ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಆಯೋಜಿಸಿದ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ನಂತರ ತಾಲೂಕಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಿಎಲ್‍ಡಿಇ ಸಂಸ್ಥೆಯ ಎಸ್.ಎಸ್. ಮಾಧ್ಯಮಿಕ ‘ಬ’ (s s college) ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವರಿಗೆ ಸಂಸ್ಥೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಸ್.ಎಸ್. ಆವರಣದ ಆಡಳಿತಾಧಿಕಾರಿಗಳಾದ ಆಯ್.ಎಸ್. ಕಾಳಪ್ಪನವರ ಹಾಗೂ ಶಾಲೆಯ ಮುಖ್ಯಗುರುಗಳಾದ ವಿ.ಬಿ. ಪಾಟೀಲ, ದೈಹಿಕ ಉಪನ್ಯಾಸಕರಾದ ಕೆ.ಬಿ. ಪಾಟೀಲ ಹಾಗೂ ಕಿಟ್ಟು ಬಿ. ಗಾಡಿವಡ್ಡರಮತ್ತು ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.



















