ವಿಜಯಪುರ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜಿಲ್ಲೆಯ ರೈತರ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ Competitive Examination ತರಬೇತಿಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಅವರು ತಿಳಿಸಿದ್ದಾರೆ.
ಜಿಲ್ಲೆಯ ರೈತ ಕುಟುಂಬಗಳ 100 ಜನ ಪ್ರತಿಭಾವಂತ ಪರೀಕ್ಷಾರ್ಥಿಗಳಿಗೆ 3 ತಿಂಗಳ ತರಬೇತಿಯನ್ನು ಆಯೋಜಿಸಲಾಗಿದೆ, ಕೆ.ಎ.ಎಸ್, ಪಿ.ಡಿ.ಓ, ಪಿ.ಎಸ್.ಐ, ಎಸ್.ಡಿ.ಎ, ಎಫ್.ಡಿ.ಎ, ಪೋಲಿಸ್, ಬ್ಯಾಂಕಿಂಗ್, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಇರಲಿದೆ.
ತರಬೇತಿಯ 50% ಹಣವನ್ನು ರೈತ ಸಂಘ ಭರಿಸಲಿದೆ, ಉಳಿದ 50% ಹಣವನ್ನು ಪರೀಕ್ಷಾರ್ಥಿಗಳು ಭರಿಸಬೇಕಾಗುತ್ತದೆ, Competitive Examination ಜಿಲ್ಲಾ ಪಂಚಾಯಿತಿ ಮುಖ್ಯ ದ್ವಾರದ ಬಳಿ, ನಗರದ ಬಿ.ಡಿ.ಎ ಕ್ರಾಸ್ ಹತ್ತಿರದ ಅನಮೊಲ್ ಟಾವರ್ ಬಿಲ್ಡಿಂಗ್‍ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಆಫಿಸರ್ಸ ಅಕಾಡೆಮಿಯಲ್ಲಿ ತರಬೇತಿಗೆ ನಿಯೋಜಿಸಲಾಗಿದ್ದು, ಜಿಲ್ಲೆಯ ಪರೀಕ್ಷಾರ್ಥಿಗಳು ಇದರ ಸದುಯೋಗ ಪಡೆದುಕೊಳ್ಳಬಹುದು.
ಆಸಕ್ತರು 8088993807 ಬಾಲಾಜಿ ಕಾಂಬಳೆ, 8073034445 ರಾಮನಗೌಡ ಪಾಟೀಲ, 8884542997 ಸಂಗಮೇಶ ಸಗರ ಕರೆ ಮಾಡಿ ಹೆಸರು ನೊಂದಾಯಿಸಬಹುದು.