ಬಾಗಲಕೋಟೆ: ಪ್ರಸಕ್ತ ಸಾಲಿಗೆ ನೇಕಾರ ಸಮ್ಮಾನ್ ಯೋಜನೆಯಡಿ (Nekara Samman Yojana) ಕೈಮಗ್ಗ ನೇಕಾರರಿಗೆ ವಾರ್ಷಿಕ 5 ಸಾವಿರ ರೂ.ಗಳ ಆರ್ಥಿಕ ನೆರವು ನೀಡುವ ಸಲುವಾಗಿ ವೈಯಕ್ತಿಕ ನೇಕಾರರು, ಕೆ.ಎಚ್.ಡಿ.ಸಿ ನೇಕಾರರು, ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಕೈಮಗ್ಗ ನೇಕಾರಿಕೆ ವೃತ್ತಿ ಮಾಡುತ್ತಿರುವ ಅರ್ಹ ಕಾರ್ಯನಿರತ ಕೈಮಗ್ಗ ನೇಕಾರರನ್ನು ಈಗಾಗಲೇ ಕಳೆದ ಸಾಲಿನಲ್ಲಿ ಈ ಯೋಜನೆಯಡಿ ಸೇವಾ ಸಿಂಧು ಪೋರ್ಟಲ್‍ನಲ್ಲಿ ಕೈಮಗ್ಗ ನೇಕಾರರಿಂದ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Bagalkote News | ಸುಸ್ಥಿರ ಕೃಷಿ, ತೋಟಗಾರಿಕೆಗೆ ಜೀವಾಳ : ಕಲೈಸೆಲ್ವಿ
Nekara Samman Yojana ಬಾಗಲಕೋಟೆ ಜಿಲ್ಲೆಯ ಕೈಮಗ್ಗ ನೇಕಾರರು ಜಿಲ್ಲಾ ಕಚೇರಿಯಿಂದ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಆಧಾರ ಕಾರ್ಡ, ರೇಷನ್ ಕಾರ್ಡ, ನೇಕಾರ ಸಮ್ಮಾನ್ ಐಡಿ, ಪೆಹಚಾವ್ ಕಾರ್ಡ, ಆಧಾರ ಲಿಂಕ್ ಮಾಡಿದ ಬ್ಯಾಂಕ್ ಪಾಸ್‍ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿರುವ ಫೋಟೋ ಮತ್ತು ಕೈಮಗ್ಗದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ಮಜೂರಿ ಪಾವತಿಸಿದ ರಶೀದಿ ಹಾಗೂ ಇತರೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಅಕ್ಟೋಬರ 25 ರೊಳಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಕಚೇರಿ, ನೇಕಾರ ಸಹಕಾರ ಸಂಘ, ಕೆ.ಎಚ್.ಡಿ.ಸಿ, ಖಾದಿ ಕೇಂದ್ರಗಳಿಗೆ ಹೋಗಿ ಖುದ್ದಾಗಿ ಅರ್ಜಿ ಸಲ್ಲಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235463ಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: Bagalkote News | ಅಮೂಲ್ಯಗೆ 16 ಚಿನ್ನದ ಪದಕ | ತೋವಿವಿಯಲ್ಲಿ 13ನೇ ಘಟಿಕೋತ್ಸವ |