Vijayapura News | ಉಚ್ಛ ನ್ಯಾಯಾಲಯಕ್ಕೆ ಸುಳ್ಳು ಅಫಿಡೆವಿಟ್ ಸಲ್ಲಿಸಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು – ಜೈಲಿಗಟ್ಟಲು ಅರವಿಂದ ಕುಲಕರ್ಣಿ ಆಗ್ರಹ

K.B.J.N.L - ಉಚ್ಛ ನ್ಯಾಯಾಲಯಕ್ಕೆ ಸುಳ್ಳು ಅಫಿಡೆವಿಟ್ ಸಲ್ಲಿಸಿದ ಕೆಬಿಜೆಎನ್‍ಎಲ್ ಅಧಿಕಾರಿಗಳನ್ನು ನ್ಯಾಯಾಂಗ ನಿಂದನೆಯಡಿ ಜೈಲಿಗೆ ಹಾಕುವಂತೆ ಆಗ್ರಹಿಸಿದರು.

0
45

ವಿಜಯಪುರ: ಉಚ್ಛ ನ್ಯಾಯಾಲಯಕ್ಕೆ ಸುಳ್ಳು ಅಫಿಡೆವಿಟ್ ಸಲ್ಲಿಸಿದ K.B.J.N.L ಅಧಿಕಾರಿಗಳನ್ನು ನ್ಯಾಯಾಂಗ ನಿಂದನೆಯಡಿ ಜೈಲಿಗೆ ಹಾಕುವಂತೆ ಮತ್ತು ಸೇವೆಯಿಂದ ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣ  ಭಾಗ್ಯ ಜಲನಿಗಮದ ವ್ಯಾವಸ್ಥಾಪಕ ನಿರ್ದೇಶಕರ ಕಚೇರಿ ಅಗಷ್ಟ 19, 1994ರಲ್ಲಿಯೆ ಆಲಮಟ್ಟಿಯಲ್ಲಿ ಸ್ಥಾಪನೆಗೊಂಡಿದೆ. ಆದರೆ 1996ರಲ್ಲಿಯೆ ಕೃಷ್ಣ ಬಾಂಡ್ ನೆಪದಲ್ಲಿ ಆಲಮಟ್ಟಿಯಿಂದ ಮತ್ತೆ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅಲ್ಲಿಂದ ಇಲ್ಲಿಯವರೆಗೂ ಹಿಂದಿರುಗಿ ಆಲಮಟ್ಟಿಗೆ ಸ್ಥಳಾಂತರಗೊಂಡಿಲ್ಲ. 2019ರಲ್ಲಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 12 ವಿವಿಧ ಇಲಾಖೆಗಳನ್ನು ಸ್ಥಳಾಂತರಿಸಲು ಆದೇಶ ನೀಡಿದ್ದರು.

ಇದನ್ನೂ ಓದಿ: Vijayapura News | ಡಾ. ಅಣ್ಣಾಬಾವು ಸಾಠೆಯವರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ

ಅದರಲ್ಲಿ ಮುಖ್ಯವಾಗಿ ಆಲಮಟ್ಟಿಯ ಕೆ.ಬಿ.ಜೆ.ಎನ್.ಎಲ್ ಎಂ.ಡಿ ಕಚೇರಿಗೆ ಸಂಬಂಧಿಸಿದ ವ್ಯವಸ್ಥಾಪಕ ನಿರ್ದೇಶಕರು, ಆರ್ಥಿಕ ಇಲಾಖೆ ಹಾಗೂ ತಾಂತ್ರಿಕ ಇಲಾಖೆ ಸೇರಿ ಪೂರ್ಣ ಪ್ರಮಾಣದ ಸಿಬ್ಬಂದಿಗಳನ್ನು ಆಲಮಟ್ಟಿಗೆ ಸ್ಥಳಾಂತರಿಸಬೇಕೆಂದು ಹಾಗೂ ಎಂ.ಡಿ ಯವರು ಕೂಡಾ ಆಲಮಟ್ಟಿಯಲ್ಲಿಯೇ ವಾಸ್ತವ್ಯವಿದ್ದು ಕಾರ್ಯನಿರ್ವಹಿಸಬೇಕೆಂದು ಆದೇಶ ನೀಡಿದ್ದರು. ಎಂ.ಡಿ ಯವರು ವಾಸವಿರುವ ಸಲುವಾಗಿ ಸುಸಜ್ಜಿತ ಮನೆ ನಿರ್ಮಿಸಲಾಯಿತು. ಪ್ರತಿ ವರ್ಷ ಅದರ ನಿರ್ವಹಣೆ ಹಾಗೂ ಎಂ.ಡಿ ಕಚೇರಿಯ ಕಟ್ಟಡ ನಿರ್ವಹಣೆಗೆ ಅಂದಾಜು 1 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಆದರೂ ಎಂ.ಡಿ ಹಾಗೂ ಕಚೇರಿ ಸಿಬ್ಬಂದಿಗಳು ಕಚೇರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು ಇನ್ನು ಆಲಮಟ್ಟಿಗೆ ಸ್ಥಳಾಂತರಗೊಂಡಿಲ್ಲ.

