Vijayapura News : ಶಿವಯೋಗಿ ಸಿದ್ದರಾಮೇಶ್ವರರು ಬಹುಮುಖಿ ಚಿಂತನಶೀಲರು-ಡಾ. ಮಲ್ಲಿಕಾರ್ಜುನ ಮೇತ್ರಿ

ಜಲವಿಲ್ಲದೆ ಜೀವವಿಲ್ಲ ಎಂದು ಕೆರೆಯ ನಿರ್ಮಾಣವನ್ನು ಮಾಡಿದ ಶರಣರು. ಬಸವಣ್ಣನವರ ನಂತರ ಹೆಚ್ಚು ಜನಪ್ರಿಯ ವ್ಯಕ್ತಿಗಳಾಗಿದ್ದ ಸಿದ್ದರಾಮೇಶ್ವರರ ಕುರಿತು ವಿಶೇಷವಾದ ಅಧ್ಯಯನಗಳು ನಡೆಯಬೇಕಾದ ಜರೂರುತೆ ಇದೆ ಎಂದು ತಿಳಿಸಿದರು. ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ

0
46

ವಿಜಯಪುರ: ಬಸವಾದಿ ಶರಣರಲ್ಲಿ ಶಿವಯೋಗಿ ಸಿದ್ದರಾಮೇಶ್ವರರಿಗೆ ವಿಶೇಷವಾದ ಸ್ಥಾನವಿದೆ. Shivayogi Siddaramaeshwar ಬಾಲಯೋಗಿ, ಕರ್ಮಯೋಗಿ, ಜ್ಞಾನಯೋಗಿ ಹಾಗೂ ಶಿವಯೋಗಿ ನೆಲೆಯಲ್ಲಿ ಶ್ರೇಷ್ಠತೆಯನ್ನು ಮೆರೆದು ಬಹುಮುಖಿ ಚಿಂತನೆಯನ್ನು ಸಾಧಿಸಿದ ಶರಣರು ಶಿವಯೋಗಿ ಸಿದ್ದರಾಮೇಶ್ವರರು ಎಂದು ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಇಂದಿಲ್ಲಿ ಅಭಿಪ್ರಾಯಪಟ್ಟರು.

ಅವರು ನಗರದ ಆಶ್ರಮ ರಸ್ತೆಯಲ್ಲಿರುವ ನೀಲಾನಗರದ ಶಿವಾಲಯ ದಲ್ಲಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಶಿವಯೋಗಿ ಸಿದ್ದರಾಮರು ಸೊಲ್ಲಾಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮುಂತಾದ ಕ್ಷೇತ್ರಗಳಲ್ಲಿ ಶ್ರೇಷ್ಠ ಕಾರ್ಯಗಳನ್ನು ಮಾಡಿದರು. ಜಲವಿಲ್ಲದೆ ಜೀವವಿಲ್ಲ ಎಂದು ಕೆರೆಯ ನಿರ್ಮಾಣವನ್ನು ಮಾಡಿದ ಶರಣರು. ಬಸವಣ್ಣನವರ ನಂತರ ಹೆಚ್ಚು ಜನಪ್ರಿಯ ವ್ಯಕ್ತಿಗಳಾಗಿದ್ದ ಸಿದ್ದರಾಮೇಶ್ವರರ ಕುರಿತು ವಿಶೇಷವಾದ ಅಧ್ಯಯನಗಳು ನಡೆಯಬೇಕಾದ ಜರೂರುತೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: “ಬಸನಗೌಡ ಪಾಟೀಲ ಯತ್ನಾಳರ ಉಚ್ಛಾಟನೆ: ಕರ್ನಾಟಕ ರಾಜಕೀಯದಲ್ಲಿ ಹೊಸ ತಿರುವು”

Shivayogi Siddaramaeshwar ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಜ್ಞಾನಯೋಗಾಶ್ರಮದ ವಿದ್ಯಾನಂದ ಮಹಾಸ್ವಾಮಿಗಳು ಸಿದ್ದರಾಮರು ತಮ್ಮ ವಚನಗಳ ಮೂಲಕ ಶ್ರೇಷ್ಠತೆ ಸಾಧಿಸಿದ್ದಾರೆ. ಸಮಾಜ ಪರ ಚಿಂತನೆ ಅವರ ವಚನಗಳಲ್ಲಿದೆ ಎಂದು ಹೇಳಿದರು .
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯರಾದ ಎಂ ಎಸ್ ಕರಡಿ ಅವರು ಇಂಥ ಕಾರ್ಯಕ್ರಮಗಳು ನಮ್ಮ ಆಧ್ಯಾತ್ಮ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಲಯ ದೇವಸ್ಥಾನದ ಅಧ್ಯಕ್ಷರಾದ ಬಸವರಾಜ ಎನ್ ಕೋರಿ ವಹಿಸಿದ್ದರು.

ಸರಳ ಹಾಗೂ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ರಶ್ಮಿ ಬಸವರಾಜ ಕೋರಿ, ನಮ್ರತಾ ಜಿರ್ಲಿ, ಮಂಜುಳಾ ಪಾಟೀಲ,ರಶ್ಮಿ ಅನಂತಪುರ ಹಾಗೂ ಲಕ್ಷ್ಮೀ ಜೇಳಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂದೀಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಜುಗೌಡ ಪಾಟೀಲ ಹಾಗೂ ಪಾಯಣ್ಣ ಪಡಸಲಗಿ ಅವರು ಭಕ್ತಿ ಸೇವೆಯನ್ನು ಸಮರ್ಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸುನಿತಾ ಬಿರಾದಾರ ಪ್ರಾರ್ಥನೆ ಗೀತೆ ಹಾಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಬಸನಗೌಡ ಪಾಟೀಲ ಯತ್ನಾಳ ಖಂಡನೆ

ಪ್ರೋ. ಎಂ ಓ ಶಿರೂರ ಕಾರ್ಯಕ್ರಮ ನಿರೂಪಿಸಿದರು. ವಿಶ್ರಾಂತ ಅಭಿಯಂತರಾದ ಎಸ್.ಎಸ್ ತೊದಲಬಾಗಿ, ಗಿರೀಶ್ ಅನಂತಪುರ, ರವೀಂದ್ರ ಕರಭಂಟನಾಳ, ಜಯಪ್ರಕಾಶ್ ಅಂಬಲಿ ಮಾರುತಿ ದೇವಸ್ಥಾನದ ಅಧ್ಯಕ್ಷರಾದ ಬಿ.ಎನ್. ಬಿರಾದಾರ್ ,ನಾನಾಗೌಡಪಾಟೀಲ್, ಎಂ .ಕೆ. ಬಿಸನಾಳ ಎಂ ಆರ್ ಬಡಿಗೇರ್, ಈರಣ್ಣ ಹುಂಡೇಕಾರ, ಜಿ .ಡಿ. ಬಾಗೇವಾಡಿ, ಅಶೋಕ್ ಬನ್ನಟ್ಟಿ, ಹರ್ಷ ಬರಟಿಗಿ, ಶ್ರೀಶೈಲ ಬೆಲ್ಲದ, ಬಸವರಾಜ ಕಣಬೂರ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


LEAVE A REPLY

Please enter your comment!
Please enter your name here