ರಸ್ತೆ ಸಮಸ್ಯೆಯಲ್ಲಿ ನರಳುವ ವಾಹನ ಸವಾರರು

ನಗರಗಳ ಅಭಿವೃದ್ಧಿ ಎಂದರೆ ಉತ್ತಮ ರಸ್ತೆ ವ್ಯವಸ್ಥೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಇಂದಿನ ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ರಸ್ತೆ ಗುಂಡಿಗಳು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿವೆ. ಮಳೆಗಾಲ ಬಂದಾಗ ಮಾತ್ರವಲ್ಲ, ವರ್ಷಪೂರ್ತಿಯೂ ಹಲವೆಡೆ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿರುವುದು ಕಂಡುಬರುತ್ತದೆ. ಈ ಸಮಸ್ಯೆ ಕೇವಲ ಅಸೌಕರ್ಯವಷ್ಟೇ ಅಲ್ಲ; ಅದು ಜನರ ಜೀವಕ್ಕೆ ನೇರ ಅಪಾಯವನ್ನು ಉಂಟುಮಾಡುವ ಗಂಭೀರ ವಿಷಯವಾಗಿದೆ. ಪ್ರತಿದಿನ ಸಾವಿರಾರು ವಾಹನ ಸವಾರರು ಈ ಗುಂಡಿಗಳ ನಡುವೆ ಸಂಚರಿಸುವಾಗ ಅಪಾಯದ ಅಂಚಿನಲ್ಲೇ ಸಾಗುತ್ತಿರುವುದು ವಿಷಾದನೀಯ […]
ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು

ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ – ನಟಿಯರು ಹೀರೋಗಳಲ್ಲ ಅವರು ಕೇವಲ ನಟರು ಮಾತ್ರ ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿಗಳಾದ ಬಸವರಾಜ ಹಂಚಲಿ ಮಾತನಾಡಿದರು. ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ […]
ಗುರುದೇವಿ ಹಳ್ಳೂರಗೆ ಪಿ.ಎಚ್.ಡಿ. ಪ್ರದಾನ

ವಿಜಯಪುರ: ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಗುರುದೇವಿ ಹಳ್ಳೂರಗೆ (ನಂದಿನಿ ಮ. ಬಿರಾದಾರ) ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ “ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿಂಗ್ ಸ್ಟೈಲ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ನ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ” ಎಂಬ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ. ಇವರಿಗೆ ಮೌಲ್ಯಮಾಪನ ಕುಲ ಸಚಿವ ಹಾಗೂ ಶಿಕ್ಷಣ ಶಾಸ್ತ್ರ […]
ಕೊಳಗೇರಿ ಮಂಡಳಿ ಎಇಇ ಅಧಿಕಾರಿಯ ಬೇಜವಾಬ್ದಾರಿ

ವಿಜಯಪುರ: ನಗರದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶಿವಾನಂದ ರಾಠೋಡ್ ಅವರಿಗೆ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳ ಪಟ್ಟಿ ಸಲ್ಲಿಸಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹೇಳಿದರು. ಸಮಸ್ಯೆಗಳು ಕೇಳಲು ತಿಂಗಳಿಗಿಂತಲೂ ಹೆಚ್ಚಿನ ಅವಧಿ ಬೇಕು ಮತ್ತು ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆಗಳೆಲ್ಲವೂ ಆಲಿಸಿದ್ದೇನೆ, ಎಲ್ಲವೂ ಸುಸೂತ್ರ ವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ರವಾನಿಸುತಿದ್ದಾರೆ.ಯಾವ ಕೊಳಚೆ ಪ್ರದೇಶಗಳಿಗೂ ಬೇಟೆ ಕೊಟ್ಟು ವಾಸ್ತವ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಲಭ್ಯವಿರುವುದಿಲ್ಲ. ನಾನು ಕೂಡ […]
ವಿಜಯಪುರದಲ್ಲಿ ಏಪ್ರಿಲ್ ನಿಂದ ಭಾರತ ಜನಗಣತಿ-2027 (Census) ಆರಂಭ

