ತಾಳಿಕೋಟಿ: Protest in Talikote ಮಹಾಶಿವಶರಣೆ ಸಮಗಾರ ಹರಳಯ್ಯ ಸಮಾಜ ವತಿಯಿಂದ ಅಸ್ಪೃಶ್ಯ ಕೋಮಿಗೆ ಸೇರಿದ (ಪರಿಶಿಷ್ಟ ಜಾತಿ) ಸಮಗಾರ ಹರಳಯ್ಯ ಸಮಾಜದ ದಲಿತರ ಮೇಲೆ ದೌರ್ಜನ್ಯ ವೇಸಗಿರುವ ಕಾರಣ 23 ಕುಟುಂಬಗಳು ಬೀದಿಗೆ ಬಿದ್ದಿರುತ್ತವೆ. ಮತ್ತು ತಾಳಿಕೋಟಿ ಬಸ್ ಕಂಪೌಂಡಗೆ ಹೊಂದಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸದಂತೆ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಆದೇಶವಿದ್ದರು ಲಿಡ್ಕರ ಅಂಗಡಿಗಳನ್ನು ಕೆಡವಿ ನ್ಯಾಯಾಲಯ ಆದೇಶದ ಉಲ್ಲಂಘನೆ ಮಾಡಿರುತ್ತಾರೆ ಹಾಗೂ ಇದು ಕಾನೂನಿನ ನಿಂದನೆ ಆಗಿರುತ್ತದೆ. ಮಾನ್ಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಈವರೆಗೂ ಸ್ಪಂದಿಸದೇ ಇರುವ ಕಾರಣ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿರುವದು.
ಇದನ್ನೂ ಓದಿ: Vijayapura News | ಎಬಿವಿಪಿಯಿಂದ ಖಾಲಿ ಕುರ್ಚಿಗೆ ಮನವಿ
ಸಮಾಜ ಮುಖಂಡರಾದ ರಾಘವೇಂದ್ರ ವಿಜಾಪೂರ ಮಾತನಾಡಿ ಅಂಗಡಿಗಳನ್ನು ದುರುದ್ದೇಶಪೂರ್ವಕವಾಗಿ, ನ್ಯಾಯಾಲಯದ ತಡೆಯಾಜ್ಞೆ ಇದ್ದರು ಕೂಡಾ ಲಿಡ್ಕರ ಅಂಗಡಿಗಳನ್ನು ಕೆಡವಿ ನಾಶಪಡಿಸಿರುತ್ತಾರೆ. ಹಾಗೂ ದಿನಾಂಕ:13.11.2024 ರಿಂದ ಅನ್ಯಾಯವಾದ ಸ್ಥಳದಲ್ಲಿ ಅಹೋ ರಾತ್ರಿ ಪ್ರತಿಭಟನಾ ಹಮ್ಮಿಕೊಂಡಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ. ಉಲ್ಲೇಖ 2) ಮತ್ತು (7) ರ ಪ್ರಕಾರ ಮಾನ್ಯ ಅಪ್ಪಾಜಿ ನಾಡಗೌಡ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಇವರಿಗೆ ಪತ್ರದ ಮೂಲಕ ಖುದ್ದಾಗಿ ಮನವಿ ಪತ್ರ ನೀಡಿ ವಿನಂತಿಪೂರ್ವಕವಾಗಿ ಮನವಿ ಮಾಡಲಾಗಿಯೂ ಕೂಡಾ ಈವರೆಗೂ ಯಾವುದೇ ಶಾಶ್ವತ ಪರಿಹಾರ ನೀಡಿರುವುದಿಲ್ಲ ಹಾಗೂ ಸದರಿ ಅಹೋ ರಾತ್ರಿ ಪ್ರತಿಭಟನಾ ಸ್ಥಳಕ್ಕೆ Protest in Talikote ಭೇಟಿ ನೀಡಿ ಸ್ಪಂದನೆಯನ್ನು ಮಾಡದೇ ಇರುವುದು ಮತ್ತು ನಮ್ಮ ನೋವಿಗೆ ಕಿವಿಗೊಡದೇ ಇರುವುದು ಅಸ್ಪಶ್ಯ ಕೋಮಿಗೆ ಸೇರಿದ ನಾವು ಸಮಗಾರ (ಚಮ್ಮಾರ) ಸಮುದಾಯದಲ್ಲಿ ಜನಿಸಿರುವುದೇ ತಪ್ಪಾ ಅನ್ನೋ ಭಾವನೆ ಮೂಡುತ್ತಿದೆ.
