“ಬ್ಯಾಂಕ್ ಜನ ಜಾಗೃತಿ ಕಾರ್ಯಕ್ರಮ: ಹಣಕಾಸು ಶಿಕ್ಷಣ ಮತ್ತು ಸೇವೆಗಳ ಕುರಿತು ಮಾಹಿತಿ”

ಗ್ರಾಹಕರ ದೂರುಗಳ ಪರಿಹಾರ ಸಂಬಂಧ ಬ್ಯಾಂಕುಗಳಿಗೆ ಆರ್.ಬಿ.ಐ ನೀಡಿರುವ ಸೂಚನೆಗಳು ಮತ್ತು ತಮ್ಮ ದೂರುಗಳನ್ನು ಕಾಲ ಮಿತಿಯಲ್ಲಿ ಪರಿಹರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು.

0
53
Bank Public Awareness Programme image

ಬಾಗಲಕೋಟೆ: ಭಾರತೀಯ ರಿಸರ್ವ್ ಬ್ಯಾಂಕ್ Bank Public Awareness Programme ಲೋಕಪಾಲರು, ಬೆಂಗಳೂರು ಇವರಿಂದ ಜನ ಜಾಗೃತಿ ಕಾರ್ಯಕ್ರಮ ಬ್ಯಾಂಕಿಂಗ್ ಲೋಕಪಾಲರ ಕಾರ್ಯಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು ಇವರು ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಸೆಪ್ಟೆಂಬರ್ 13, 2024 ರಂದು ಬಾಗಲಕೋಟೆಯಲ್ಲಿ ಬ್ಯಾಂಕು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಗ್ರಾಹಕರುಗಳ ಅನುಕೂಲಕ್ಕಾಗಿ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು.

ಈ ಕಾರ್ಯಕ್ರಮವನ್ನು ಆರ್.ಬಿ.ಐ ನ ಬ್ಯಾಂಕಿಂಗ್ ಲೋಕಪಾಲರ ಕಚೇರಿಯ ವ್ಯವಸ್ಥಾಪಕರು ನಡೆಸಿಕೊಟ್ಟರು. ಗ್ರಾಹಕರ ದೂರುಗಳ ಪರಿಹಾರ ಸಂಬಂಧ ಬ್ಯಾಂಕುಗಳಿಗೆ ಆರ್.ಬಿ.ಐ ನೀಡಿರುವ ಸೂಚನೆಗಳು ಮತ್ತು ತಮ್ಮ ದೂರುಗಳನ್ನು ಕಾಲ ಮಿತಿಯಲ್ಲಿ ಪರಿಹರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಭಿಕರಿಗೆ ಮಾಹಿತಿ ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕ್-ಏಕೀಕೃತ ಲೋಕಪಾಲ ಯೋಜನೆ 2021 ರ ಅಡಿಯಲ್ಲಿ ಇರುವ ಪರಿಹಾರ ವಿಧಾನಗಳ ಬಗ್ಗೆಯೂ ತಿಳಿಸಿಕೊಟ್ಟರು.

ಇದನ್ನೂ ಓದಿ: ಮತದಾರರ ಪಟ್ಟಿ ಪರೀಕ್ಷರಣೆ | ಐಹೊಳೆ, ರಾಮಥಾಳ ಗ್ರಾಮಕ್ಕೆ ಭೇಟಿ ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿದ ಡಿಸಿ ಜಾನಕಿ

ದೂರುಗಳನ್ನು ಆರ್.ಬಿ.ಐ.ನ CMS ಪೋರ್ಟಲ್ (https://cms.rbi.org.in) ಮತ್ತು ಯೋಜನೆಯ ಇತರ ಮಾಧ್ಯಮಗಳ ಮೂಲಕ ಹೇಗೆ ಸಲ್ಲಿಸಬೇಕು ಎಂಬುವುದರ ಬಗ್ಗೆಯೂ ಮಾಹಿತಿ ತಿಳಿಸಿದರು. ನಾನಾ ವಿಧದ ವಂಚನೆಗಳನ್ನು ತಡೆಯುವುದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬೆಗ್ಗೆಯೂ ವಿವರಣೆ ನೀಡಿದರು.

Bank Public Awareness Programme ಸುಮಾರು 250 ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಸಿದ್ದರು. ಹಾಗೂ ಪ್ರಶ್ನೋತ್ತರ ಅವಧಿಯನ್ನೂ ಸಹಾ ಏರ್ಪಡಿಸಲಾಗಿತ್ತು, ಸಭಿಕರ ಪ್ರಶ್ನೆಗಳಿಗೆ ಆರ್ ಬಿ ಐ ನ ಬ್ಯಾಂಕಿಂಗ್ ಲೋಕಪಾಲರ ಕಚೇರಿಯ ಅಧಿಕಾರಿಗಳು ಹಾಗೂ ಕೆನರಾ ಬ್ಯಾಂಕ್ ವತಿಯಿಂದ ಬಂದಂತಹ ಅಧಿಕಾರಿಗಳು ಉತ್ತರಿಸಿದರು. ರಿಸರ್ವ್ ಬ್ಯಾಂಕ್- ಏಕೀಕೃತ ಲೋಕಪಾಲ ಯೋಜನೆ 2021 ಗೆ ಸಂಬಂಧಿಸಿದ ಕರಪತ್ರ ಮತ್ತು ಕಿರು ಹೊತ್ತಿಗೆಗಳನ್ನು ಸಭಿಕರಿಗೆ ಹಂಚಲಾಯಿತು. ಭಾಗವಹಿಸಿದ ಎಲ್ಲರೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು.


LEAVE A REPLY

Please enter your comment!
Please enter your name here