೇರಿಯಲ್ಲಿ ಅಧಿಕಾರಿಗಳ ಮುಖಾಂತರ ಕೇಂದ್ರ ಕಾರ್ಮಿಕ ಕಲ್ಯಾಣ ಮಂತ್ರಿ ಮನಸುಖ ಮಾಂಡವಿಯಾ ಅವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.


LEAVE A REPLY

Please enter your comment!
Please enter your name here