ವಿಜಯಪುರ: ವಿಜಯಪುರ ನಗರಕ್ಕೆ ಮಹಾಯೋಜನೆ ಅನುಸಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮಹಾನಗರ ಪಾಲಿಕೆಯ ವಾರ್ಡ ನಂ: 2, 4, 6 ಮತ್ತು 35, ರಲ್ಲಿ ಬರುವ ಅಥಣಿ ರಸ್ತೆ ಇಟಗಿ ಪೆಟ್ರೋಲ್ ಪಂಪ ಹಾಗೂ ವಿಜಯಪುರ ಸೊಲಾಪೂರ ರಸ್ತೆಯ ವರೆಗೆ ರಿಂಗ್ ರೋಡ ಮೇಲಿನ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಸೋಮವಾರ ಹಮ್ಮಿಕೊಳ್ಳಲಾಯಿತು.
ವಿಜಯಪುರ ನಗರದ ಮಹಾಯೋಜನೆಯ ಅನುಸಾರ ಅಭಿವೃದ್ಧಿ ಕೈಗೊಳ್ಳಲು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ: 2, 4, 6 ಮತ್ತು 35, ರಲ್ಲಿ ಬರುವ ಅಥಣಿ ರಸ್ತೆಯಿಂದ ಸೊಲಾಪೂರ ರಸ್ತೆಯ ಕಡೆಗೆ ಹೋಗುವ ರಿಂಗ್ ರಸ್ತೆಯ ಎರಡು ಬದಿಯಲ್ಲಿ(ದರ್ಗಾ ಟಕ್ಕೆ ವರೆಗೆ, ಎನ್.ಜಿ.ಓ ಕಾಲೋನಿ, ಹಳೆ ಪಂಡರಪುರ ರಸ್ತೆ,) ವರೆಗಿನ ರಸ್ತೆ ಮೇಲಿನ ಅತಿಕ್ರಮಣ ತೆರವುಗೊಳಿಸಿಕೊಳ್ಳುವಂತೆ ಈಗಾಗಲೇ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸೂಚಿಸಲಾಗಿತ್ತು.
ಇದನ್ನೂ ಓದಿ:ಉಜ್ವಲ್‌ಕುಮಾರ ಘೋಷ್:ಅರ್ಹರಿಗೆ ಸೌಲಭ್ಯ ದೊರಕಿಸಿ.
ನೋಟಿಸ್ ಅನುಸಾರ ಹಲವಾರು ಕಟ್ಟಡ ಮಾಲೀಕರುಗಳು ಸ್ವಯಂ ಪ್ರೇರಿತವಾಗಿ ಅತಿಕ್ರಮಣ ಮಾಡಿದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿಕೊಂಡಿದ್ದರು. ಇನ್ನೂ ಹಲವಾರು ಕಟ್ಟಡ ಮಾಲೀಕರುಗಳು ತೆರವುಗೊಳಿಸದೇ ಇರುವುದರಿಂದ, ವಾರ್ಡ ನಂ: 2, 4, 6 ಮತ್ತು 35, ರಲ್ಲಿ ಬರುವ ಅಥಣಿ ರಸ್ತೆಯಿಂದ ಸೊಲಾಪೂರ ರಸ್ತೆಯ ಕಡೆಗೆ ಹೋಗುವ ರಿಂಗ್‌ರಸ್ತೆಯ ಎರಡು ಬದಿಗಳಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ ಕಟ್ಟಡಗಳ ಭಾಗಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಾಲಿಕೆಯಿಂದ 3 ತಂಡಗಳನ್ನು ಮಾಡಿ ಅತಿಕ್ರಮಣ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.
ಇದನ್ನೂ ಓದಿ:ವಿಜಯಪುರ: ಐತಿಹಾಸಿಕ ತಾಜ್‌ಬಾವಡಿ ಸ್ಮಾರಕ ಸಂರಕ್ಷಣೆ
ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ನಗರಕ್ಕೆ ಸರ್ಕಾರದಿಂದ 2022ರಲ್ಲಿ ಮಹಾಯೋಜನೆ ಅನುಮೋದನೆಯಾಗಿದ್ದು ನಗರದಲ್ಲಿರುವ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಆಸ್ತಿಗಳ ಮಾಲೀಕರು ಆಯಾ ರಸ್ತೆಯ ಅಗಲೀಕರಣಕ್ಕೆ ಅನುಗುಣವಾಗಿ ರಸ್ತೆ ಅಂಚಿನಿಂದ ನಿಗದಿಪಡಿಸಿದ ಕಟ್ಟಡ ರೇಖೆಗಳನ್ನು ಅಳವಡಿಸಿಕೊಂಡೆ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಕಲಂ-15 ರಂತೆ ಮತ್ತು ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ ಕಾಯ್ದೆ 1976ರ ಕಲಂ-300 ರಂತೆ ಪರವಾನಿಗೆ ಪಡೆದುಕೊಂಡು ನಿಯಮಾನುಸಾರ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದ ಅವರು, ಮುಂಬರುವ ದಿನಗಳಲ್ಲಿ ಉಲ್ಲಂಘನೆ ಮಾಡಿ ಸಾರ್ವಜನಿಕ ಪ್ರದೇಶವನ್ನು ಒತ್ತುವರಿ ಮಾಡಿದ ಕಟ್ಟಡ/ಕಟ್ಟಡದ ಭಾಗವನ್ನು ಹಾಗೂ ಅಂಗಡಿಗಳನ್ನು ಗುರುತಿಸಿ ನಿಯಮಾನುಸಾರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿಜಯಪುರ ನಗರದ ಮಹಾಯೋಜನೆಯ ಅನುಸಾರ ಅಭಿವೃದ್ಧಿ ಕೈಗೊಳ್ಳಲು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ: 2, 4, 6 ಮತ್ತು 35, ರಲ್ಲಿ ಬರುವ ಅಥಣಿ ರಸ್ತೆಯಿಂದ ಸೊಲಾಪೂರ ರಸ್ತೆಯ ಕಡೆಗೆ ಹೋಗುವ ರಿಂಗ್ ರಸ್ತೆಯ ಎರಡು ಬದಿಯಲ್ಲಿ(ದರ್ಗಾ ಟಕ್ಕೆ ವರೆಗೆ, ಎನ್.ಜಿ.ಓ ಕಾಲೋನಿ, ಹಳೆ ಪಂಡರಪುರ ರಸ್ತೆ,) ವರೆಗಿನ ರಸ್ತೆ ಮೇಲಿನ ಅತಿಕ್ರಮಣ ತೆರವುಗೊಳಿಸಿಕೊಳ್ಳುವಂತೆ ಈಗಾಗಲೇ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸೂಚಿಸಲಾಗಿತ್ತು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲಿಕೆಯ ವಲಯ ಆಯುಕ್ತರುಗಳು, ಉಪಆಯುಕ್ತರು(ಅಭಿವೃದ್ದಿ) (ಪ್ರ), ಕಾರ್ಯಪಾಲಕ ಅಭಿಯಂತರರು, ಹಾಗೂ ಸಹಾಯಕ ನಗರ ಯೋಜನಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮತ್ತು ಪಾಲಿಕೆಯ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಾಚರಣೆಗೆ ಸಹಕಾರ ನೀಡಿದ ಹಾಗೂ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಪಾಲಿಕೆ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.