ವಿಜಯಪುರ: 12ನೇ ಶತಮಾನದ ಶಿವಶರಣರ ವಚನಸಾಹಿತ್ಯ 16-17ನೇ ಶತಮಾನದ ದಾಸಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯ ಸುವರ್ಣ ಯುಗ. ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದ ಸಂದರ್ಭದಲ್ಲಿ ಕನಕದಾಸರಂತಹ Kanakadasa Jayanti ಸಂತರು ಹುಟ್ಟಿಬಂದು ಅವರಲ್ಲಿ ವೈಚಾರಿಕ ಜಾಗೃತಿಯನ್ನು ಉಂಟು ಮಾಡಿದರು. ತೀರ ಸಾಮಾನ್ಯ ಸಂಗತಿಗಳನ್ನು ಆಧ್ಯಾತ್ಮಿಕ ಪರಿಭಾಷೆಯಾಗಿ ಪರಿವರ್ತಿಸುವ ಮೂಲಕ ಜನಭಾಷೆ ಮತ್ತು ಸಂಸ್ಕøತಿಗೆ ಒಂದು ಮಹತ್ವವನ್ನು ಕನಕದಾಸರು ತಂದುಕೊಟ್ಟರು ಎಂದು ಪ್ರಾಚಾರ್ಯ ಡಾ. ಜಿ ಡಿ ಅಕಮಂಚಿ ಹೇಳಿದರು.
ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯೋತ್ಸವ-2024 ಸಮಾರೋಪ ಸಮಾರಂಭ | ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ
ನಗರದ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಎಸ್ ಎಸ್ ಪದವಿ ಪೂರ್ವ ಕಾಲೇಜು ಹಾಗೂ ಎಸ್ ಎಸ್ ಮಾಧ್ಯಮಿಕ ವಿಭಾಗ”ಅ” ಇವರ ಸಂಯುಕ್ತಾಶ್ರಯದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು Kanakadasa Jayanti ಆಚರಿಸಲಾಯಿತು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದವರು.
ಉಪ ಪ್ರಾಚಾರ್ಯ ಶ್ರೀಮತಿ ಕೆ ಬಿ ಪಾಟೀಲ ಮಾತನಾಡಿ ನಾವು ಕನಕದಾಸರ ಕೀರ್ತನಗಳ ಅಧ್ಯಯನ ಮಾಡಿ ಅದರ ಸಾರಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಹೇಳಿದರು.
ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್
ಕನಕದಾಸರ ಜಯಂತಿ ನಿಮಿತವಾಗಿ ಮಾಧ್ಯಮಿಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಷಣ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ಕೆ ವಿ ಒಡೆಯರ ನಿರೂಪಿಸಿದರು ಉಪನ್ಯಾಸಕ ಅಮರೇಶ ಸಾಲಕ್ಕಿ ಸ್ವಾಗತಿಸಿದರು ಶಿಕ್ಷಕ ಡಿ ಕೆ ರಾಠೋಡ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



















