ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕೊರೋನಾ ಸೋಂಕಿತರಿಂದ ಮತದಾನ

0
59

ವಿಜಯಪುರ ಡಿ.23: ಜಿಲ್ಲೆಯಲ್ಲಿ ದಿನಾಂಕ: 22-12-2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ, ನಾಗಠಾಣದ ಉಪಕೇಂದ್ರ ಅಲಿಯಾಬಾದ ಗ್ರಾಮದ ಪಂಚಾಯತ ಸಾರ್ವತ್ರಿಕ ಚುನಾವಣೆಯಲ್ಲಿ ಕೋವಿಡ್-19 ರ ಎಲ್ಲ ಮುಂಜಾಗ್ರತ ಕ್ರಮಗಳೊಂದಿಗೆ ಸೋಂಕಿತ ಮೂರು ಜನರಿಗೆ ಮತ ಚಲಾಯಿಸುವಂತೆ ಮನವೊಲಿಸಲಾಯಿತು.

ಅವರು ಅಮೂಲ್ಯವಾದ ಮತವನ್ನು ಚಲಾಯಿಸಲು ತಹಶೀಲ್ದಾರರದಾ ಮೋಹನ್ ಕುಮಾರಿ ಅವರು ಪ್ರೇರೇಪಿಸಿ ಹಾಗೂ ಪಿ.ಪಿ ಕೀಟ್, ಮಾಸ್ಕ್ ಹಾಗೂ ಸೈನೀಟ್ಯಜರ್‍ಗಳನ್ನು ಉಪಯೋಗಿಸಿ, ಅಂಬುಲೈನ್ಸ್ ವಾಹನದೊಂದಿಗೆ ಮತಗಟ್ಟೆಯವರಿಗೆ ಕರೆದುಕೊಂಡು ಬಂದು ಮತವನ್ನು ಚಲಾಯಿಸುವಂತೆ ಮಾಡಲಾಯಿತು. ತದನಂತರ ಮತವನ್ನು ಚಲಾಯಿಸಿದ ಸ್ಥಳವನ್ನು ಸೈನೀಟ್ಯಜರ್ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಬಿ.ಎಸ್ ರಾಠೋಡ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಡಾ|| ಕವಿತಾ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಸಂತೋಷ ಶೆಟ್ಟಿ, ಶ್ರೀ ಎನ್.ಆರ್.ಬಾಗವಾನ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಿಜಯಪುರ, ಡಾ|| ಬಸವರಾಜ ಕುಂಬಾರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಮ್.ಎಲ್.ಎಚ್.ಪಿ ರವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here