ವಿಜಯಪುರ: ನಮ್ಮ ಜನಗಣತಿ, ನಮ್ಮ ಭವಿಷ್ಯ ಧ್ಯೇಯ ವಾಕ್ಯದಡಿ ಭಾರತ ಜನಗಣತಿ-2027ರ ಮೊದಲ ಹಂತದ ಜನಗಣತಿಯನ್ನು ಏಪ್ರಿಲ್ ನಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ. ಮೊದಲ ಹಂತ -1 ಮನೆಪಟ್ಟಿ ಮತ್ತು ಮನೆ ಗಣತಿ (ಎಚ್‍ಎಲ್‍ಒ) ಏಪ್ರಿಲ್ 1ರಿಂದ 15ರವರೆಗೆ ಇದೇ ಮೊದಲ ಬಾರಿಗೆ ಸ್ವಯಂ ಗಣತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸ್ವಯಂ ಗಣತಿ ಐಚ್ಛಿಕವಾಗಿರುತ್ತದೆ. ಕುಟುಂಬಗಳು ಮಾತ್ರ ಸ್ವಯಂ ಗಣತಿ ಮಾಡಬಹುದಾಗಿದೆ ಎಂದವರು ತಿಳಿಸಿದ್ದಾರೆ. […]
ಜನಗಣತಿಗೆ (Census) ನಿಯೋಜಿಸಿದ ಸಿಬ್ಬಂದಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಿ

ವಿಜಯಪುರ: ಜಿಲ್ಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ (Census) 2027ರ ಕಾರ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ 2027ರ ಜನಗಣತಿ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನೆ ಪಡೆದುಕೊಂಡು ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. […]
“ರಂಜಾನ್: ತ್ಯಾಗ, ತಪಸ್ಸು ಮತ್ತು ಮಾನವೀಯತೆಯ ಬೆಳಕಿನ ಹಬ್ಬ”
ಇಸ್ಲಾಮ ಧರ್ಮದಲ್ಲಿ ಅತ್ಯಂತ ಪವಿತ್ರವಾಗಿಯೂ ಮಹತ್ವಪೂರ್ಣವಾಗಿಯೂ ಪರಿಗಣಿಸಲ್ಪಡುವ ಹಬ್ಬವೇ ಖಚಿmಚಿಜಚಿಟಿ ರಂಜಾನ್. ಈ ಪವಿತ್ರ ಮಾಸವು ಕೇವಲ ಉಪವಾಸದ ಆಚರಣೆಗೆ ಸೀಮಿತವಾಗಿಲ್ಲ; ಅದು ಆತ್ಮಶುದ್ಧಿ, ಆತ್ಮಪರಿಶೀಲನೆ ಮತ್ತು ಮಾನವೀಯ ಮೌಲ್ಯಗಳ ಅರಿವಿಗೆ ದಾರಿ ಮಾಡಿಕೊಡುವ ಮಹತ್ವದ ಕಾಲವಾಗಿದೆ. ಪ್ರಪಂಚದಾದ್ಯಂತ ಇರುವ ಮುಸ್ಲಿಂ ಸಮುದಾಯ ಈ ಮಾಸವನ್ನು ಭಕ್ತಿ, ನಿಯಮ ಮತ್ತು ಶಿಸ್ತುಗಳಿಂದ ಆಚರಿಸುತ್ತಾರೆ. ಬೆಳಿಗ್ಗೆ ಸೂರ್ಯೋದಯದ ಮೊದಲು ‘ಸಹರಿ’ ಸೇವಿಸಿ, ಸೂರ್ಯಾಸ್ತದ ನಂತರ ‘ಇಫ್ತಾರ್’ ಮೂಲಕ ಉಪವಾಸ ಮುರಿಯುವುದು ಈ ಮಾಸದ ಪ್ರಮುಖ ಆಚರಣೆಗಳಾಗಿವೆ. ರಂಜಾನ್ ಉಪವಾಸದ […]
Operation Sindoor : ಆಪರೇಶನ್ ಸಿಂಧೂರ: ಭಯೋತ್ಪಾದಕ ದಾಳಿಯ ಪ್ರತಿಕಾರ