ಇದನ್ನೂ ಓದಿ: Vijayapura News | ಮಾದಕ ವಸ್ತುಗಳ ಮಾರಾಟ ಜಾಲವನ್ನು ತಕ್ಷಣವೇ ಬಂಧಿಸಿ | ವಿಜಯಕುಮಾರ ಕುಡುಗಿನೂರ
ಅದರಂತೆ ಕಳೆದ 23 ದಿನಗಳಿಂದ ನಮ್ಮ ಕುಟುಂಬಗಳ ಉಪಜೀವನಕ್ಕೆ ಯಾವುದೇ ಕೆಲಸವಿಲ್ಲದೇ ಕುಟುಂಬದ ಅವಲಂಬಿತರು ಒಂದು ಹೊತ್ತಿನ ಊಟಕ್ಕೆ ಪರಿತಪ್ಪಿಸುವಂತಾಗಿ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿಗೆ ತಲುಪಿದ್ದೇವೆ. ಹಾಗೂ ನಮ್ಮ ಮಕ್ಕಳ ವಿದ್ಯಾಭ್ಯಾಸ ಶಾಲೆ ಫೀ, ಟ್ಯೂಷನ್ ಫೀ ಹೇಗೆ ಭರಿಸಬೇಕೆಂಬುದು ದಿಕ್ಕೂತೊಚದ ಹಾಗೆ ಆಗಿದೇ ಎಂದರು.
ಇದನ್ನೂ ಓದಿ: Vijayapura News | 172 ರೌಡಿ ಶೀಟರ್‌ಗಳ ವಿರುದ್ಧ ಕಾರ್ಯಾಚರಣೆ | SP ಲಕ್ಷ್ಮಣ ನಿಂಬರಗಿ
ಈ ಸಂದರ್ಭದಲ್ಲಿ ಗೋಪಾಲ್. ಬ. ವಿಜಾಪುರ, ಮದೆರಪ್ಪ.ಪಿ.ವಿಜಾಪುರ, ಜಗದೀಶ್.ಲ.ವಿಜಾಪುರ, ಬಸವರಾಜ. ಮ. ವಿಜಾಪುರ,
ಚಂದ್ರಶೇಖರ್.ದು.ವಿಜಾಪುರ, ಬಸವರಾಜ.ಯ.ವಿಜಾಪುರ, ಕಾಶಿನಾಥ್.ಯ.ಮಬ್ರುಮಕರ್, ನಾಗರಾಜ್.ದು.ವಿಜಾಪುರ, ಲಕ್ಷಣ.ಮು.ವಿಜಾಪುರ, ದುಂಡಪ್ಪ.ಕ.ಇಳಕಲ್ಲ, ಯಲ್ಲಪ್ಪ.ರಾ.ಇಳಕಲ್ಲ, ಬಾಬು.ಯ.ಮಬ್ರುಮಕರ್, ರಾಮಕೃಷ್ಣ.ದೆ.ವಿಜಾಪುರ, ಗಣೇಶ್.ಅಗರವಾಲ್, ಪ್ರಸನ್ನ.ಮಬ್ರುಮಕರ್, ಕುಮಾರ್.ಮಬ್ರುಮಕರ್, ಕೃಷ್ಣ.ಮಬ್ರುಮಕರ್, ಕುಮಾರ್. ಮಬ್ರುಮಕರ್, ಚೇತನ್. ಬ.ವಿಜಾಪುರ, ಆಕಾಶ್.ಶ್ರೀ.ವಿಜಾಪುರ, ಆಕಾಶ್.ಯ.ಮಬ್ರುಮಕರ್, ಪದ್ಮಾವತಿ. ರು.ಮಬ್ರುಮಕರ, ಸರೋಜವ್ವ .ವಿಜಾಪುರ, ನೀಲವ್ವ.ಪೀ.ವಿಜಾಪುರ ಉಪಸ್ಥಿತಿ ಇದ್ದರು.


