2022 ಮೇ 12ರಂದು ಆಗಿನ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಮಂಜುನಾಥರವರು ನೋಟಿಸ್ ಕೂಡಾ ಕೊಟ್ಟಿದ್ದಾರೆ. ಅದು ಅಲ್ಲದೆ ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್ ಇವರು ಕೂಡಾ ನೋಟಿಸ್ ಕೊಟ್ಟಿದ್ದರು. ಈ ಇಬ್ಬರು ಅಧಿಕಾರಿಗಳು ನೀಡಿದ ನೋಟಿಸ್‍ಕ್ಕೂ ಮನ್ನಣೆ ನೀಡಲಿಲ್ಲ. ನಂತರ ಈ ವಿಷಯ ನ್ಯಾಯಾಲಯದ ಮೇಟ್ಟಿಲೇರಿ ಆದೇಶವಾದರೂ ಕೂಡಾ ನ್ಯಾಯಾಲಯದ ಆದೇಶಕ್ಕೆ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡದೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ. ಆದೇಶವನ್ನು ಪಾಲಿಸದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಕರ್ನಾಟಕದ ಪರಂಪರೆ ಮತ್ತು ಏಕತೆ ಆಚರಣೆ

ಈ ವ್ಯವಸ್ಥೆ ನೋಡಿದರೆ ಸರ್ಕಾರವನ್ನೆ ಐ.ಎ.ಎಸ್ ಅಧಿಕಾರಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ನ್ಯಾಯಾಲಯದ ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಐ.ಎ.ಎಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ತನ್ನ ಹೇಡಿತನ ಪ್ರದರ್ಶನ ಮಾಡುತ್ತಿದೆ. ಕಚೇರಿಯ ಕಚೇರಿಯ ಎಂ.ಡಿ ಸಹಿತ ವಿವಿಧ ಇಲಾಖೆಗಳು ಪೂರ್ಣ ಪ್ರಮಾಣದ ಸಿಬ್ಬಂದಿ ಆಲಮಟ್ಟಿಗೆ ಸ್ಥಳಾಂತರಿಸದೆ ಇರುವುದರಿಂದ ಅವಳಿ ಜಿಲ್ಲೆಯ ರೈತರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಜಮೀನು ಮುಳುಗಡೆ ಹೊಂದಿದ ರೈತರು ಹಾಗೂ ಇನ್ನಿತರ ಕೆಲಸಗಳಿಗೆ ಎಂ.ಡಿ ಯವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕು. ಇದರಿಂದ ಸಾವಿರಾರು ರೂಪಾಯಿಗಳ ಆರ್ಥಿಕ ಹೊರೆಯಾಗುವುದಲ್ಲದೆ ಸಮಯವು ವ್ಯರ್ಥವಾಗುತ್ತದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ಬೆಂಗಳೂರಿಗೆ ಅಲೆದಾಡಬೇಕಾಗುತ್ತದೆ. ಬೆಂಗಳೂರಿಗೆ ಹೋದರು ಎಂ.ಡಿ ಯವರು ಸಕಾಲಕ್ಕೆ ಸಿಗುತ್ತಾರೆಂಬುದು ನಿಶ್ಚಿತವಿಲ್ಲ. ಸಾವಿರಾರು ರೂಗಳನ್ನು ಖರ್ಚು ಮಾಡಿ ಬೆಂಗಳೂರಿಗೆ ಹೋದರು ಪ್ರಯೋಜನವಿಲ್ಲದಂತಾಗುತ್ತದೆ.

ಇದನ್ನೂ ಓದಿ: Vijayapura News | ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮ

K.B.J.N.L ಎಂ.ಡಿ ಕಚೇರಿಯ ಬಗ್ಗೆ ರಾದ್ಯಾಂತ ಇದ್ದರು ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ತಲೆಕೆಡಿಸಿಕೊಂಡಿಲ್ಲ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮೌನವಹಿಸಿದ್ದಾರೆ. ಮತ್ತೆ 2024 ರಂದು ಜಿಲ್ಲೆಯ ಹೋರಾಟಗಾರರೊಬ್ಬರು ಬೆಂಗಳೂರಿನ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕಿದ್ದರು. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ 30-10-2021ರಲ್ಲಿಯೆ ಕಚೇರಿ ಸಿಬ್ಬಂದಿ ಸ್ಥಳಾಂತರಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸುಳ್ಳು ಹೇಳಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕಣ್ಣಿಗೆ ಮಣ್ಣೆರೆಚ್ಚಿದ್ದಾರೆ.

ಆದ್ದರಿಂದ ಕರ್ನಾಟಕ ಉಚ್ಚ ನ್ಯಾಯಾಲಯ ಪುನಃ ಸುಮೋಟೋ ಕೇಸ್ ದಾಖಲಿಸಿಕೊಂಡು ಕೊರ್ಟ್ ಕಮೀಷನರ್ ನೇಮಿಸಿ ಆಲಮಟ್ಟಿಯ K.B.J.N.L ಎಂ.ಡಿ ಕಚೇರಿಯ ವಾಸ್ತವ ಸ್ಪಷ್ಟ ಚಿತ್ರಣವನ್ನು ನ್ಯಾಯಾಲಯ ತರಿಸಿಕೊಳ್ಳಬೇಕು. ಅಲ್ಲಿಯ ವಸ್ತು ಸ್ಥಿತಿ ಮನವರಿಕೆ ಆದ ನಂತರ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ನಿರಂತರವಾಗಿ ಎಂ.ಡಿ ಯವರು ಆಲಮಟ್ಟಿಯಲ್ಲಿಯೆ ಉಳಿದುಕೊಂಡು ಕಾರ್ಯ ನಿರ್ವಹಿಸಬೇಕು. ಪೂರ್ಣ ಪ್ರಮಾಣದ ಇಲಾಖೆಗಳನ್ನು ಹಾಗೂ ಸಿಬ್ಬಂದಿ ವರ್ಗ ಆಲಮಟ್ಟಿಯಲ್ಲಿಯೇ ಕಾರ್ಯನಿರ್ವಹಿಸುವಂತಾಗಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: Vijayapura News : ಮಾನಸಿಕ ಆರೋಗ್ಯ ದಿನ: ಅರವಿಂದ ಎಸ್. ಹಾಗರಗಿ

ಈ ಸಂದರ್ಭದಲ್ಲಿ ಪಾಂಡು ಹ್ಯಾಟಿ, ವಿಠ್ಠಲ ಬಿರಾದಾರ, ಮಂಜುನಾಥ ಬಡಿಗೇರಿ, ಪ್ರಹ್ಲಾದ ನಾಗರಾಳ, ಗುರುಲಿಂಗಪ್ಪ ಪಡಸಲಗಿ, ವಿಠ್ಠಲ ಬಿರಾದಾರ, ಲಂಕೇಶ ತಳವಾರ, ಶ್ರೀಶೈಲ ಮುಳಜಿ, ಮಾಚಪ್ಪ ಹೊರ್ತಿ, ಹೊನಕೇರೆಪ್ಪ ತೆಲಗಿ, ನಾಗಪ್ಪ ಬೂದಗೋಳಿ, ದಾನೇಶ ಅವಟಿ, ಸಿದ್ದನಗೌಡ ಬಿರಾದಾರ, ಮಲ್ಲಿಕಾರ್ಜುನ ಭೃಂಗಿಮಠ, ಎಸ್.ವಿ.ಪಾಟೀಲ, ಮಲಿಗೆಪ್ಪ ಸಾಸನೂರ ಇದ್ದರು.


LEAVE A REPLY

Please enter your comment!
Please enter your name here