Operation Sindoor : ಆಪರೇಶನ್ ಸಿಂಧೂರ: ಭಯೋತ್ಪಾದಕ ದಾಳಿಯ ಪ್ರತಿಕಾರ ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಜನತೆಯ ಹೃದಯವನ್ನು ಗಾಯಗೊಳಿಸಿತು. 26 ಜನರನ್ನು ಕೊಂದ ಈ ದಾಳಿಯು ಕೇವಲ ಸಂಖ್ಯಾಶಾಸ್ತ್ರವಲ್ಲ, ಬದಲಿಗೆ ಅನೇಕ ಕುಟುಂಬಗಳ ಜೀವನವನ್ನು ಒಡದುಗಿತ್ತು. ಈ ದಾಳಿಯ ಗಾಯವು ಇಡೀ ರಾಷ್ಟ್ರವನ್ನು ಕಾಡಿತು, ಮತ್ತು ಈ ದುರಂತದ ನಂತರ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ ‘ಆಪರೇಶನ್ ಸಿಂಧೂರ’ Operation Sindoor ಭಾರತದ ಸಂಕಲ್ಪ […]
Belagavi News : ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಸಂವಿಧಾನ ಜಾರಿಯಾಗಿ 75 ವರ್ಷ ಆಯ್ತು. 75 ವರ್ಷಗಳಲ್ಲಿ ಬಡವರು ಬಡವರಾಗಿಯೇ ಉಳಿಯಬೇಕಾ..? ಎಲ್ಲರಿಗೂ ಸಮಾನತೆ ಬರಬೇಕು. ಇನ್ನೂ ಜಾತಿಗೆ ಅಂಟಿಕೊಂಡೇ ಇರಬೇಕಾ.? ಮುಸ್ಲಿಂರು, ಹಿಂದುಳಿದವರು ಸೇರಿ ಎಲ್ಲ ಜಾತಿಯವರಿಗೆ ಶಿಕ್ಷಣ ಸಿಗಬೇಕಾ ಬೇಡವಾ..? ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕೋ ಬೇಡವೋ ಎಂದು ಪ್ರಶ್ನಿಸುವ ಮೂಲಕ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ siddaramaiah ಸಮರ್ಥಿಸಿಕೊಂಡರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಜಾತಿಗೂ ಅನ್ಯಾಯ ಆಗಬಾರದು […]
Vijayapura News : ಕಸಾಪದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಚಿಂತನಾ ಗೋಷ್ಠಿ | ಭಾರತ ದೇಶದ ಹಣೆಬರಹ ಬರೆದ ಡಾ. ಬಿ.ಆರ್.ಅಂಬೇಡ್ಕರ್ – ಮಹೇಶ್ ಕ್ಯಾತನ್ ಅಭಿಪ್ರಾಯ

ವಿಜಯಪುರ : ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರು ದೇಶದ ಹಣೆಬರಹ ಬರೆದು ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಮೂಲಕ ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿಗಳಾಗಿದ್ದರು ಎಂದು ಅಂಬೇಡ್ಕರ್ ಚಿಂತನಾ ಗೋಷ್ಠಿ ಯಲ್ಲಿ ವಿಶ್ರಾಂತ ಅರಣ್ಯಾಧಿಕಾರಿ ಮಹೇಶ ಕ್ಯಾತನ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಡಾ. ಬಿ.ಆರ್ ಅಂಬೇಡ್ಕರ್ ಚಿಂತನಾಗೋಷ್ಠಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ […]