ಕೊರೋನಾ ಲಾಕ್ ಡೌನ್ ಬೇಜಾರಾದರೆ ಅಂಗೈಯಲ್ಲಿ ಇ-ಗ್ರಂಥಾಲಯ

0
236

ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಕಾರಣ ಸಾರ್ವಜನಿಕ ಗ್ರಂಥಾಲಯಗಳಿಲ್ಲದೆ ಬೇಜಾರಾಗಿರುವ ಓದುಗರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇ-ಗ್ರಂಥಾಲಯ ವೆಬ್‍ಸೈಟ್ ಪರಿಚಯಿಸಿದೆ.

ಲಾಕ್ ಡೌನ್‍ನಿಂದ ಹೋಂ ಕ್ವಾರಂಟೈನ್, ಐಸೋಲೆಷನ್‍ನಲ್ಲಿರುವ ಮತ್ತು ಮನೆಯಲ್ಲಿ ಶ್ರೀಸಾಮಾನ್ಯ ಓದುಗರಿಗೆ ಅನುಕೂಲವಾಗಲು ಹಾಗೂ ಓದುವ ಹವ್ಯಾಸ ಬೆಳೆಸಿಕೊಳ್ಳುವವರಿಗಾಗಿ ಆಂಗೈಯಲ್ಲೆ ಇ-ಗ್ರಂಥಾಲಯ ಎನ್ನುವ ವೆಬ್‍ಸೈಟ್ ಆ್ಯಪ್ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಇ-ಪುಸ್ತಕ ಓದಲು ಸಾರ್ವಜನಿಕರು ಟ್ಯಾಬ್, ಕಂಪ್ಯೂಟರ್, ಲ್ಯಾಪ್‍ಟಾಪ್ ನಲ್ಲಿ www.Karnatakadigitalpubliclibrary.org ಗೆ ಭೇಟಿ ನೀಡಬಹುದು ಅಥವಾ ಮೊಬೈಲ್‍ನಲ್ಲಿ ಗೂಗಲ್ ಪ್ಲೇ ಸ್ಟೋರ್ ಹೋಗಿ ಇ-ಸಾರ್ವಜನಿಕ ಗ್ರಂಥಾಲಯ ಫ್ರೀ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಪುಸ್ತಕ ಓದಬಹುದಾಗಿದೆ. ಡೌನ್‍ಲೋಡ್ ನಂತರ ಮೊಬೈಲ್ ಸಂಖ್ಯೆ, ಹೆಸರು, ಇಮೇಲ್ ವಿಳಾಸ ಅಪಡೇಟ್ ಮಾಡಿದ ನಂತರ ಓ.ಟಿ.ಪಿ ಬರುತ್ತದೆ. ಆಗ ಕ್ರಿಯೇಟ್ ನ್ಯೂ ಎಂದು ಸೈನ್ ಆಫ್ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ.

1ನೇ ತರಗತಿಯಿಂದ 12ನೇ ತರಗತಿ ವರಗೆ ಎಲ್ಲ ಸಿ.ಬಿ.ಎಸ್.ಸಿ., ಐ.ಎ.ಸ್., ಐ.ಪಿ.ಎಸ್. ಸ್ಪರ್ಧಾತ್ಮಕ ಪೂರ್ವ ತಯ್ಯಾರಿ ಪುಸ್ತಕಗಳು, ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ತಾಂತ್ರಿಕ ತರಬೇತಿ ಪುಸ್ತಕಗಳು ಲಭ್ಯ ಇವೆ. ಈ ಡಿಜಿಟಲ್ ಗ್ರಂಥಾಲಯಗಳಲ್ಲಿ ಒಟ್ಟು ಪುಸ್ತಕ 100013 ಅಪಲೋಡ್ ಮಾಡಲಾಗಿದೆ. 59989 ರಾಷ್ಟ್ರೀಯ, ಅಂತರರಾಷ್ಟ್ರೀಯ ಪತ್ರಿಕೆ ನಿಯತಕಾಲಿಕಗಳು, ಮಕ್ಕಳ ಪುಸ್ತಕ ಹಾಗೂ ಚಿತ್ರ ತುಣುಕು ಸಹ ವ್ಯವಸ್ಥೆ ಮಾಡಲಾಗಿದೆ ಓದುಗರು ಇದರ ಸದುಪಯೋಗ ಮಾಡಿಕೊಳ್ಳಬಹುದು.

ambedkar image

LEAVE A REPLY

Please enter your comment!
Please enter your name here