ಕೊರೋನಾಗೆ ಎ.ಎಸ್.ಐ. ಬಲಿ

0
18

ಬೆಂಗಳೂರು ಜೂ.16: ಪೊಲೀಸರಿಗೂ ಕೊರೋನಾ ತಗುಲಿದ್ದು, ಬೆಂಗಳೂರುನಲ್ಲಿ ಎ.ಎಸ್.ಐ. ಒಬ್ಬರು ಬಲಿಯಾಗಿದ್ದಾರೆ. ಕೊರೋನಾ ಅಟ್ಟಹಾಸದಿಂದ ಪೊಲೀಸರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಅನಾರೋಗ್ಯದಿಂದ ಬಳಲುತಿದ್ದ ಕಾರಣ ರಜೆಯಲ್ಲಿದ್ದರು. ಸೋಕಿನಿಂದ ಮೃತಪಟ್ಟಿರುವುದು ದೃಢವಾಗಿದೆ.

ವಿ.ವಿ.ಪುರಂ ಸಂಚಾರಿ ಠಾಣೆ ಎ.ಎಸ್.ಐ. ಕೊರೋನಾದಿಂದ ಮೃತಪಟ್ಟಿದ್ದಾರೆ. ಡಯಾಬಿಟಿಸ್‍ನಿಂದ ಬಳಲುತ್ತಿದ್ದ ಇವರು ಕೆಲ ದಿನಗಳಿಂದ ಮನೆಯಲ್ಲೇ ಇದ್ದರು. ಬಳಿಕ ಜೂನ್ 13 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ಈ ಮೊದಲು ಕೊರೋನಾ ಟೆಸ್ಟ ಮಾಡಿಸಿಕೊಂಡಾಗ ನೆಗೆಟಿವ್ ವರದಿ ಬಂದಿತ್ತು. ಮೂರು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಎ.ಎಸ್.ಐ. ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದೀಗ ಕೊರೋನಾ ಸೋಂಕಿನಿಂದಲೇ ಎ.ಎಸ್.ಐ. ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಇದೇ ಠಾಣೆಯ ಇನೋರ್ವ ಎ.ಎಸ್.ಐ.ಗೂ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ.


 

LEAVE A REPLY

Please enter your comment!
Please enter your name here