ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಮೋದಿಜಿ : ರಮೇಶ ಜಿಗಜಿಣಗಿ

ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು.

0
52
Modi's birthday image

ವಿಜಯಪುರ: ನರೇಂದ್ರ ಮೋದಿಯವರು ಸ್ವಂತಕ್ಕಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಮಾದರಿ ಜೀವನ ನಡೆಸಿದವರು. ದೇಶದ ಅಭಿವೃದ್ಧೀಗಾಗಿ ಅವರು ಹಗಲಿರುಳಿ ಶ್ರಮಿಸಿದ್ದಾರೆ ಎಂದು ಲೋಕಸಭಾ ಸದಸ್ಯರಾದ ರಮೇಶ ಜಿಗಜಣಗಿ ಹೇಳಿದರು. ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಜೀ ಅವರ ಹುಟ್ಟುಹಬ್ಬದ Modi’s birthday ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ವಿಜಯಪುರ ನಗರದ ವಾರ್ಡ್ ನಂ. 6 ರಲ್ಲಿ ಆಲಕುಂಟೆ ರಾಜೇಂದ್ರ ನಗರದಲ್ಲಿ ಏರ್ಪಡಿಸಿದ ಶಶಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿವಿಧ ಸೇವಾ ಚಟುವಟಿಕೆಯಲ್ಲಿ ನಮ್ಮ ಕಾರ್ಯಕರ್ತರು ತೊಡಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ ಮುಂತಾದ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವುದು ಶ್ಲ್ಯಾಘನೀಯವೆಂದರು.

ಇದನ್ನೂ ಓದಿ: ಸ್ವಚ್ಛತಾ ಹೀ ಸೇವಾ ವಿಶೇಷ ಆಂದೋಲನಕ್ಕೆ ಚಾಲನೆ | ಪ್ರತಿಜ್ಞಾವಿಧಿ ಬೋಧನೆ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿ : ಸಂಸದ ಪಿ.ಸಿ.ಗದ್ದಿಗೌಡರ

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆರ್.ಎಸ್. ಪಾಟಿಲ ಕುಚಬಾಳ ಮಾತನಾಡಿ, ವಿಶ್ವಕರ್ಮ ಯೋಜನೆಯಡಿ ಇದೇ 20ರಂದು ದೇಶದ 20 ಲಕ್ಷ ವಿಶ್ವಕರ್ಮರಿಗೆ ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತದೆ. ಮಹಿಳೆಯರ ಘನತೆ ಹೆಚ್ಚಿಸಲು ಶೌಚಾಲಯ ನಿರ್ಮಾಣ, ಗ್ಯಾಸ್ ಸಿಲಿಂಡರ್Uರ್‍ಗÀಳನ್ನು ನೀಡಲಾಗಿದೆ. ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ, ಮಹಿಳೆಯರು, ಯುವಕರಿಗಾಗಿ ಅನೇಕ ಯೋಜನೆಗಳನ್ನು ಮೋದಿಜೀ Modi’s birthday ಅವರು ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟಿಲ ರೈತರು, ಮಹಿಳೆಯರು, ಯುವಕರು, ಬಡವರು ಎಂಬ ನಾಲ್ಕು ಜಾತಿಗಳು ಮಾತ್ರ ಈ ದೇಶದಲ್ಲಿದೆ ಎಂಬ ಸಂದೇಶ ಪ್ರಧಾನಿ ಅವರದು. ಅವರೊಬ್ಬ ವಿಶ್ವನಾಯಕ. ದೇಶದ ಘನತೆಯನ್ನು ಅವರು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ; ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ಬಿಜೆಪಿಯಿಂದ ವಿಶ್ವಕರ್ಮ ಜಯಂತಿ ಆಚರಣೆ ಸೃಷ್ಟಿ ನಿರ್ಮಾದ ಕತೃ, ಸಕಲಕರ್ಮಗಳ ಒಡೆಯನೇ ವಿಶ್ವಕರ್ಮ: ಡಾ.ವೀರಣ್ಣ ಚರಂತಿಮಠ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವುರ, ರ ನಗರ ಘಟಕದ ಅಧ್ಯಕ್ಷರಾದ ಶಂಕರ ಹೂಗಾರ, ಎ.ಎಸ್.ಎ. ಪಾಟೀಲ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಕಾಂತು ಸಿಂದೆ, ಮಹಾನಗರ ಪಾಲಿಕೆ ಸದಸ್ಯರಾದ ಎಮ್.ಎಸ್. ಕರಡಿ, ಪ್ರೇಮಾನಂದ ಬಿರಾದಾರ,, ಸಚೀನ ಕುಮಶಿ, ನಂದು ಬಡಗಿ, ಪಾಪುಸಿಂಗ ರಜಪೂತ, ಬಿಜೆಪಿ ಕರ್ನಾಟಕ ವಾರೀಶ ಕುಲಕರ್ಣಿ, ಪ್ರಕಾಶ ಬಾಗೇವಾಡಿ, ಉದಯ ಕನ್ನೋಳಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.


LEAVE A REPLY

Please enter your comment!
Please enter your name here